Asianet Suvarna News Asianet Suvarna News

Gujarat Elections 2022: ಯಾವ್ಯಾವ ವಯಸ್ಸಿನ ಮತದಾರರ ಒಲವು ಯಾವ ಪಕ್ಷದತ್ತ ಇದೆ ನೋಡಿ..

Asianet News Gujarat Pre Poll Survey: ಗುಜರಾತ್‌ ವಿಧಾನಸಭೆಗೆ ಅಕ್ಟೋಬರ್‌ ತಿಂಗಳಲ್ಲಿ ಚುನಾವಣೆ ನಡೆದರೆ ಯಾವ್ಯಾವ ವಯಸ್ಸಿನ ಮತದಾರರ ಒಲವು ಯಾರ ಕಡೆಗೆ ಇರಲಿದೆ ಎಂಬ ಬಗ್ಗೆ ಏಷ್ಯಾನೆಟ್‌ ಸಿ  - ಫೋರ್‌ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ. ಎಲ್ಲ ವಯಸ್ಸಿನ ಮತದಾರರ ಒಲವು ಸಹ ಬಿಜೆಪಿಯತ್ತಲೇ ಇದ್ದರೆ, ಕಾಂಗ್ರೆಸ್‌ಗೆ ಎರಡನೇ ಸ್ಥಾನ ದೊರೆಯುವ ಸಾಧ್ಯತೆ ಇದೆ.  

if gujarat assembly elections are held in october age wise voting intention of people pre poll survey report ash
Author
First Published Oct 30, 2022, 4:40 PM IST

Asianet News Gujarat Pre Poll Survey: ಗುಜರಾತ್‌ ವಿಧಾನಸಭಾ ಚುನಾವಣೆ (Gujarat Assembly Elections) ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. ಚುನಾವಣೆಯ ದಿನಾಂಕ ಈವರೆಗೆ ಅಂತಿಮಗೊಳ್ಳದಿದ್ದರೂ, ಮುಂಬರುವ ಚುನಾವಣೆ (Election) ಹಲವು ಕಾರಣಗಳಿಂದ ಪ್ರಮುಖ ಎನಿಸಿಕೊಂಡಿದೆ. ಈ ಬಾರಿ ಎಎಪಿ (AAP) ಪ್ರಮುಖ ಸ್ಪರ್ಧಿ ಎನಿಸಿಕೊಂಡಿದ್ದು, ಆಡಳಿತಾರೂಢ ಬಿಜೆಪಿಗೆ (BJP) ತುರುಸಿನ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈಗ, ಏಷ್ಯಾನೆಟ್‌ ಹಾಗೂ ಸಿ - ಫೋರ್‌ ಗುಜರಾತ್‌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಸದ್ಯ, ಚುನಾವಣೆ ನಡೆದರೆ ಬಿಜೆಪಿಗೆ ಪ್ರಚಂಡ ಬಹುಮತದ ಗೆಲುವಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಇನ್ನು, ಈ ಚುನಾವಣೆಯಲ್ಲಿ ಯಾವ್ಯಾವ ವಯಸ್ಸಿನ ಮತದಾರ (Age Voters) ವರ್ಗದವರು ಯಾವ್ಯಾವ ಪಕ್ಷಕ್ಕೆ ಒಲವು ತೋರಿಸುತ್ತಾರೆ ಎಂಬ ಬಗ್ಗೆ ವಿವರ ಇಲ್ಲಿದೆ..
 
ಸದ್ಯ, ಗುಜರಾತ್‌ ವಿಧಾನಸಭೆಗೆ ಚುನಾವಣೆ ನಡೆದರೆ ಅಕ್ಟೋಬರ್‌ ತಿಂಗಳ ಮಾಹಿತಿ ಪ್ರಕಾರ, ಯಾವ್ಯಾವ ವಯಸ್ಸಿನ ಮತದಾರರ ಒಲವು ಯಾರ ಕಡೆಗೆ ಇರಲಿದೆ ಅಂತ ತಿಳ್ಕೋಬೇಕಾ.. 18 - 25 ವರ್ಷ ವಯಸ್ಸಿನ ಮತದಾರರು ಶೇ. 46 ರಷ್ಟು ಜನತೆ ಬಿಜೆಪಿಯತ್ತ ತಮ್ಮ ಒಲವು ತೋರಿಸಿದ್ದರೆ, ಕಾಂಗ್ರೆಸ್‌ನತ್ತ (Congress) ಶೇ. 29 ರಷ್ಟು ಜನತೆ ಬೆಂಬಲ ತೋರಿಸಿದ್ದಾರೆ, ಇನ್ನೊಂದೆಡೆ ಎಎಪಿ ಪರ ಶೇ. 18 ರಷ್ಟು ಜನತೆ ಮತ ಹಾಕಲು ಮುಂದಾಗಿದ್ದರೆ, ಸ್ವತಂತ್ರ ಅಭ್ಯರ್ಥಿ (Independent Candidate) ಹಾಗೂ ಇತರರ ಪರ ಶೇ. 7 ರಷ್ಟು ಜನತೆ ಮತ ಹಾಕುವುದಾಗಿ ಸರ್ವೇಗೆ ಹೇಳಿದ್ದಾರೆ.

ಇದನ್ನು ಓದಿ: Gujarat Election 2022 Asianet Survey: ಮತ್ತೆ ಅರಳಲಿದೆ ಕಮಲ, ಕುಗ್ಗಿದೆ ಕೈ ಬಲ, ಆಪ್‌ಗಿಲ್ಲ ಬೆಂಬಲ

ಇದೇ ರೀತಿ, 26 - 35 ವಯಸ್ಸಿನ ಮತದಾರರ ಪೈಕಿ ಶೇ. 49 ರಷ್ಟು ಜನರು ಕಮಲ ಚಿಹ್ನೆಗೆ ಮತ ಹಾಕುವುದಾಗಿ ಒಲವು ತೋರಿಸಿದ್ದರೆ, ಕೈ ಪಕ್ಷದ ಪರ ಶೇ. 30 ಜನರು ಮತ ಹಾಕುವ ಬಗ್ಗೆ ಹೇಳಿದ್ದಾರೆ. ಹಾಗೂ, ಪೊರಕೆ ಚಿಹ್ನೆಯ ಪರವಾಗಿ ಶೇ. 17 ರಷ್ಟು ಜನತೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಹಾಗೆ, ಸ್ವತಂತ್ರ ಅಭ್ಯರ್ಥಿ ಹಾಗೂ ಇತರರ ಪರ ಶೇ. 4 ರಷ್ಟು ಜನತೆ ಮಾತ್ರ ಬೆಂಬಲ ಸೂಚಿಸುತ್ತಿದ್ದಾರೆ. 

ಈ ಮಧ್ಯೆ, 36 - 50 ವರ್ಷದ ಮತದಾರ ವರ್ಗದವರ ಪೈಕಿಯೂ ಹೆಚ್ಚಿನ ಒಲವು ಸಹ ಕಮಲ ಪಕ್ಷಕ್ಕೇ ಇದೆ. ಕಮಲ ಪಕ್ಷದ ಪರ ಶೇ. 47 ಜನರು ಮತ ಹಾಕುವುದಾಗಿ ಸೂಚಿಸಿದ್ದರೆ, ಹಳೆಯ ಪಕ್ಷ ಕಾಂಗ್ರೆಸ್‌ ಪರ ಶೇ. 32 ರಷ್ಟು ಜನರು ಒಲವು ತೋರಿಸಿದ್ದಾರೆ. ಇನ್ನು, ಎಎಪಿ ಶೇ. 5 ರಷ್ಟು ಜನರು ಒಲವು ತೋರಿಸಿದ್ದು, ಇತರೆ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಪರ ಶೇ. 5 ರಷ್ಟು ಜನರು ಮತ ಹಾಕುವುದಾಗಿ ಹೇಳುತ್ತಿದ್ದಾರೆ ಎಂದು ಏಷ್ಯಾನೆಟ್ ಹಾಗೂ ಸಿ - ಫೋರ್‌ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. 

ಇದನ್ನೂ ಓದಿ: GUJARAT ASSEMBLY ELECTION 2022: ಬಿಜೆಪಿಗೆ ಪಟೇಲರೇ ಶಕ್ತಿ, ಕಾಂಗ್ರೆಸ್‌ಗೆ ಮುಸ್ಲಿಮರ ಬಲ!

ಇನ್ನು, ಗಾಂಧಿ ನಾಡಿನ 50 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಮತದಾರ ಪ್ರಭುಗಳ ಒಲವು ಯಾರತ್ತ ಇದೆ ಎಂಬ ಬಗ್ಗೆ ಗೊಂದಲವೇ..? ಅವರ ಪೈಕಿಯೂ ಹೆಚ್ಚಿನ ಒಲವು ಬಿಜೆಪಿ ಪರವೇ ಇದೆ. ಶೇ. 50 ರಷ್ಟು ಜನರು ಬಿಜೆಪಿಗೆ ಬೆಂಬಲ ಸೂಚಿಸಿದ್ದರೆ, ಕಾಂಗ್ರೆಸ್‌ ಪರ ಶೇ. 33 ರಷ್ಟು ಜನತೆ ಮತ ಹಾಕುವುದಾಗಿ ಹೇಳಿದ್ದಾರೆ. ಅದೇ ರೀತಿ, ಎಎಪಿಯ ಪೊರಕೆ ಚಿಹ್ನೆಗೆ ಶೇ. 13 ರಷ್ಟು ಜನತೆ ಒಲವು ತೋರಿದ್ದರೆ, ಸ್ವತಂತ್ರ ಅಭ್ಯರ್ಥಿಗಳು ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳಿಗೆ ಶೇ. 4 ರಷ್ಟು ಮತದಾರರು ಮಾತ್ರ ಮತ ಹಾಕುವ ಬಗ್ಗೆ ಹೇಳಿಕೊಂಡಿದ್ದಾರೆ. 

Follow Us:
Download App:
  • android
  • ios