ತಮ್ಮ ಸೋಲಿಗೂ ಒಳಒಪ್ಪಂದ ಕಾರಣ, ರಾಜಿ ರಾಜಕೀಯದಿಂದಾಗಿ ಅರ್ಕಾವತಿ ಬಗ್ಗೆ ತನಿಖೆ ಆಗಲಿಲ್ಲ, ತಪ್ಪು ಮಾಡಿದವರನ್ನು ಬೀದಿಯಲ್ಲಿ ನಿಲ್ಲಿಸಿ ನಾವು ರಾಜಕಾರಣ ಮಾಡಬೇಕಿತ್ತು, ಆಗ ನಾವು ತಪ್ಪಿತಸ್ಥರ ಸಾಲಿಗೆ ಸೇರುತ್ತಿರಲಿಲ್ಲ, ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ, ಅರ್ಕಾವತಿ ಹಗರಣ ಬಗ್ಗೆ ತನಿಖೆ ಒತ್ತಾಯಿಸಿದ್ದೆವು. ಆದರೆ ಅದು ಆಗಲಿಲ್ಲ, ಸೌರ ವಿದ್ಯುತ್ ಪ್ರಕರಣದಲ್ಲಿ ಕ್ರಮ ಜರುಗಿಸಿದ್ದರೆ ಸೋಲುತ್ತಿರಲಿಲ್ಲ: ಸಿ.ಟಿ.ರವಿ
ನವದೆಹಲಿ(ಜೂ.10): ಕೆಲವು ನಾಯಕರ ರಾಜಿ ರಾಜಕಾರಣದಿಂದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಈ ಮೂಲಕ ತಮ್ಮ ಸೋಲಿಗೂ ಒಳಒಪ್ಪಂದವೇ ಕಾರಣ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ ನಮ್ಮಲ್ಲೂ ರಾಜಿ, ಹೊಂದಾಣಿಕೆ ರಾಜಕಾರಣ ಮಾಡದೆ ಬೀದಿಯಲ್ಲಿ ನಿಲ್ಲಿಸಿ ರಾಜಕಾರಣ ಮಾಡಿದ್ದರೆ ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸ್ವಪಕ್ಷೀಯರ ವಿರುದ್ಧ ಟೀಕಾಪ್ರಹಾರ ನಡೆಸಿದರು.
ತಪ್ಪು ಮಾಡಿದವರನ್ನು ಬೀದಿಯಲ್ಲಿ ನಿಲ್ಲಿಸಿ ನಾವು ರಾಜಕಾರಣ ಮಾಡಬೇಕಿತ್ತು. ಆಗ ನಾವು ತಪಿತಸ್ಥರ ಸಾಲಿಗೆ ನಿಲ್ಲುತ್ತಿರಲಿಲ್ಲ. ಕೆಲವರ ಹೊಂದಾಣಿಕೆ ಮತ್ತು ರಾಜಿ ರಾಜಕೀಯದಿಂದ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಗಂಭೀರ ಆರೋಪ ಮಾಡಿದರು.
ಚಿಕ್ಕಮಗಳೂರು: ಮತ್ತೊಮ್ಮೆ ಸಿ.ಟಿ.ರವಿಗೆ ಶಾಕ್ ಕೊಟ್ಟ ಶಾಸಕ ಹೆಚ್.ಡಿ. ತಮ್ಮಯ್ಯ
ನಾವು ಹಿಂದೆಯೇ ಅರ್ಕಾವತಿ ಹಗರಣವನ್ನು ತನಿಖೆ ಮಾಡಿ, ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದೆವು. ಆದರೆ ರಾಜಿ ರಾಜಕಾರಣದಿಂದ ಅದು ಸಾಧ್ಯವಾಗಲಿಲ್ಲ. ಸೌರ ವಿದ್ಯುತ್ ಪ್ರಕರಣದಲ್ಲಿ ಕ್ರಮ ಜರುಗಿಸಿದ್ದರೆ ನಾವು ಈಗ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿ ವಿರುದ್ಧ ಅವರ ಜತೆಗೇ ಇದ್ದ ಎಚ್.ಡಿ.ತಮ್ಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ತಮ್ಮಯ್ಯ ಅವರು ಅಚ್ಚರಿ ರೀತಿಯಲ್ಲಿ ಗೆದ್ದಿದ್ದರು.
ಕಾಂಗ್ರೆಸ್ ಮಧ ಇಳಿಸಲು ಬಹಳ ಕಾಲ ಬೇಕಾಗುವುದಿಲ್ಲ: ಸಿ.ಟಿ.ರವಿ
ಇಷ್ಟೇ ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಜೆಡಿಎಸ್‌ನ ಮಾಜಿ ಶಾಸಕ ಭೋಜೇಗೌಡ ಕೂಡ ಆಕ್ರೋಶ ಹೊರಹಾಕಿದ್ದರು. ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್‌ಗೆ ಬೆಂಬಲವನ್ನೂ ನೀಡಿದ್ದರು.
ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಹೊಂದಾಣಿಕೆ ರಾಜಕಾರಣ ಮಾಡದಿದ್ದರೆ ಇಂದು ಪಕ್ಷ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
