ನಾನು ಬಾಂಬೆ ಬಾಯ್ಸ್‌ ಟೀಮ್‌ ಅಲ್ಲ, ಬಿಎಸ್‌ವೈ ಟೀಮ್‌: ಸಂಸದ ಉಮೇಶ್‌ ಜಾಧವ್

‘ನಾನು ಬಾಂಬೆ ಬಾಯ್ಸ್‌ ಟೀಮ್‌ ಅಲ್ಲ, ನಮ್ಮದೇನಿದ್ದರೂ ಯಡಿಯೂರಪ್ಪ ಟೀಮ್‌, ನಾನು ಯಾವ ಕಾರಣಕ್ಕೂ ಕಾಂಗ್ರೆಸ್‌ಗೆ ವಾಪಸ್‌ ಹೋಗೋದಿಲ್ಲ’ ಎಂದು ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ ಹೇಳಿದ್ದಾರೆ. 

I am not a Bombay Boys team Says Mp Umesh Jadhav gvd

ಕಲಬುರಗಿ (ಆ.21): ‘ನಾನು ಬಾಂಬೆ ಬಾಯ್ಸ್‌ ಟೀಮ್‌ ಅಲ್ಲ, ನಮ್ಮದೇನಿದ್ದರೂ ಯಡಿಯೂರಪ್ಪ ಟೀಮ್‌, ನಾನು ಯಾವ ಕಾರಣಕ್ಕೂ ಕಾಂಗ್ರೆಸ್‌ಗೆ ವಾಪಸ್‌ ಹೋಗೋದಿಲ್ಲ’ ಎಂದು ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರ​ರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್‌ನ ಘರ್‌ ವಾಪ್ಸಿ ಚರ್ಚೆ ವಿಚಾರವಾಗಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಸಂಸದರು, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಘರ್‌ ವಾಪ್ಸಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೆನೆಂದು ಯಾರೂ ಹೇಳಿಲ್ಲ. ನನಗೂ ಯಾವುದೇ ಕರೆ ಬಂದಿಲ್ಲ ಎಂದರು.

ಎಸ್‌.ಟಿ.ಸೋಮಶೇಖರ್‌ ಅಸಮಾಧಾನ ವಿಚಾರವಾಗಿ ಮಾತನಾಡಿ, ರಾಜಕೀಯದಲ್ಲಿ ಒಂದು ಪಾರ್ಟಿಯಿಂದ ಇನ್ನೊಂದು ಪಾರ್ಟಿಗೆ ಸೇರಿದಾಗ ಹಳೆಯ ಕಾರ್ಯಕರ್ತರ ಮಧ್ಯೆ ಅಸಮಾಧಾನ ಇರುತ್ತೆ, ಅದೆಲ್ಲಾ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಯಡಿಯೂರಪ್ಪ, ಬೊಮ್ಮಾಯಿಯವರು ಸೋಮಶೇಖರ್‌ ಜೊತೆ ಮಾತನಾಡಿದ್ದಾರೆ. ಅವರು ಪಾರ್ಟಿ ಬಿಟ್ಟು ಹೋಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ 25 ಸೀಟ್‌ ಗೆಲ್ಲುವ ವಿಶ್ವಾಸ ಇದೆ ಎಂದರು.

ಪಂಚಮಸಾಲಿ ಮೀಸಲಾತಿಗೆ ಮತ್ತೆ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಹೆಬ್ಬಾರ್‌ ನಡೆಯ ಬಗ್ಗೆ ಮೂಡಿದ ಕುತೂಹಲ: ಬಾಂಬೆ ಬಾಯ್ಸ್ ಮರಳಿ ಕಾಂಗ್ರೆಸ್ ಸೇರುವ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಹೆಸರೂ ಮುನ್ನೆಲೆಗೆ ಬಂದಿದೆ. ಹೆಬ್ಬಾರ್ ನಡೆಯ ಬಗ್ಗೆ ಈಗ ಜಿಲ್ಲೆಯಾದ್ಯಂತ ಭಾರಿ ಕುತೂಹಲ ಉಂಟಾಗಿದೆ. ಹಾಗಂತ ಸ್ವತಃ ಶಿವರಾಮ ಹೆಬ್ಬಾರ್ ಈ ಸುದ್ದಿಯನ್ನು ಸ್ಪಷ್ಟವಾಗಿ ನಿರಾಕರಿಸುವುದೂ ಇಲ್ಲ. ಯಾವುದೇ ಕಾರಣಕ್ಕೆ ಬಿಜೆಪಿ ತೊರೆಯುವುದಿಲ್ಲ ಎಂದು ಖಡಕ್ ಆಗಿ ಹೇಳುವುದೂ ಇಲ್ಲ. ಇದು ಶಿವರಾಮ ಹೆಬ್ಬಾರ್ ಅವರ ಮೇಲೆ ಇನ್ನಷ್ಟು ಅನುಮಾನಗಳು ಮೂಡಲು ಕಾರಣವಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿಗೆ ಬಂದ 17 ಶಾಸಕರು ಭಾರಿ ಮಹತ್ವಾಕಾಂಕ್ಷೆ ಹೊಂದಿರುವುದೂ ಸುಳ್ಳಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಬಾಂಬೆ ಬಾಯ್ಸ್ ನ ಬಹುತೇಕ ಶಾಸಕರು ಸಚಿವರಾಗಿದ್ದು ಇದಕ್ಕೆ ಪುಷ್ಟಿ ನೀಡುತ್ತದೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಇವರು ಈಗ ಮಾಜಿ ಸಚಿವರಾಗಿದ್ದಾರೆ. ಕೆಲವರು ಮಾಜಿ ಶಾಸಕರೂ ಆಗಿದ್ದಾರೆ. ಈಗ ಅಧಿಕಾರ ಇಲ್ಲದೆ ಇರುವುದರಿಂದ ಇವರಲ್ಲಿ ಚಡಪಡಿಕೆ ಆರಂಭವಾಗಿರುವುದಂತೂ ಹೌದು. ಆಡಳಿತ ಪಕ್ಷಕ್ಕೆ ಹೋದರೆ ಕ್ಷೇತ್ರದ ಅಭಿವೃದ್ಧಿಗೆ ಹಣವನ್ನಾದರೂ ತರಬಹುದು ಎಂಬ ನಿರೀಕ್ಷೆಯೂ ಇವರಲ್ಲಿ ಇರಬಹುದು.

ಕಾಂಗ್ರೆಸ್‌ ಸರ್ಕಾರದಿಂದ ಜನರಿಗೆ ಬದುಕುವ ಭರವಸೆ: ಶಾಸಕ ರಾಜು ಕಾಗೆ

ಕಾಂಗ್ರೆಸ್ ಗೆ ಯಾರೇ ಬಂದರೂ ಹಿಂದಿನ ಬೇಂಚ್ ನಲ್ಲಿ ಕುಳಿತುಕೊಳ್ಳಬೇಕು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಮುಂದಿನ ಸಾಲಿನಲ್ಲಿದ್ದ ಇವರು ಕಾಂಗ್ರೆಸ್ ಗೆ ಹೋಗಿ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಮನಸ್ಸು ಮಾಡಿಯಾರೆ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ಜೊತೆಗೆ ಹೆಬ್ಬಾರ್ ಈ ಬಾರಿ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಮತ್ತೆ ಕಾಂಗ್ರೆಸ್ ಸೇರಿ ಚುನಾವಣೆ ಎದುರಿಸುವುದು ಸುಲಭವಲ್ಲ. ಕಾಂಗ್ರೆಸ್ ನ ಗ್ಯಾರಂಟಿಯೂ ಈಗ ಕೆಲಸ ಮಾಡಲಾರದು. ಏಕೆಂದರೆ ಯಾವುದೇ ಪಕ್ಷದ ಶಾಸಕರಿದ್ದರೂ ಗ್ಯಾರಂಟಿಯ ಲಾಭ ಜನತೆಗೆ ಸಿಕ್ಕೇಸಿಗುತ್ತದೆ. ಸದ್ಯಕ್ಕೆ ಶಿವರಾಮ ಹೆಬ್ಬಾರ್ ಅವರು ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಮುಂದಿನ ಬೆಳವಣಿಗೆಯ ಬಗ್ಗೆ ಭಾರಿ ಕುತೂಹಲ ಉಂಟಾಗಿದೆ.

Latest Videos
Follow Us:
Download App:
  • android
  • ios