Asianet Suvarna News Asianet Suvarna News

ಪಂಚಮಸಾಲಿ ಮೀಸಲಾತಿಗೆ ಮತ್ತೆ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯಕ್ಕಾಗಿ ಮತ್ತೊಂದು ಸುತ್ತಿನ ಹೋರಾಟ ಶುರು ಮಾಡುತ್ತೇವೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Fight again for Panchamasali reservation says BasavaJaya Mruthyunjaya Swamiji gvd
Author
First Published Aug 21, 2023, 7:11 PM IST

ಬಾಗಲಕೋಟೆ (ಆ.21): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯಕ್ಕಾಗಿ ಮತ್ತೊಂದು ಸುತ್ತಿನ ಹೋರಾಟ ಶುರು ಮಾಡುತ್ತೇವೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆ ಕರೆದು ಚರ್ಚಿಸಿ ಆದಷ್ಟುಬೇಗ ಚಳವಳಿ ದಿನಾಂಕ ನಿಗದಿ ಪಡಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಇಷ್ಠಲಿಂಗ ಪೂಜೆ ಜೊತೆ ಚಳವಳಿಯನ್ನೂ ನಡೆಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟ ಮಾಡಬೇಕು? ಎಂಬುದರ ಕುರಿತು ಎಲ್ಲ ಜಿಲ್ಲೆಗಳಲ್ಲೂ ಸಭೆ ನಡೆಸಲಾಗುತ್ತಿದೆ. 

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಕಳೆದ ಸರ್ಕಾರದ ಅವಧಿಯಲ್ಲಿ ಹೋರಾಟ ಅಂತಿಮ ಹಂತಕ್ಕೆ ತಲುಪಿತ್ತು. ಆದರೆ, ಈಗ ಸರ್ಕಾರ ಬದಲಾಗಿದ್ದು, ಈಗಿನ ಮುಖ್ಯಮಂತ್ರಿ ಅವರನ್ನು ಸಮುದಾಯದ ಶಾಸಕರ ಜತೆ ಭೇಟಿ ಮಾಡಿ ಮನವಿ ಮಾಡಿದ್ದೇವೆ. ತಮ್ಮ ಅವಧಿಯಲ್ಲಿ ಸಮಾಜಕ್ಕೆ ನ್ಯಾಯ ಸಿಗಲಿ ಎಂದು ಕೇಳಿದ್ದೇವೆ ಎಂದರು. ಬಜೆಟ್‌ ಅಧಿವೇಶನ ಮುಗಿದ ಬಳಿಕ ಮೀಸಲಾತಿಗೆ ಸ್ಪಷ್ಟತೆ ನೀಡುವ ಬಗ್ಗೆ ಚರ್ಚಿಸುತ್ತೇನೆ ಎಂದು ಸಿಎಂ ಹೇಳಿದ್ದರು. ಈಗ ಮತ್ತೊಮ್ಮೆ ಸಿಎಂ ಅವರಲ್ಲಿ ಮನವಿ ಮಾಡುತ್ತೇವೆ. ಸಂವಿಧಾನ ತಜ್ಞರ ಹಾಗೂ ಕಾನೂನು ತಜ್ಞರ ಸಭೆ ಕರೆದು ಚರ್ಚಿಸಲಿ ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರದಿಂದ ಜನರಿಗೆ ಬದುಕುವ ಭರವಸೆ: ಶಾಸಕ ರಾಜು ಕಾಗೆ

ಕಾಶಪ್ಪನವರ್‌, ಕುಲಕರ್ಣಿಗೆ ಸಚಿವ ಸ್ಥಾನ ನೀಡಲಿ: ಪಂಚಮಸಾಲಿ ಸಮಾಜದ ಶಾಸಕರಾದ ವಿಜಯಾನಂದ ಕಾಶಪ್ಪನವರ್‌ ಮತ್ತು ವಿನಯ್‌ ಕುಲಕರ್ಣಿ ಅವರಿಗೆ ಮುಂದಿನ ದಿನಗಳಲ್ಲಾದರೂ ಸಚಿವ ಸ್ಥಾನ ಲಭಿಸಬೇಕು ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು. ಸಮಾಜಕ್ಕಾಗಿ ದುಡಿದವರಿಗೆ ಸಚಿವ ಸ್ಥಾನ ಸಿಗಲೆನ್ನುವುದು ಜನರ ಅಪೇಕ್ಷೆಯಾಗಿದೆ. ನಾವೂ ಸಹ ಪಕ್ಷದ ವರಿಷ್ಠರಿಗೆ ಒತ್ತಡ ಹಾಕಿದ್ದೆವು. 

ಕೊಡಗು-ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಯಾರಿದ್ದಾರೆ?: ಪ್ರತಾಪ್‌ ಸಿಂಹ

ಸಮಾಜದ ಮುಂಚೂಣಿ ಹೋರಾಟಗಾರ ವಿಜಯಾನಂದ ಕಾಶಪ್ಪನವರ್‌ ಮತ್ತು ವಿನಯ್‌ ಕುಲಕರ್ಣಿ, ಹೆಬ್ಬಾಳಕರ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದು, ಮೊದಲ ಹಂತದಲ್ಲಿ ಲಕ್ಷ್ಮಿ ಹೆಬ್ಬಾಳಕರ್‌ ಹಾಗೂ ಶಿವಾನಂದ ಪಾಟೀಲ್‌ ಅವರಿಗೆ ಕೊಟ್ಟಿದ್ದಾರೆ. ಸಮಾಜದ ಅಪೇಕ್ಷೆಯಂತೆ ಕಾಶಪ್ಪನವರ್‌ ಮತ್ತು ಕುಲಕರ್ಣಿ ಅವರಿಗೂ ಕೊಡಬೇಕಿತ್ತು. ಮುಂದಿನ ದಿನಗಳಲ್ಲಿ ಅವಕಾಶ ನೀಡುತ್ತೇವೆ ಎಂಬ ಭರವಸೆ ಸಿಎಂ, ಡಿಸಿಎಂ ಅವರಿಂದ ಸಿಕ್ಕಿದೆ ಎಂದು ಸ್ವಾಮೀಜಿ ಹೇಳಿದರು.

Follow Us:
Download App:
  • android
  • ios