Asianet Suvarna News Asianet Suvarna News

'ಸಿಎಂ ಇಬ್ರಾಹಿಂಗೂ ಹಣ ಕೊಟ್ಟಿದ್ದೆ'; ಎಚ್‌ಡಿಕೆ ಹಣ ಪಡೆದಿದ್ದಾರೆ ಎಂಬ ಇಬ್ರಾಹಿಂ ಆರೋಪಕ್ಕೆ ಶರವಣ ತಿರುಗೇಟು!

ವಿಧಾನಸಭಾ ಚುನಾವಣೆ ವೇಳೆ ಸಹಾಯದ ರೂಪದಲ್ಲಿ ಹಣ ಪಡೆಯುವುದು ಸಾಮಾನ್ಯವಾಗಿದ್ದು, ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಹ ಅವರ ಮಗನ ಚುನಾವಣೆ ವೇಳೆ ಹಣ ಪಡೆದಿಲ್ಲವೇ? ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ತಿರುಗೇಟು ನೀಡಿದ್ದಾರೆ.

I also gave money to CM Ibrahim TA Sharavan hit back at bengaluru rav
Author
First Published Nov 22, 2023, 4:57 AM IST

ಬೆಂಗಳೂರು (ನ.22): ವಿಧಾನಸಭಾ ಚುನಾವಣೆ ವೇಳೆ ಸಹಾಯದ ರೂಪದಲ್ಲಿ ಹಣ ಪಡೆಯುವುದು ಸಾಮಾನ್ಯವಾಗಿದ್ದು, ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಹ ಅವರ ಮಗನ ಚುನಾವಣೆ ವೇಳೆ ಹಣ ಪಡೆದಿಲ್ಲವೇ? ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ತಿರುಗೇಟು ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಇಬ್ರಾಹಿಂ(CM Ibrahim) ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಬೇರೆ ಪಕ್ಷದಿಂದ ಬಂದವನಲ್ಲ. ನನ್ನ ರಕ್ತದಲ್ಲಿಯೇ ಜೆಡಿಎಸ್‌ ಇದೆ. ಚುನಾವಣೆ ಸಮಯದಲ್ಲಿ ಸಹಾಯ ರೂಪದಲ್ಲಿ ಹಣ ಪಡೆಯುವುದು ಸಾಮಾನ್ಯ. ಇಬ್ರಾಹಿಂ ಅವರ ಮಗನ ಚುನಾವಣೆಗಾಗಿ ಪಡೆದಿರಲಿಲ್ಲವೇ? ನನ್ನ ಬಳಿಯೇ ಮಗನ ಚುನಾವಣೆಗೆ ಹಣ ಪಡೆದಿದ್ದರು. ಜೆ.ಪಿ.ಭವನ ನಿರ್ಮಿಸುವಾಗ ನಾನೇ ಮೊದಲು 10 ಲಕ್ಷ ರು. ದೇಣಿಗೆ ಕೊಟ್ಟಿದ್ದೆ. ಪಕ್ಷ ಎಂದ ಮೇಲೆ ಪರಸ್ಪರ ಸಹಾಯ ಸಾಮಾನ್ಯ ಎಂದು ಹೇಳಿದರು.

 

ಟಿಎ ಶರವಣ ಆಯ್ಕೆಗೆ ಹಣ ಪಡೆದಿಲ್ಲ ಎಂದು ಎಚ್‌ಡಿಕೆ ಪ್ರಮಾಣ ಮಾಡಲಿ: ಇಬ್ರಾಹಿಂ ಸವಾಲು

ಸರ್ಕಾರದ ನಿರ್ಲಕ್ಷ್ಯದಿಂದ

ಸಾವು: ಬೆಸ್ಕಾಂ ನಿರ್ಲಕ್ಷ್ಯದ ಪರಿಣಾಮ ತಾಯಿ ಮತ್ತು ಮಗು ಎನ್ನೆಕ್ನಿಕ್ ತಂತಿಗೆ ಸಿಲುಕಿ ಸಾವನ್ನಪ್ಪಿರುವ ಅಮಾನುಷ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೇ ಸಾವಿಗೆ ಕಾರಣ. ಆದ್ದರಿಂದ ಅವರ ಮೇಲೆ ಎಫ್‌ಐಆರ್ ಹಾಕಬೇಕು. ಯಾರೋ ಮಾಡಿದ ಸಣ್ಣ ತಪ್ಪಿಗೆ ಅಮಾಯಕರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡಿ ವಿದ್ಯುತ್ ಕಳ್ಳತನದ ಆರೋಪ ಹಾಕಿ ದಂಡ ಕಟ್ಟಿಸಿಕೊಂಡ ಈ ಸರ್ಕಾರ, ಹಾಡಹಗಲೇ ತಾಯಿ, ಕಂದಮ್ಮ ಸಾವಿಗೆ ಕಾರಣವಾಗಿದೆ ಎಂದರು.

ಪಕ್ಷ ವಿರೋಧಿ ಚಟುವಟಿಕೆ; ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹಿಂ ಅಮಾನತ್ತು!

ಮೃತ ಕುಟುಂಬಗಳಿಗೆ ಐದು ಲಕ್ಷ ರು. ಪರಿಹಾರ ಕೊಟ್ಟು ಕೈತೊಳೆದುಕೊಂಡರೆ ಸಾಕೆ? ಮೃತ ಜೀವಗಳು ವಾಪಸ್ ಬರುತ್ತದೆಯೇ? ಎರಡು ಅಮೂಲ್ಯ ಪ್ರಾಣಗಳನ್ನು ಕಳೆದುಕೊಂಡ ಕುಟುಂಬಕ್ಕೆ ತಲಾ 25ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಕುಮಾರಸ್ವಾಮಿ ಅವರನ್ನು ಪ್ರತಿನಿತ್ಯ ಟೀಕಿಸುತ್ತ, ಬೆಳಗ್ಗೆಯಿಂದ ಸಂಜೆಯವರೆಗೆ ಅವರ ನಾಮ ಸ್ಮರಣೆ ಮಾಡುವುದೇ ಈ ಸರ್ಕಾರದ ಕೆಲಸವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮರ್ಥ ಪ್ರತಿಪಕ್ಷ ನಾಯಕರಾಗಿ ಕುಮಾರಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ವಿರುದ್ಧ ಕಾಂಗ್ರೆಸ್ ನಾಯ ಕರು ವ್ಯಕ್ತಿಗತ ದ್ವೇಷದ ರಾಜಕೀಯ ಮಾತಾ ಡುತ್ತಿದ್ದಾರೆ. ಬರುವ ದಿನಗಳಲ್ಲಿ ರಾಜ್ಯದ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Follow Us:
Download App:
  • android
  • ios