Asianet Suvarna News Asianet Suvarna News

ಟಿಎ ಶರವಣ ಆಯ್ಕೆಗೆ ಹಣ ಪಡೆದಿಲ್ಲ ಎಂದು ಎಚ್‌ಡಿಕೆ ಪ್ರಮಾಣ ಮಾಡಲಿ: ಇಬ್ರಾಹಿಂ ಸವಾಲು

ಟಿ.ಎ.ಶರವಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ಮಾಡಿ ಹೇಳಲಿ ಎಂದು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದ್ದಾರೆ.

CM Ibrahim accused HDK of receiving money from TA Saravan at bengaluru rav
Author
First Published Nov 21, 2023, 4:25 AM IST

ಬೆಂಗಳೂರು (ನ.21) :  ಟಿ.ಎ.ಶರವಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ಮಾಡಿ ಹೇಳಲಿ ಎಂದು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದ್ದಾರೆ.

ಅಲ್ಲದೆ, ಧೈರ್ಯ ಇದ್ದರೆ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ ಎಂದೂ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರವಣ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ‌ ಅಂತ ಮಗನ ತಲೆ ಮೇಲೆ ಕೈ ಇಟ್ಟು ಆಣೆ ಮಾಡ್ತೀರಾ ಕುಮಾರಸ್ವಾಮಿ ಅವರೇ. ಧೈರ್ಯ ಇದೆಯಾ ನಿಮಗೆ ಆಣೆ ಮಾಡೋಕೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

 

ಪಕ್ಷ ವಿರೋಧಿ ಚಟುವಟಿಕೆ; ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹಿಂ ಅಮಾನತ್ತು!

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ. ಅಶೋಕ್ ಪ್ರತಿಪಕ್ಷದ ನಾಯಕ. ಅವರ ಮುಂದೆ ಹೋಗಿ ನಿಲ್ಲುತ್ತೀರಾ? ಎರಡು ಸೀಟಿಗೋಸ್ಕರ ಅಮಿತ್ ಶಾ ಮುಂದೆ ದೇವೇಗೌಡ ಹೋಗಿ ನಿಂತುಕೊಳ್ಳಬೇಕಿತ್ತಾ? ತೆನೆ ಹೊತ್ತ ಮಹಿಳೆಯನ್ನು ಯಾರ ಯಾರ ಹತ್ತಿರ ಕರೆದುಕೊಂಡು ಹೋಗ್ತೀರಿ? ಚನ್ನಪಟ್ಟಣದಲ್ಲಿ 20 ಸಾವಿರ ಮುಸ್ಲಿಂ ಮತ ಪಡೆದು ಗೆದ್ದಿರಲ್ಲ, ಅದು ಯಾರ ಮುಖ ನೋಡಿ ಬಂತು ಎಂದು ಹರಿಹಾಯ್ದರು.

ದೇವೇಗೌಡರು ಒಪ್ಪದಿದ್ದರೆ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಮಾಡುತ್ತೇವೆ. ಶಾಸಕರ ಜೊತೆಗೂ ಮಾತಾಡುತ್ತಿದ್ದೇನೆ. ನಾನು ಅಮಾನತು ಒಪ್ಪುವುದಿಲ್ಲ. ತಾಳಿ ಕಟ್ಟಿರೋ ಹೆಂಡತಿ ಅಲ್ಲ ನಾನು ಹೋಗು ಅಂದ ಕೂಡಲೇ ಹೋಗೋಕೆ ಎಂದು ತಿಳಿಸಿದರು.

 

'3 ಸೀಟಿಗಾಗಿ ಅಮಿತ್‌ ಶಾ ಮುಂದೆ ನಿಮ್ಮ ಮಗ ನಿಮ್ಮನ್ನ ಅಡ ಇಡ್ತಿದ್ದಾರೆ..' ದೇವೇಗೌಡರಿಗೆ ಇಬ್ರಾಹಿಂ ಎಚ್ಚರಿಕೆ!

Follow Us:
Download App:
  • android
  • ios