Asianet Suvarna News Asianet Suvarna News

ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿದ್ರೂ ಗೆಲುವು ಖಚಿತ: ಎಚ್‌.ಎಂ.ರೇವಣ್ಣ

ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿಸುತ್ತಾರೆ ಎಂಬುದು ಇನ್ನೂ ನಿಗದಿ ಆಗಿಲ್ಲ. ಆದರೆ ರಾಜ್ಯದಲ್ಲಿ ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. 

hm revanna talks over siddaramaiah at koppal gvd
Author
First Published Sep 5, 2022, 4:00 AM IST

ಕೊಪ್ಪಳ (ಸೆ.05): ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿಸುತ್ತಾರೆ ಎಂಬುದು ಇನ್ನೂ ನಿಗದಿ ಆಗಿಲ್ಲ. ಆದರೆ ರಾಜ್ಯದಲ್ಲಿ ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಬೇವಿನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ರಾಜ್ಯದ ಅನೇಕ ಭಾಗಗಳಿಂದ ಸ್ಪರ್ಧೆ ಮಾಡುವಂತೆ ಹಲವು ನಾಯಕರು ಆಹ್ವಾನ ನೀಡುತ್ತಿದ್ದಾರೆ. ಕೋಲಾರ, ಚಿಕ್ಕನಾಯಕನ ಹಳ್ಳಿ ಸೇರಿ ಹಲವು ಕ್ಷೇತ್ರಗಳಿಂದಲೂ ಆಹ್ವಾನ ಬಂದಿದೆ. ಈ ಹಿಂದೆ ಕೊಪ್ಪಳದವರೂ ಅವರಿಗೆ ಆಹ್ವಾನಿಸಿದ್ದರು. ಈಗಲೂ ಕರೆದಿದ್ದಾರೆ. 

ಆದರೆ ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಎನ್ನುವುದು ನಿರ್ಧಾರವಾಗಿಲ್ಲ. ಅವರೊಬ್ಬ ದೊಡ್ಡ ನಾಯಕರು. ಅವರೇ ಹೇಳಿದಂತೆ ಬಾದಾಮಿಯಲ್ಲಿ ಗೆಲ್ಲಬೇಕೆಂಬ ಆಸೆಯಿದೆ ಎಂದಿದ್ದಾರೆ ಎಂದರು. ಇತ್ತೀಚೆಗೆ ನಡೆದ ಸಿದ್ದರಾಮಯ್ಯನವರ ಜನ್ಮದಿನದ ಅಮೃತ ಮಹೋತ್ಸವ ನೋಡಿ ಪ್ರಧಾನಿ ಮೋದಿಗೆ ಭಯವಾಗಿದೆ. ರಾಷ್ಟ್ರದಲ್ಲಿ ಉತ್ತಮ ಸಿಎಂ ಆಗಿ ಸಿದ್ದರಾಮಯ್ಯ ಅವರು ಹೊರಹೊಮ್ಮಿದ್ದರು ಎಂದರು. ಮುರುಘಾಶ್ರೀ ಅವರ ಮೇಲಿನ ಪೋಕ್ಸೊ ಪ್ರಕರಣ ಕೋರ್ಚ್‌ನಲ್ಲಿದೆ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾನೂನು ಏನು ತೀರ್ಮಾನ ಮಾಡುತ್ತೋ ಅದು ಆಗಲಿದೆ ಎಂದರು.

Karnataka Politics: ಕಾಂಗ್ರೆಸ್‌ನಲ್ಲಿ ರೇವಣ್ಣ-ಬಾಲಕೃಷ್ಣ ಫೈಟ್‌!

ಅರವಿಂದ ಲಿಂಬಾವಳಿ ಮಹಿಳೆಯೊಂದಿಗಿನ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಅವರೇ ಹೇಳ್ತಾರೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೂ ಮಹಿಳೆಯರ, ಯುವತಿಯರ ಮೇಳೆ ಅತ್ಯಾಚಾರ ಹೆಚ್ಚಾಗಿದೆ. ಚುನಾಯಿತ ಪ್ರತಿನಿಧಿಗಳೇ ಅಶ್ಲೀಲ ಫಿಲ್ಮಂ ನೋಡಿರುವುದನ್ನು ಜನರು ನೋಡಿದ್ದಾರೆ. ಮಹಿಳೆಗೆ ಮುತ್ತಿಟ್ಟರಾಜಕಾರಣಿ ಸಿಎಂ ಕಾರ್ಯದರ್ಶಿಯಾಗಿದ್ದಾರೆ. ಲಿಂಬಾವಳಿ ಅವರದ್ದು ಸಲಿಂಗ ಕಾಮದಲ್ಲಿ ಹೆಸರು ಕೇಳಿ ಬಂದಿತ್ತು. ಭೂತದ ಬಾಯಲ್ಲಿ ಭಗವದ್ಗೀತೆ ಹೇಳುವಂತಾಗಿದೆ. ಮಹಿಳೆಯರ ಮೇಲೆ ಈ ರೀತಿ ವರ್ತನೆ ಮಾಡಿದ್ದು ನಿಜಕ್ಕೂ ಖಂಡನೀಯ ಎಂದರು.

ಸಿದ್ದರಾಮಯ್ಯರಿಂದ ಹಾಲುಮತದ ಧ್ವನಿ ಗಟ್ಟಿ: ಕುರುಬ ಜನಸಂಖ್ಯೆಗೆ ತಕ್ಕಂತೆ ನಮಗೆ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ರಾಜ್ಯದಲ್ಲಿ ಸಮಾಜದವರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ಸಮುದಾಯಕ್ಕೆ ಧ್ವನಿ ಸಿಕ್ಕಿದೆ ಎಂದು ಸಚಿವ ಎಚ್‌.ಎಂ. ರೇವಣ್ಣ ಹೇಳಿದರು. ತಾಲೂಕಿನ ಬೇವಿನಹಳ್ಳಿಯಲ್ಲಿ ಹಾಲುಮತ ಧರ್ಮಪ್ರಚಾರ ಯಾತ್ರೆ ಮತ್ತು ತುಲಾಭಾರ ಸಮಾವೇಶವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿದ ಅವರು, ಈ ಹಿಂದೆ ಹಾಲುಮತದವರಾದ ನಮಗೆ ಧ್ವನಿ ಇರಲಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಧ್ವನಿ ಗಟ್ಟಿಯಾಗಿದೆ. 

ಹಾಲುಮತ ಸಮುದಾಯ ಜಾಗೃತರಾಗಿ ಮುಂದೆ ಬರಬೇಕಿದೆ. ಜತೆಗೆ ಹಿಂದುಳಿದ ಸಣ್ಣ ಸಣ್ಣ ಸಮಾಜಗಳನ್ನು ಕರೆತರುವ ಕಾರ್ಯ ಆಗಬೇಕು. ಪಾರ್ಲಿಮೆಂಟ್‌ನಲ್ಲಿ ಹಾಲುಮತದವರು ಡೊಳ್ಳು ಬಾರಿಸಬೇಕು ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ದೇಶದಲ್ಲಿ ಸಮಾನತೆಗಾಗಿ ಹೋರಾಟ ಶುರುವಾಗಿದೆ. ಸಂವಿಧಾನ ರಕ್ಷಣೆಗಾಗಿ ಅದರ ಉಳಿವಿಗಾಗಿ ಹೋರಾಡಬೇಕಿದೆ. ಯುವ ಸಮೂಹ ಜಾಗೃತರಾಗಿ ಚುನಾವಣೆಯಲ್ಲಿ ಸಂವಿಧಾನ ಪರ ಇರುವ ನಾಯಕರಿಗೆ ಅಧಿಕಾರ ಕೊಡಬೇಕು. ಸಮಾಜದಲ್ಲಿ ಸಮಾನತೆಗಾಗಿ ಬಸವಣ್ಣ, ಕನಕದಾಸರು, ಅಂಬೇಡ್ಕರ ಸೇರಿ ಹಲವು ದಾರ್ಶನಿಕರು ಹೋರಾಡಿದ್ದಾರೆ. 

Flag Row: ಈಶ್ವರಪ್ಪ ಸಚಿವರಾಗಿರೋದಕ್ಕೆ ನಾಲಾಯಕ್: ಎಚ್‌.ಎಂ. ರೇವಣ್ಣ

ಸಿದ್ದರಾಮಯ್ಯನವರೂ ಸಂವಿಧಾನ ಉಳಿಯಬೇಕು ಎನ್ನುತ್ತಿದ್ದಾರೆ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರವು ಹಿಂದುಳಿದ ಸಮಾಜಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದೆ ಎಂದರು. ವಾಗ್ಮಿ ನಿಖಿತರಾಜ ಮೌರ್ಯ ಮಾತನಾಡಿ, ಹಾಲುಮತ ಸಮಾಜ ಹಾಲಿನಷ್ಟೆಪರಿಶುದ್ಧರು. ನಾವೆಲ್ಲರೂ ಮೊದಲು ಜಾಗೃತರಾಗಿ ಮುಂದೆ ಬರಬೇಕಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಂವಿಧಾನ ರಕ್ಷಣೆ ಮಾಡುವ ಕೆಲಸ ನಡೆಯಬೇಕಿದ್ದು, ಸಂವಿಧಾನ ಬದ್ಧತೆ ಇರುವವರನ್ನು ಗೆಲ್ಲಿಸಬೇಕು. ಜನರು ಆಯ್ಕೆ ಮಾಡುವವರು ರಾಜನಾಗಿರಬೇಕು. ಸಂವಿಧಾನವನ್ನು ಉಳಿಸಬೇಕಾಗಿದೆ ಎಂದರು.

Follow Us:
Download App:
  • android
  • ios