Asianet Suvarna News Asianet Suvarna News

Karnataka Politics: ಕಾಂಗ್ರೆಸ್‌ನಲ್ಲಿ ರೇವಣ್ಣ-ಬಾಲಕೃಷ್ಣ ಫೈಟ್‌!

ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೊಂದು ಮುಸುಕಿನ ಗುದ್ದಾಟ ಸ್ಫೋಟಗೊಂಡಿದೆ. ಮಾಗಡಿ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್‌.ಎಂ. ರೇವಣ್ಣ ಅವರು ಜೆಡಿಎಸ್‌ ಶಾಸಕ ಎ. ಮಂಜುನಾಥ್‌ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

crisis in magadi congress hc balakrishna letter to dk shivakumar gvd
Author
Bangalore, First Published May 21, 2022, 3:15 AM IST

ಬೆಂಗಳೂರು (ಮೇ.21): ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೊಂದು ಮುಸುಕಿನ ಗುದ್ದಾಟ ಸ್ಫೋಟಗೊಂಡಿದೆ. ಮಾಗಡಿ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್‌.ಎಂ. ರೇವಣ್ಣ ಅವರು ಜೆಡಿಎಸ್‌ ಶಾಸಕ ಎ. ಮಂಜುನಾಥ್‌ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ. ‘ಅಲ್ಲದೆ, ಎಚ್‌.ಎಂ. ರೇವಣ್ಣ ಅವರಿಗೆ ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಯಕೆ ಇದ್ದಂತಿದೆ. ಪಕ್ಷದ ಹಿತದೃಷ್ಟಿಯಿಂದ 2023ರ ವಿಧಾನಸಭೆ ಚುನಾವಣೆಗೆ ರೇವಣ್ಣ ಅವರಿಗೆ ಟಿಕೆಟ್‌ ನೀಡಬೇಕು. ರೇವಣ್ಣ ಅವರ ಪರವಾಗಿ ಕೆಲಸ ಮಾಡಲು ನಾವು ಸಿದ್ಧವಿದ್ದೇವೆ’ ಎಂದೂ ಆಕ್ರೋಶಭರಿತರಾಗಿ ಪತ್ರದಲ್ಲಿ ಹೇಳಿದ್ದಾರೆ. 

ಈ ಬಗ್ಗೆ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇತ್ತೀಚೆಗೆ ಭೇಟಿ ಮಾಡಿದ್ದ ಬಾಲಕೃಷ್ಣ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ರೇವಣ್ಣ ಅವರನ್ನು ಕರೆ ಈ ಬಗ್ಗೆ ಚರ್ಚಿಸುವುದಾಗಿ ಉಭಯ ನಾಯಕರು ಬಾಲಕೃಷ್ಣ ಅವರಿಗೆ ಭರವಸೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಆದರೆ, ಈ ಪತ್ರ ಬರೆದ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರು ಜೆಡಿಎಸ್‌ ಅಥವಾ ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎಂಬ ವದಂತಿ ಸಹ ರಾಜಕೀಯ ವಲಯದಲ್ಲಿ ಹಬ್ಬಿದೆ.

Karnataka Politics: ಆರ್‌ಎಸ್‌ಎಸ್‌ ಬಗ್ಗೆ ಮಾತನಾಡದಿದ್ರೆ ಕಾಂಗ್ರೆಸ್‌ನವರಿಗೆ ನಿದ್ರೆ ಬರಲ್ಲ: ಆಚಾರ್‌

ಪತ್ರದಲ್ಲಿ ಏನಿದೆ?: ‘ನಾನು 20 ವರ್ಷಗಳ ಕಾಲ ಜೆಡಿಎಸ್‌ ಪಕ್ಷದಲ್ಲಿದ್ದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ. ಆದರೆ ರೇವಣ್ಣ ಅವರು ಜೆಡಿಎಸ್‌ ಶಾಸಕ ಎ. ಮಂಜುನಾಥ್‌ ಅವರನ್ನು ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಹೊಗಳುವುದು ಮಾಡುತ್ತಿದ್ದಾರೆ. ಎ.ಮಂಜುನಾಥ್‌ ಅವರೂ ನನ್ನ ರಾಜಕೀಯ ಗುರುಗಳಾದ ಎಚ್‌.ಎಂ.ರೇವಣ್ಣ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಾರೆ. 

ಅಲ್ಲದೆ ಮಂಜುನಾಥ್‌ ಕಾಂಗ್ರೆಸ್‌ನಲ್ಲಿದ್ದಾಗ ಅವರ ಕಚೇರಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಎಚ್‌.ಎಂ.ರೇವಣ್ಣ ಅವರ ಫೋಟೋಗಳಿದ್ದವು. ಅವರು ಜೆಡಿಎಸ್‌ಗೆ ಸೇರಿದ ಬಳಿಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಫೋಟೋ ತೆಗೆದಿದ್ದರೂ ಎಚ್‌.ಎಂ.ರೇವಣ್ಣ ಅವರ ಫೋಟೋ ತೆಗೆದಿಲ್ಲ. ಕ್ಷೇತ್ರದಲ್ಲಿ ಈ ಪರಿಸ್ಥಿತಿ ಇರುವಾಗ ನೀವು ಸ್ಪರ್ಧಿಸುವ ಬದಲು ರೇವಣ್ಣ ಅವರಿಗೆ ಅವಕಾಶ ಕೊಡಿ ಎಂದು ನನ್ನ ಬೆಂಬಲಿಗರು ಸಲಹೆ ನೀಡಿದ್ದಾರೆ. ಹೀಗಾಗಿ ರೇವಣ್ಣ ಅವರಿಗೇ ಅವಕಾಶ ಕೊಡಿ. ಅವರಿಗೆ ಟಿಕೆಟ್‌ ನೀಡಿದರೆ, ನಾನು ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ’ ಎಂದು ಬಾಲಕೃಷ್ಣ ಸಿಟ್ಟಿನಿಂದಲೇ ಪತ್ರದಲ್ಲಿ ಹೇಳಿದ್ದಾರೆ.

Karnataka Politics: ಸಿದ್ದರಾಮಯ್ಯ ದಲಿತ ಸಾಲ ಮನ್ನಾ ಹೇಳಿಕೆಗೆ ಬಿಜೆಪಿ ಕಿಡಿ!

ನಾನು ಜೆಡಿಎಸ್‌ನಲ್ಲಿದ್ದಾಗ ಎಚ್‌.ಎಂ.ರೇವಣ್ಣ ಮಾಗಡಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕಳೆದ 20-25 ವರ್ಷದಿಂದ ಇಬ್ಬರೂ ಪೈಪೋಟಿ ನಡೆಸುತ್ತಿದ್ದೇವೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಬೆಂಗಳೂರಿಗೆ ವಲಸೆ ಹೋದ ರೇವಣ್ಣಗೆ ಸರಿಯಾದ ಕ್ಷೇತ್ರ ಸಿಗಲಿಲ್ಲ. ಹೀಗಾಗಿ ಮಾಗಡಿಯಲ್ಲಿ ಸ್ಪರ್ಧಿಸಲು ಬಯಸಿದ್ದಾರಂತೆ. ಅವರಿಗೆ ಆಸಕ್ತಿ ಇದ್ದರೆ ಅವರಿಗೇ ಟಿಕೆಟ್‌ ನೀಡಿ.
-ಎಚ್‌.ಸಿ.ಬಾಲಕೃಷ್ಣ, ಮಾಗಡಿಯ ಮಾಜಿ ಶಾಸಕ

Follow Us:
Download App:
  • android
  • ios