ಇಂದಿನ ಅದ್ಧೂರಿ ಸ್ವಾಗತ ನೋಡಿದರೆ ಶಿವಮೊಗ್ಗದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತೆ ಎಲ್ಲ ಸ್ಥಾನಗಳನ್ನು ಗೆಲುವು ಖಚಿತವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಎಂ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. 

ಶಿವಮೊಗ್ಗ (ಸೆ.25): ಇಂದಿನ ಅದ್ಧೂರಿ ಸ್ವಾಗತ ನೋಡಿದರೆ ಶಿವಮೊಗ್ಗದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತೆ ಎಲ್ಲ ಸ್ಥಾನಗಳನ್ನು ಗೆಲುವು ಖಚಿತವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಎಂ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಸಮಾಜವಾದಿ ನೆಲೆಯಾಗಿದೆ. ರಾಜಕೀಯ ದಿಗ್ಗಜರನ್ನು ನೀಡಿದ ಜಿಲ್ಲೆಯಾಗಿದೆ. ಮಧು ಬಂಗಾರಪ್ಪ ಅವರಿಗೆ ರಾಜ್ಯಾದ್ಯಂತ ವರ್ಚಸ್ಸು ಇದೆ. ಅದನ್ನು ಗಮನಿಸಿದ ಹೈಕಮಾಂಡ್‌ ಅವರಿಗೆ ಮಹತ್ತರ ಜವಾಬ್ದಾರಿ ನೀಡಿದೆ.

ಅವರ ಕಾರ್ಯಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೇ ರಾಜ್ಯದೆಲ್ಲೆಡೆ ವಿಸ್ತರಿಸಲಿ. ಅರಸು ಮತ್ತು ಇಂದಿರಾ ಗಾಂಧಿ ಕಲ್ಪನೆಯಾಗಿದ್ದ ‘ಎಲ್ಲರಿಗೂ ಸಮಬಾಳು ಸಮಪಾಲು’ ಎಂಬುದನ್ನು ಜನರಿಗೆ ಮನದಟ್ಟು ಮಾಡುವಂತಾಗಲಿ ಎಂದು ಆಶಿಸಿದರು. ವೇದಿಕೆಯಲ್ಲಿದ್ದ ಎಲ್ಲರೂ ‘ಪೇಸಿಎಂ’ ಕರಪತ್ರ ತೋರಿಸುವ ಮೂಲಕ ಬಿಜೆಪಿ ಸರ್ಕಾರದ ಅಣಕು ಮಾಡಿದರು. 

ಶಂಕಿತ ಉಗ್ರರಿಗೆ ಕರಾವಳಿ, ಕೇರಳ ಸಂಪರ್ಕ: ಸಚಿವ ಆರಗ ಜ್ಞಾನೇಂದ್ರ

ಕರಪತ್ರದಲ್ಲಿರುವ ನಂಬರ್‌ಗೆ ಮಿಸ್ಡ್‌ ಕಾಲ್‌ ಕೊಡುವಂತೆ ಪ್ರತಿ ಕ್ಷೇತ್ರದಿಂದ ವಾರಕ್ಕೆ ಕನಿಷ್ಠ 10 ಸಾವಿರ ಕಾಲ್‌ ಮಾಡಿ ಸರ್ಕಾರಕ್ಕೆ ಎಚ್ಚರಿಸುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದರು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌, ಶಿವಮೂರ್ತಿ ನಾಯ್ಕ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್‌.ಎಸ್‌. ಸುಂದರೇಶ್‌, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರ್‌. ಪ್ರಸನ್ನಕುಮಾರ್‌, ಕೆ.ಬಿ. ಪ್ರಸನ್ನಕುಮಾರ್‌, ವೈ.ಹೆಚ್‌.ನಾಗರಾಜ್‌, ಇಕ್ಕೇರಿ ರಮೇಶ್‌, ಡಾ.ರಾಜನಂದಿನಿ ಕಾಗೋಡು ತಿಮ್ಮಪ್ಪ, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್‌, ಪ್ರವೀಣ್‌ ಕುಮಾರ್‌ ಮತ್ತಿತರರು ಇದ್ದರು

Shivamogga Airport; ನವೆಂಬರ್ ಮಾಸಾಂತ್ಯಕ್ಕೆ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ

ಮಧು ಬಂಗಾರಪ್ಪಗೆ ಅದ್ಧೂರಿ ಸ್ವಾಗತ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಹಾಗೂ ಪ್ರಣಾಳಿಕೆ, ನೀತಿ ಮತ್ತು ದೂರದೃಷ್ಠಿ ಸಮಿತಿ 2023ರ ಉಪಾಧ್ಯಕ್ಷ ಹಾಗೂ ನೂತನವಾಗಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ಮಧು ಬಂಗಾರಪ್ಪ ಶನಿವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ನಗರದ ಎಂ.ಆರ್‌.ಎಸ್‌. ವೃತ್ತದಿಂದ ಬೈಕ್‌ ರಾರ‍ಯಲಿ ಮೂಲಕ ಜಿಲ್ಲಾ ಕಾಂಗ್ರೆಸ್‌ ಕಚೇರಿಯವರೆಗೆ ಕರೆತರಲಾಯಿತು. ಮೆರವಣಿಗೆ ಉದ್ದಕ್ಕೂ ವಿವಿಧೆಡೆ ಕಾರ್ಯಕರ್ತರು, ಅಭಿಮಾನಿಗಳು ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು. ಹೊಳೆ ಬಸ್‌ ನಿಲ್ದಾಣದ ಬಳಿ ಕ್ರೇನ್‌ ಮೂಲಕ ಸೇಬು ಹಣ್ಣಿನ ಬೃಹತ್‌ ಹಾರ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು. ಮೆರವಣಿಗೆ ಹಿನ್ನೆಲೆ ಬಿ.ಎಚ್‌. ರಸ್ತೆಯಲ್ಲಿ ಸಂಚಾರ ದಟ್ಟನೆ ಉಂಟಾಗಿತ್ತು. ತುಂಗಾನದಿಯ ಎರಡು ಸೇತುವೆಗಳ ಮೇಲೆ ಕೆಲಕಾಲ ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರು ಪರದಾಡಿದರು.