Asianet Suvarna News Asianet Suvarna News

ರಾಹುಲ್‌ ಗಾಂಧಿ ಸಹವಾಸ ದೋಷ; ಹಿಜಾಬ್ ವಿಚಾರದಲ್ಲಿ ಸಿದ್ದರಾಮಯ್ಯ ಮೂರ್ಖರಂತೆ ಮಾತಾಡ್ತಿದ್ದಾರೆ: ಪ್ರಲ್ಹಾದ್ ಜೋಶಿ ಕಿಡಿ

ಹಿಜಾಬ್ ನಿಷೇಧ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಮೂರ್ಖರಂತೆ ಮಾತಾಡಿದ್ದಾರೆ. ಇಲ್ಲದ ಹಿಜಾಬ್ ಆದೇಶ ಹಿಂದೆ ಪಡೆಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸಿದ್ದರಾಮಯ್ಯರ ಮುಠ್ಠಾಳತನ ಎಂದು  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದರು.

Hijab ban withdraw issue Union minister pralhad joshi outraged against CM Siddaramaiah  at hubballi rav
Author
First Published Dec 24, 2023, 1:06 PM IST

ಹುಬ್ಬಳ್ಳಿ (ಡಿ.24) ಹಿಜಾಬ್ ನಿಷೇಧ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಮೂರ್ಖರಂತೆ ಮಾತಾಡಿದ್ದಾರೆ. ಇಲ್ಲದ ಹಿಜಾಬ್ ಆದೇಶ ಹಿಂದೆ ಪಡೆಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸಿದ್ದರಾಮಯ್ಯರ ಮುಠ್ಠಾಳತನ ಎಂದು  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳೋಕೆ ಇಂಥ ಹೇಳಿಕೆ ನೀಡುತ್ತಿದ್ದಾರೆ. ನೀವು ಗೊತ್ತಿದ್ದೂ ಮಾಡ್ತಾ ಇದ್ರೆ ಅದು ಸಮಾಜಕ್ಕೆ ಮಾಡುವ ಅನ್ಯಾಯ. ಗೊತ್ತಿಲ್ಲದೇ ಹೇಳಿದ್ರೆ ನೀವು ಸಿಎಂ ಖುರ್ಚಿಗೆ ಅನರ್ಹರು. ಮಿಸ್ಟರ್ ಸಿದ್ದರಾಮಯ್ಯ ಎಲ್ಲಿ ಹಿಜಾಬ್ ಬ್ಯಾನ್ ಇದೆ ಎಂದು ಸವಾಲು ಹಾಕಿದರು.

ಹಿಜಾಬ್ ನಿಷೇಧ ವಾಪಸ್; ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ -ಪ್ರಲ್ಹಾದ್ ಜೋಶಿ ಕಿಡಿ

ರಾಹುಲ್ ಗಾಂಧಿಯವರ ಸಹವಾಸ ದೋಷ:

ಹಿಜಾಬ್ ವಿಷಯದಲ್ಲಿ ಮೂರ್ಖರಂತೆ ಮಾತಾಡ್ತಿರೋ ಸಿದ್ದರಾಮಯ್ಯರಿಗೆ ರಾಹುಲ್ ಗಾಂಧಿಯವರ ಸಹವಾಸ ದೋಷ ಕಾರಣ ಇರಬಹುದು. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ವಾಪಸಾದ ನಂತರ ಹೀಗೆ ಮಾತಾಡ್ತಾರೆ. ತುಷ್ಟಿಕರಣದಲ್ಲಿ ಮತ ಪಡೆಯುವ ಹುನ್ನಾರ ಇದು. ಮುಸ್ಲಿಂ ಭಾಂದವರು ಇದನ್ನ ಅರ್ಥ ಮಾಡಿಕೊಳ್ಳಬೇಕು ಈ ರೀತಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಬಿಕೆ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು:

ಬಿಜೆಪಿಯವರು ಬ್ರಿಟೀಷರ ಬೂಟು ನೆಕ್ಕಿದ್ದರು ಎಂಬ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಸಿಡಿಮಿಡಿಗೊಂಡ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಬಿಕೆ ಹರಿಪ್ರಸಾದರನ್ನ ಕಾಂಗ್ರೆಸ್ ಪಕ್ಷದಲ್ಲಿ ಬೂಟಿಗಿಂತ ಕಡೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು ಮುಂದುವರಿದು, ನನಗೆ ಅವರ ಭಾಷೆಯಲ್ಲಿ ಉತ್ತರ ಕೊಡೋಕೆ ಬರೊಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಬೂಟುಗಿಂತ ಮಾಡಿದ್ದಾರೆ. ಅದಕ್ಕೆ ಆ ರೀತಿ ಅವರು ಹೇಳ್ತಾ ಇದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಆಗ್ತಿರುವ ಅವಮಾನಕ್ಕೆ ಹೀಗೆ ಮಾತಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು. 

ಪ್ರಲ್ಹಾದ್ ಜೋಶಿ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗ? ಪ್ರದೀಪ್ ಶೆಟ್ಟರ್ ಹೇಳಿಕೆ ಹಿಂದಿದ್ಯಾ ಹೊಸ ಗೇಮ್ ಪ್ಲಾನ್?

ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬ ಹೇಳಿಕೆಗೂ ಕಿಡಿಕಾರಿದ ಪ್ರಲ್ಹಾದ್ ಜೋಶಿ, ಗಾಂಧೀಜಿಯವರ ಹತ್ಯೆಯಾದ ನಂತರ ಆರ್ ಎಸ್ ಎಸ್ ಮೇಲೆ ನಿರ್ಬಂಧ ಹಾಕಿದ್ದರು. ನಂತರ ಕಾಂಗ್ರೆಸ್ ಸರ್ಕಾರವೇ ನಿರ್ಬಂಧ ವಾಪಸ್ ಪಡೆಯಿತು. ಯಾಕೆ ನಿರ್ಬಂಧ ವಾಪಸ್ ಪಡೆಯಿತು? ಕಾಂಗ್ರೆಸ್ ನಲ್ಲಿ ಆಗುತ್ತಿರುವ ಹತಾಶೆಯಿಂದ ಬಿಕೆ ಹರಿಪ್ರಸಾದ್ ಈ ರೀತಿ ಮಾತಾಡ್ತಿದ್ದಾರೆ.  ನೀವೇನು ಮಾಡಿದ್ರು ಸಿದ್ದರಾಮಯ್ಯ ನಿಮ್ಮನ್ನ ಮಂತ್ರಿ ಮಾಡಲ್ಲ. ಡಿಕೆ ಶಿವಕುಮಾರ್ ಅವರು ಸಹ ನಿಮ್ಮ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ. ಸೋನಿಯಾ ಗಾಂಧಿ ನಿಮಗೆ ಮಂತ್ರಿ ಮಾಡ್ರಿ ಅಂತಾನೂ ಹೇಳಲ್ಲ
ಯಾಕೆ ಹುಚ್ಚುಚ್ಚಾಗಿ ಮಾತಾಡ್ತೀರಿ. ಈ ರೀತಿ ಅಸಭ್ಯ  ಅಸಾಂಸ್ಕೃತಿಕವಾಗಿ ಮಾತಾಡುವುದನ್ನು ಬಿಡಿ ಎಂದು ಬಿಕೆ ಹರಿಪ್ರಸಾದ್ ಗೆ ಪ್ರಹ್ಲಾದ್ ಜೋಶಿ ತಾಕೀತು ಮಾಡಿದರು.

Follow Us:
Download App:
  • android
  • ios