ಬೆಂಗಳೂರು(ಜ.19): ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಇದೀಗ ರೆಸಾರ್ಟ್ ರಾಜಕಾರಣದಲ್ಲಿ ತಲೆಕೆಡಿಸಿಕೊಂಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹೆಡ್ ಮಾಸ್ಟರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋಟಿ ರೂಪಾಯಿ ಮೌಲ್ಯದ ಮರ್ಸಡೀಸ್ ಬೆಂಝ್ ಕಾರು ಉಡುಗೊರೆಯಾಗಿ ಬಂದಿದೆ.

ಸಿದ್ದರಾಮಯ್ಯ ಶಿಷ್ಯ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಮರ್ಸಡೀಸ್ ಬೆಂಝ್ GLS SUV ಕಾರು ಉಡುಗೊರೆಯಾಗಿ ನೀಡಿದ್ದಾರೆ. ರೆಸಾರ್ಟ್ ರಾಜಕಾರಣದ ಬೆನ್ನಲ್ಲೇ ಭೈರತಿ ಸುರೇಶ್ ನೀಡಿದ ಕೋಟಿ ಮೌಲ್ಯದ ಕಾರು ಇದೀಗ ಭಾರಿ ಕುತೂಹಲ ಕೆರಳಿಸಿದೆ. 

ಇದನ್ನೂ ಓದಿ: 'ರಾಜ್ಯ ರಾಜಕೀಯ ಹೈಡ್ರಾಮದ ಹಿಂದೆ ಸಿದ್ದರಾಮಯ್ಯ ಕೈವಾಡ!'

ಮರ್ಸಡೀಸ್ ಬೆಂಝ್ GLS SUV ಕಾರಿನಲ್ಲಿ 5 ವೇರಿಯೆಂಟ್ ಲಭ್ಯವಿದೆ. ಬೇಸ್ ವೇರಿಯೆಂಟ್ ಬೆಲೆ 85.67 ಲಕ್ಷ ರೂಪಾಯಿ(ಎಕ್ಸ ಶೋ ರೂಂ) ಆರಂಭವಾಗಲಿದೆ. ಇನ್ನು ಟಾಪ್ ವೇರಿಯೆಂಟ್  GLS 63 AMG ಬೆಲೆ 1.92 ಕೋಟಿ ರೂಪಾಯಿ(ಎಕ್ಸ್ ಶೋಂ ರೂಂ).  

ಮರ್ಸಸೀಡ್ ಬೆಂಝ್ GLS 400 4MATIC ಬೆಲೆ 85.67 ಲಕ್ಷ ರೂಪಾಯಿ,  GLS 350 D ಬೆಲೆ 85.67 ಲಕ್ಷ ರೂಪಾಯಿ,  GLS ಗ್ರ್ಯಾಂಡ್ ಎಡಿಶನ್ ಪೆಟ್ರೋಲ್ ಬೆಲೆ 86.97 ಲಕ್ಷ ರೂಪಾಯಿ,  GLS ಗ್ರ್ಯಾಂಡ್ ಎಡಿಶನ್ ಡೀಸೆಲ್ ಬೆಲೆ 86.97 ಲಕ್ಷ ರೂಪಾಯಿ,  GLS 63AMG ಕಾರಿನ ಬೆಲೆ 1.92 ಕೋಟಿ ರೂಪಾಯಿ(ಎಕ್ಸ್ ಶೋಂ ರೂಂ). 

ಇದನ್ನೂ ಓದಿ: ರೆಸಾರ್ಟ್ ಪಾಲಿಟಿಕ್ಸ್: ತಂತ್ರಗಾರಿಕೆ ಬದಲಾಯಿಸಿದ ಬಿಜೆಪಿ

2987 CC, 3.0 ಲೀಟರ್, 6 ಸಿಲಿಂಡರ್ ಎಂಜಿನ್ ಹೊಂದಿರುವ ಈ ಕಾರು  254 bhp ಪವರ್ ಹಾಗೂ 620 Nm ಟಾರ್ಕ್ ಉತ್ಪಾದಿಸಲಿದೆ. ಡೀಸೆಲ್ ವೇರಿಯೆಂಟ್ ಕಾರು ಪ್ರತಿ ಲೀಟರ್‌ಗೆ 11 ಕಿ.ಮೀ ಮೈಲೇಜ್ ನೀಡಿದರೆ, ಪೆಟ್ರೋಲ್ ಪ್ರತಿ ಲೀಟರ್‌ಗೆ 10 ಕಿ.ಮೀ ಮೈಲೇಜ್ ನೀಡಲಿದೆ. ಈ ಕಾರಿನ ಗರಿಷ್ಠ ವೇಗ 222 kmph. ಇನ್ನು 100 ಲೀಟರ್ ಇಂಧನ ಸಾಮರ್ಥ್ಯಹೊಂದಿದೆ. 

ಇದನ್ನೂ ಓದಿ: ಕಳೆದ ವರ್ಷ 23 ಲಕ್ಷ ಬೆಂಝ್‌ ಕಾರು ಮಾರಾಟ- ಭಾರತ ಈಗ ಲಕ್ಸುರಿ ರಾಷ್ಟ್ರ!

ಮರ್ಸಸೀಡ್ ಬೆಂಝ್ GLS ಕಾರು ಗರಿಷ್ಠ ಸುರಕ್ಷತೆ ನೀಡಲಿದೆ. ಪ್ಯಾಸೆಂಜರ್ ಏರ್‌ಬ್ಯಾಗ್, ಸೈಡ್ ಏರ್‌ಬ್ಯಾಗ್, ಡ್ರೈವರ್ ಏರ್‌ಬ್ಯಾಗ್ ಹೊಂದಿದೆ. ಇನ್ನು ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD(ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್), BA(ಬ್ರೇಕ್ ಅಸಿಸ್ಟ್), ಹಿಲ್ ಅಸಿಸ್ಟ್, ESP(ಎಲೆಕ್ಟ್ರಾನಿಕ್ ಸ್ಟೆಬಿಲಿಟ್ ಪ್ರೊಗ್ರಾಂ), ಟ್ರಾಕ್ಷನ್ ಕಂಟ್ರೋಲ್,  ಸೆಂಟ್ರಲ್ ಲಾಂಕಿಂಗ್, ಚೈಲ್ಡ್ ಸೇಫ್ಟಿ ಲಾಕ್, ಪವರ್ ಡೋರ್ ಲಾಕ್, ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಾರ್ ವೈಪ್ಸ್, ಹೆಡ್ ಬೀಮ್ ಅಡ್ಜಸ್ಟರ್ ಸೇರಿದಂತೆ ಗರಿಷ್ಠ ಫೀಚರ್ಸ್ ಹೊಂದಿದೆ.

ದುಬಾರಿ ಹಾಗೂ ಐಷಾರಾಮಿ ಕಾರನ್ನ ಉಡುಗೊರೆಯಾಗಿ ಪಡೆದಿರುವ ಸಿದ್ದರಾಮಯ್ಯ ಈ ಹಿಂದೆಯೂ ಇದೇ ರೀತಿ ಗಿಫ್ಟ್ ಪಡೆದಿದ್ದಾರೆ. ಸಿದ್ದರಾಮಯ್ಯ ಆಪ್ತ ಕೆ.ಜೆ.ಜಾರ್ಜ್ 92.60 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ಮೌಲ್ಯದ ಲ್ಯಾಂಡ್ ಕ್ರೂಸರ್ ಕಾರನ್ನ ಉಡುಗೊರೆಯಾಗಿ ನೀಡಿದ್ದರು.