Asianet Suvarna News Asianet Suvarna News

Politics | ನನಗೆ ಕೆಲಸ ಇಲ್ಲ, ಅದಕ್ಕೇ ಕ್ಯಾಮೆರಾ ಮುಂದೆ ಬರುತ್ತೇನೆ : ಎಚ್‌ಡಿಕೆ

  • ನನಗೆ ಈಗ ಕೆಲಸ ಇಲ್ಲ. ಹೀಗಾಗಿ ಹೆಚ್ಚಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತೇನೆ
  • ನಾಡಿನ ಗೃಹ ಸಚಿವರು, ಅವರಿಗೆ ತುಂಬಾ ಕೆಲಸ ಇರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟಾಂಗ್‌
HD kumaraswamy Taunts To Araga jnanendra Statement snr
Author
Bengaluru, First Published Nov 21, 2021, 9:10 AM IST
  • Facebook
  • Twitter
  • Whatsapp

 ಬೆಂಗಳೂರು (ನ.21):  ನನಗೆ ಈಗ ಕೆಲಸ ಇಲ್ಲ. ಹೀಗಾಗಿ ಹೆಚ್ಚಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತೇನೆ. ಅವರು ನಾಡಿನ ಗೃಹ ಸಚಿವರು (Home Minister), ಅವರಿಗೆ ತುಂಬಾ ಕೆಲಸ ಇರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD kumaraswamy) ಟಾಂಗ್‌ ಕೊಟ್ಟಿದ್ದಾರೆ.  ಕುಮಾರ ಸ್ವಾಮಿ ರೀತಿ ನಾವು ದಿನಕ್ಕೆರಡು ಬಾರಿ ಕ್ಯಾಮೆರಾ (camera) ಮುಂದೆ ಬರಲು ಆಗುತ್ತಾ? ಎಂಬ ಹೇಳಿಕೆಗೆ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ (BJP) ನಾಯಕರಷ್ಟು ನಾನು ಪ್ರಚಾರ ತೆಗೆದುಕೊಂಡಿಲ್ಲ. ನನಗೇನೂ ಕೆಲಸ ಇಲ್ಲ, ಅಧಿಕಾರ ಇಲ್ಲ. ಅದಕ್ಕೆ ಕ್ಯಾಮೆರಾ ಮುಂದೆ ಬರುತ್ತೇನೆ. ಸಚಿವರು ಹೇಳಿದ್ದು ಸರಿಯಾಗಿಯೇ ಇದೆ. ನನ್ನ ಪ್ರಕಾರ ಇಂತಹ ಗೃಹ ಸಚಿವರು ಈವರೆಗೆ ಬರಲೇ ಇಲ್ಲ ಎಂದು ವ್ಯಂಗ್ಯವಾಡಿದರು.

ನನ್ನ ಬಗ್ಗೆ ಅವರು ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಪಾಪ ಅವರು ಜನರ ಕಷ್ಟ ಕೇಳಲು ನಿದ್ದೆ ಕೂಡ ಮಾಡುತ್ತಿಲ್ಲ ಎನಿಸುತ್ತಿದೆ. ಜ್ಞಾನೇಂದ್ರ ಅವರ ಶಿವಮೊಗ್ಗ (shivamogga) ಜಿಲ್ಲೆಯಲ್ಲಿ ಹೇಗಿದೆ? ಅಡಿಕೆ (areca) ಬೆಳೆಗಾರರು ಹೇಗಿದ್ದಾರೆ? ಅವರು ನೋಡಿದ್ದಾರಾ? ಅವರ ಕಷ್ಟ ಸುಖ ವಿಚಾರ ಮಾಡಿದ್ದೀರಾ ಜ್ಞಾನೇಂದ್ರ ಅವರೇ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಸೋಮವಾರ ಪ್ರಕಟ:  ವಿಧಾನ ಪರಿಷತ್‌ ಚುನಾವಣೆಗೆ (MLC Election) ಜೆಡಿಎಸ್‌ (JDS) ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಪ್ರಕಟಣೆ ಮಾಡಲಾಗುವುದು. ಬೆಂಗಳೂರು ಗ್ರಾಮಾಂತರ (Bengaluru Rural) ಅಭ್ಯರ್ಥಿ ಆಯ್ಕೆ ಬಗ್ಗೆ ಶನಿವಾರ ಚರ್ಚಿಸಲಾಗಿದೆ. ನಮಗೆ ಶಕ್ತಿ ಇರುವ 6-8 ಕಡೆ ಸ್ಪರ್ಧೆ ಮಾಡುತ್ತೇವೆ. ಕೋಲಾರ (Kolar) ಅಭ್ಯರ್ಥಿ ಕುರಿತು ಭಾನುವಾರ ಸಂಜೆ ತೀರ್ಮಾನ ಮಾಡುತ್ತೇವೆ. ಮಂಡ್ಯದಲ್ಲಿ (Mandya) ಹಾಲಿ ಸದಸ್ಯರೇ ಮರು ಸ್ಪರ್ಧೆ ಮಾಡುತ್ತಿದ್ದಾರೆ. ದೇವೇಗೌಡರ (Devegowda) ಜತೆ ಅಂತಿಮ ಚರ್ಚೆ ಮಾಡಿ ಅಂತಿಮ ಪ್ರಕಟ ಮಾಡುತ್ತೇನೆ ಎಂದರು.

ನಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸಂದೇಶ್‌ ನಾಗರಾಜ್‌ (Sandesh nagaraj)) ಮತ್ತು ಸಿ.ಆರ್‌.ಮನೋಹರ್‌ ಮತ್ತೆ ಪಕ್ಷಕ್ಕೆ ವಾಪಸ್‌ ಬರುವ ವಿಚಾರ ನನ್ನ ಮುಂದೆ ಪ್ರಸ್ತಾಪ ಇಲ್ಲ. ನಮ್ಮ ಮೇಲೆ ನಂಬಿಕೆ ಇಲ್ಲ ಅಂತ ಅವರು ಹೋದವರು. ಮೂರು ವರ್ಷದ ಹಿಂದೆಯೇ ಪಕ್ಷ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ (GT Devegowda) ಕುಟುಂಬದ ಸ್ಪರ್ಧೆ ವಿಚಾರ ನನ್ನ ಮುಂದೆ ಚರ್ಚೆಯಾಗಿಲ್ಲ. ಶಾಸಕ ಸಾ.ರಾ.ಮಹೇಶ್‌ (Sa Ra  Mahesh) ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹೀಗಾಗಿ ಈ ಬಗ್ಗೆ ನಾನು ಉತ್ತರ ಕೊಡುವುದು ಅನಗತ್ಯ ಎಂದು ಹೇಳಿದರು.

ಎಚ್‌ಡಿಕೆ ರೀತಿ ದಿನಕ್ಕೆರಡು ಬಾರಿ ಕ್ಯಾಮೆರಾ ಮುಂದೆ ನಿಲ್ಲಲಾಗುತ್ತಾ?: ಆರಗ

 ಕಲಬುರಗಿ :  ‘ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೀತಿ ಬೆಂಗಳೂರಿನಲ್ಲಿ (Bengaluru) ಇದ್ದುಕೊಂಡು ದಿನಕ್ಕೆ ಎರಡು ಬಾರಿ ಕ್ಯಾಮೆರಾ ಮುಂದೆ ನಿಲ್ಲಕ್ಕೆ ಆಗುತ್ತಾ? ಬೆಂಗಳೂರಿನಲ್ಲಿ ಇದ್ದು ಮೀಟಿಂಗ್‌ ಮಾಡಿದ್ರೆ ಹಳ್ಳಿ ಕಡೆ ಹೋಗ್ತಿಲ್ಲ ಅಂತಾರೆ. ಹಳ್ಳಿ ಕಡೆ ಹೋದ್ರೆ ಶಂಖ ಊದಿಕೊಂಡು ಓಡಾಡ್ತಿದ್ದಾರೆ ಅಂತಾರೆ. ನಾವೇನ್‌ ಕುಮಾರಸ್ವಾಮಿ ಹತ್ರ ಕೇಳಿ ಕೆಲಸ ಮಾಡಬೇಕಾ?’ ​ಇದು ರಾಜ್ಯದಲ್ಲಿ ಮಹಾ ಮಳೆಯಿಂದ (Rain) ಜನರು ಸಂಕಷ್ಟದಲ್ಲಿರುವಾಗ ಬಿಜೆಪಿ ಶಂಖ ಊದಿಕೊಂಡು ಜನ ಸ್ವರಾಜ್‌ ಯಾತ್ರೆ ಅಂತ ಶುರು ಮಾಡಿಕೊಂಡಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ತಿರುಗೇಟು.

ಜನರ ಕಷ್ಟಅರ್ಥ ಮಾಡಿಕೊಳ್ಳುವ ಕೆಲಸ ನಾವು ಮಾಡ್ತಿದ್ದೇವೆ. ನಾಲ್ಕು ತಂಡಗಳಾಗಿ ರಾಜ್ಯದಲ್ಲಿ ಸುತ್ತಾಡುತ್ತಿದ್ದೇವೆ. ಜನರ ಕಷ್ಟಗಳನ್ನು ಸಿಎಂ, ಸಚಿವರುಗಳು ಎಲ್ಲರೂ ನೋಡ್ತಿದ್ದೇವೆ ಎಂದು ಸರ್ಕಾರದ ಕಾರ್ಯವೈಖರಿ ಸಮರ್ಥಿಸಿಕೊಂಡರು.

Follow Us:
Download App:
  • android
  • ios