ಕುಟುಂಬ ರಾಜಕಾರಣದಿಂದಾಗಿ ರಾಜ್ಯದಲ್ಲಿ ಜೆಡಿಎಸ್‌ ಮಾಯ ಮೇಲ್ಕನೆ ಚುನಾವಣೆಯಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್‌ ಮಾತ್ರ ಎಂದ ಕಂದಾಯ ಸಚಿವ ಆರ್‌.ಅಶೋಕ್‌ 

ಚಾಮರಾಜನಗರ (ನ.21): : ಕುಟುಂಬ ರಾಜಕಾರಣದಿಂದಾಗಿ (Family politics ) ರಾಜ್ಯದಲ್ಲಿ ಜೆಡಿಎಸ್‌ (JDS) ಮಾಯವಾಗಿದ್ದು, ಮೇಲ್ಕನೆ ಚುನಾವಣೆಯಲ್ಲಿ (election) ನಮ್ಮ ಎದುರಾಳಿ ಕಾಂಗ್ರೆಸ್‌ (congress) ಮಾತ್ರ ಎಂದು ಕಂದಾಯ ಸಚಿವ ಆರ್‌.ಅಶೋಕ್‌ (R ashok) ಹೇಳಿದರು.ನಗರದಲ್ಲಿ ನಡೆದ ಬಿಜೆಪಿ (BJP) ಜನ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯವರು ಸಮಾವೇಶ ಏಕೆ ಮಾಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD kumaraswamy) ಕೇಳಿದ್ದಾರೆ. ನಾವು ಸಮಾವೇಶ ಮಾಡಿದರೇ ಜನ ಬರುತ್ತಾರೆ ಅದಕ್ಕೆ ಮಾಡುತ್ತಿದ್ದೇವೆ, ನೀವು ಮಾಡಿದ್ರೆ ಸಭೆ ಖಾಲಿ ಹೊಡೆಯಲಿದೆ ಎಂದು ತಿರುಗೇಟು ಕೊಟ್ಟರು.

ಇಡೀ ದೇಶದಲ್ಲಿ ಕಾಂಗ್ರೆಸ್‌ನ್ನು (Congress) ಕೂಡ ಜನ ತಿರಸ್ಕರಿಸುತ್ತಾ ಬರುತ್ತಿದ್ದಾರೆ. ನಾನು ಎಲ್ಲಾ ಭಾಗ್ಯಗಳನ್ನು ಕೊಟ್ಟೆಎಂದು ಸಿದ್ದರಾಮಯ್ಯ (siddaramaoah) ಬೀಗುತ್ತಾರೆ. ಆದರೆ, ಜನಪರ ಆಡಳಿತ ಕೊಟ್ಟಿದ್ದರೇ ಜನರಾರ‍ಯಕೆ ತಿರಸ್ಕರಿಸುತ್ತಿದ್ದರು. ಅಲ್ಪಸಂಖ್ಯಾತರಿಗಾಗಿ ಶಾದಿ ಭಾಗ್ಯ, ಟಿಪುತ್ರ್ಪ ಜಯಂತಿ ಮಾಡಿದರು. ಬೇರೆ ವರ್ಗದ ಬಡವರು ಅವರ ಕಣ್ಣಿಗೆ ಕಾಣಲಿಲ್ಲವೇ, ಜಾತಿ-ಜಾತಿ ಮಧ್ಯೆ ಕಣ್ಣಿಗೆ ಎಂದು ಪ್ರಶ್ನಿಸಿದರು.

ಸರಳ, ಸಜ್ಜನಿಕೆಯಿಂದ ಜನ ಮೆಚ್ಚುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai) ಆಡಳಿತ ನಡೆಸುತ್ತಿದ್ದಾರೆ. ಅಧಿಕಾರವಹಿಸಿಕೊಂಡ ದಿನದಿಂದಲೇ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್‌ ತಿರಸ್ಕರಿಸಿ ಜನಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ಕೃಷಿ ಕಾಯ್ದೆ ವಾಪಸ್‌ ಮೋದಿ ದೊಡ್ಡತನ: ಕೃಷಿ ಕಾಯ್ದೆಯನ್ನು ಹಿಂಪಡೆದಿದ್ದು ಪ್ರಧಾನಿ ಮೋದಿ (PM Narendra modi) ಅವರ ದೊಡ್ಡತನ, ಒಂದು ವರ್ಗದ ರೈತರು ಮನವೊಲಿಕೆಗೆ ಒಪ್ಪದಿದ್ದಕ್ಕೆ ಕಾಳಜಿಯಿಂದ ಕೃಷಿ ಕಾಯ್ದೆ ವಾಪಾಸ್‌ ಪಡೆದಿದ್ದಾರೆ. ಆದರೆ, ಕೃಷಿ ಕಾಯ್ದೆ ಬಗ್ಗೆ ಹೋರಾಟವನ್ನೇ ಮಾಡದ ಕಾಂಗ್ರೆಸ್‌ ಪಕ್ಷದವರು ಗೆಜ್ಜೆ ಕಟ್ಟಿಕೊಂಡು ಕುಣೀತಾ ಇದಾರೆ, ಅವರು ಪ್ರತಿಭಟನೆಗೆ ತೆರಳಿದ್ದಾಗ ರೈತರು ವಾಪಾಸ್‌ ಕಳುಹಿಸಿದ್ದರು, ಈಗ ತಾವೇ ವಾಪಸ್‌ ಪಡೆದವರಂತೆ ಬೀದಿಯಲ್ಲಿ ಕುಣಿತಾ ಇದಾರೆ ಎಂದು ಕಿಡಿಕಾರಿದರು.

ಅಕಾಲಿಕ ಮಳೆಗೆ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗುತ್ತಿದ್ದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದನ್ನು ಸರ್ಕಾರ ಘೋಷಣೆ ಮಾಡಲಾಗುತ್ತಿಲ್ಲ, ಚುನಾವಣೆ ಮುಗಿದ ಕೂಡಲೇ ಪರಿಹಾರ ಒದಗಿಸುವ ಕೆಲಸವಾಗಲಿದೆ ಎಂದರು.

ಸಿದ್ದರಾಮಯ್ಯಗೆ ತಿರುಗೇಟು : 100 ಕೋಟಿ ಕೊರೋನಾ ಲಸಿಕೆ (Corona Vaccine) ಸಂಭ್ರಮವನ್ನು ಲೇವಡಿ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ (siddaramaiah) ಸಚಿವ ಆರ್. ಅಶೋಕ್ (R Ashok) ತಿರುಗೇಟು ಕೊಟ್ಟಿದ್ದಾರೆ.

ದೇಶದಲ್ಲಿ 50 ಲಕ್ಷ ಜನ ಕೊವಿಡ್‌ಗೆ ಬಲಿಯಾಗಿದ್ದಾರೆ. ಆದ್ರೆ 100 ಕೋಟಿ ಲಸಿಕೆ ಹಾಕಿದ್ದೀವಚಿ ಅಂತಾ ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೆ. ಇದರಲ್ಲಿ 29 ಕೋಟಿ ಜನರು 2 ಡೋಸ್ ಪಡೆದಿದ್ದಾರೆ. 42 ಕೋಟಿ ಜನರು ಸಿಂಗಲ್ ಡೋಸ್ ಪಡೆದಿದ್ದಾರೆ. ಇದು ವಿಪರ್ಯಾಸ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಶೋಕ್, WHO ದೇಶದ ಪ್ರಧಾನಿಗಳು, ಲಸಿಕೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೇ (World Health organization) ಅಭಿನಂದನೆ ಸಲ್ಲಿಸಿದ ಮೇಲೆ ಬೇರೆ ಯಾರೇ ಕಾಮೆಂಟ್ ಮಾಡಿದ್ರು ಮೂರು ನಯಾ ಪೈಸದ ಬೆಲೆ ಇಲ್ಲ. ಸಣ್ಣಪುಟ್ಟ ಜನ ಇದಕ್ಕೆ ಮಾತಾಡಿದ್ರೆ ಯಾರು ತಲೆ ಕೆಡಿಸಿಕೊಂಡಿಲ್ಲ. ಸಿದ್ದರಾಮಯ್ಯ ವಿರೋಧ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ಹೀಗೆ ಮಾತಾಡ್ತಿರಲಿ. ಅದಕ್ಕೆ ಇನ್ನು ಕಳೆ ಬರುತ್ತೆ. ಪ್ರಧಾನಿ ಮೋದಿಯನ್ನ ಟೀಕೆ ಮಾಡದೇ ಹೋದ್ರೆ ಕಾಂಗ್ರೆಸ್‌ನವರಿಗೆ ಕುಡಿಯುವ ನೀರು ಜೀರ್ಣ ಆಗೊಲ್ಲ. ಟೀಕೆ ಮಾಡೋದು ಕಾಂಗ್ರೆಸ್ ಅವರ ಗುಣ ಎಂದು ಕಿಡಿಕಾರಿದರು.

ಕಾಂಗ್ರೆಸ್ ಹೈಕಮಾಂಡ್ ಕೂಡಾ ಮೋದಿಯನ್ನ ಟೀಕೆ ಮಾಡಿ ಅಂತ ಹೇಳಿದೆ. ಯಾವುದಕ್ಕೆ ಟೀಕೆ ಮಾಡಬೇಕು ಅನ್ನೊ ಪರಿಜ್ಞಾನ ಸಿದ್ದರಾಮಯ್ಯಗೆ ಇಲ್ಲ. ಒಳ್ಳೆ ಕೆಲಸ ಮಾಡಿದಾಗ ಒಳ್ಳೆಯದನ್ನ ಹೇಳಬೇಕು. ಇಂತಹ ನಾಯಕನ ಬಗ್ಗೆ ನಮಗೆ ಬೇಸರ ಆಗ್ತಿದೆ ಎಂದರು.

ಭಾರತವು ಗುರುವಾರ ಬೆಳಗ್ಗೆ ದಾಖಲೆಯ 100 ಕೋಟಿ ಡೋಸ್ ಲಸಿಕೆ ನೀಡುವ ಮುಖಾಂತರ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದು, ಲಸಿಕೆ ಅಭಿಯಾನ ಆರಂಭವಾಗ 279 ದಿನಗಳಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ಸಾಧನೆ ಮಾಡಿದಂತಾಗಿದೆ.