Asianet Suvarna News Asianet Suvarna News

Jan Swaraj Yatra| ಪರಿಷತ್‌ ಚುನಾವಣೆ ಬಳಿಕ ಪ್ರವಾಸ: ಬಿ.ಎಸ್‌.ಯಡಿ​ಯೂ​ರ​ಪ್ಪ

*   ರೈತರ ಭಾವನೆಗೆ ಕೇಂದ್ರ ಬೆಲೆ ನೀಡಿದೆ
*   ಪರಿಷತ್‌ ಚುನಾವಣೆಯಲ್ಲಿ 18ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುತ್ತೇವೆ
*   ಕೇಂದ್ರ ಸರ್ಕಾರದ್ದು ಐತಿಹಾಸಿಕ ತೀರ್ಮಾನ

Karnataka Tour After the Vidhan Parishat Election Says BS Yediyurappa grg
Author
Bengaluru, First Published Nov 20, 2021, 10:43 AM IST

ಹುಬ್ಬಳ್ಳಿ(ನ.20):  ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಈಗಾಗಲೇ ನಾವು ಗೆದ್ದಾಗಿದೆ. ಈಗ ಬರೀ ಗೆಲುವಿನ ಅಂತರ ತಿಳಿದುಕೊಳ್ಳಲು ಚುನಾವಣೆ ನಡೆಯುತ್ತಿರುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa), ಪರಿಷತ್‌ ಚುನಾವಣೆ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವೆ. ಈ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದ್ದಾರೆ. 

ಇಲ್ಲಿಯ ಕುಸುಗಲ್‌ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ವಿಧಾನ ಪರಿಷತ್‌ ಚುನಾವಣೆ ಪ್ರಚಾರಾರ್ಥ ಶುಕ್ರವಾರ ನಡೆದ ಜನಸ್ವರಾಜ್‌(JanSwaraj) ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಪರಿಷತ್‌ ಚುನಾವಣೆಯಲ್ಲಿ 18ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಈಗಾಗಲೇ ಗೆದ್ದಾಗಿದೆ. ಈಗ ಚುನಾವಣೆ ನಡೆಯುತ್ತಿರುವ ಗೆಲುವಿನ ಅಂತರ ತಿಳಿದುಕೊಳ್ಳಲು ಮಾತ್ರ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಸಲ ಪರಿಷತ್‌ನಲ್ಲೂ ನಾವು ಬಹುಮತ ಪಡೆಯುತ್ತೇವೆ ಎಂದರು.

ಪರಿಷತ್‌ ಚುನಾವಣೆ ಬಳಿಕ ರಾಜ್ಯಾದ್ಯಂತ(Karnataka) ಪ್ರವಾಸ ಕೈಗೊಳ್ಳುತ್ತೇನೆ. ಜನಪರ ಯೋಜನೆಗಳೊಂದಿಗೆ ಬಿಜೆಪಿ(BJP) ಜನರ ವಿಶ್ವಾಸ ಗಳಿಸಿದೆ. ಪ್ರತಿ ಜಿಲ್ಲೆಗೆ ಭೇಟಿಯಾಗಿ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಹುರಿದುಂಬಿಸಲಾಗವುದು. ಈ ಮೂಲಕ ಪಕ್ಷವನ್ನು ಮತ್ತಷ್ಟುಬಲಿಷ್ಠ ಪಡಿಸಲಾಗುವುದು. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ(Assembly Election) 140ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲವು ಸಾಧಿಸುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಾಗುವುದು ಎಂದರು.

MLC Election ಶೀಘ್ರ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ : 6-8 ಕಡೆ ಸ್ಪರ್ಧೆ

ಚುನಾಯಿತ ಪ್ರತಿನಿಧಿಗಳು ಜನರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಹಾಗಾಗಿ ಜನಪ್ರತಿನಿಧಿಗಳು ಜನರೊಂದಿಗೆ ಇದ್ದು ಅವರನ್ನು ವಿಶ್ವಾಸಕ್ಕೆ ಪಡೆದು ಪ್ರಾಮಾಣಿಕತೆಯಿಂದ ಅವರ ಸೇವೆ ಮಾಡಬೇಕು. ಹೋಬಳಿಮಟ್ಟದಿಂದ ಮಹಿಳೆಯರನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಹಣ, ಹೆಂಡ, ತೋಳ್ಬಲ ಹಾಗೂ ಜಾತಿ ವಿಷ ಬೀಜ ಬಿತ್ತಿದ ಕಾಂಗ್ರೆಸ್‌(Congress) ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಹೀಗಾಗಿ ಆ ಹಡಗನ್ನು ಹತ್ತಲು ಯಾರೂ ಬಯಸಲ್ಲ ಎಂದ ಅವರು, ಗ್ರಾಪಂ ಸದಸ್ಯರು ತಾವೂ ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ಬಿಜೆಪಿ ಅಭ್ಯರ್ಥಿಗೆ ಹಾಕಬೇಕು. ಜತೆಗೆ ಬಿಜೆಪಿಗೆ ಮತ ಹಾಕಲು ಹಿಂಜರಿಯುತ್ತಿರುವವರಿಂದಲೂ ಮನವೊಲಿಸಿ ಮತ ಹಾಕಿಸಬೇಕು ಎಂದರು. ಇಡೀ ಜಗತ್ತು ನಮ್ಮ ದೇಶದ ಪ್ರಧಾನಿಯನ್ನು ಗೌರವಿಸುತ್ತದೆ. ಅವರಿಗೆ ಸಿಕ್ಕ ಗೌರವವೆಲ್ಲ ನಮಗೆಲ್ಲ ಸಿಕ್ಕ ಹಾಗೆ ಎಂದು ನುಡಿದರು.

ನಾಳೆ ಬಾಗಲಕೋಟೆ(Bagalkot), ವಿಜಯಪುರ(Vijayapura) ಹಾಗೂ ಬೆಳಗಾವಿಯಲ್ಲಿ(Belagavi) ಸಮಾವೇಶ ನಡೆಸಲಿದ್ದೇವೆ ಎಂದು ತಿಳಿಸಿದರು.

ಈ ವೇಳೆ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌(Pradeep Shettar) ಸಾಧನೆ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. ಸಮಾವೇಶದಲ್ಲಿ ಸಚಿವರಾದ ಶ್ರೀರಾಮುಲು, ಗೋವಿಂದ ಕಾರಜೋಳ, ಶಂಕರ ಪಾಟೀಲ ಮುನೇನಕೊಪ್ಪ, ವಿಪ ಸದಸ್ಯರಾದ ಪ್ರದೀಪ ಶೆಟ್ಟರ್‌, ಎನ್‌. ರವಿಕುಮಾರ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಲಿಂಗರಾಜ ಪಾಟೀಲ, ಮೋಹನ ಲಿಂಬಿಕಾಯಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಎಸ್‌.ಐ. ಚಿಕ್ಕನಗೌಡರ, ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ ಸೇರಿದಂತೆ ಹಲವರಿದ್ದರು.

ರೈತರ ಭಾವನೆಗೆ ಕೇಂದ್ರ ಬೆಲೆ ನೀಡಿದೆ: ಬಿಎಸ್‌ವೈ

ಯಾವುದೇ ಒಣ ಪ್ರತಿಷ್ಠೆಗೆ ಒಳಗಾಗದೆ ಕೇಂದ್ರ ಸರ್ಕಾರ(Central Government) ಮೂರು ಕೃಷಿ ಕಾಯ್ದೆಗಳನ್ನು(Agricultural Act) ವಾಪಸ್‌ ಪಡೆದು ರೈತರ ಭಾವನೆಗಳಿಗೆ ಬೆಲೆ ನೀಡಿದೆ. ಇದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಐತಿಹಾಸಿಕ ತೀರ್ಮಾನ. ಅವರಿಗೆ ಅಭಿನಂದನೆಗಳು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

Jan Swaraj Yatra| ಕಾಂಗ್ರೆಸ್‌ನವರು ಹಾನಗಲ್ಲ ಗೆದ್ದು ಕೋತಿಯಂತೆ ಆಡುತ್ತಿದ್ದಾರೆ: ಶ್ರೀರಾಮುಲು

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ(Uttara Pradesh) ಸೇರಿದಂತೆ ಯಾವುದೇ ರಾಜ್ಯದ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿಲ್ಲ. ಕಾಯ್ದೆಯಲ್ಲಿ ಲೋಪ ದೋಷಗಳೂ ಇರಲಿಲ್ಲ. ಆದರೆ ರೈತರ ಹೋರಾಟ ಹಾಗೂ ಅವರ ಭಾವನೆಗೆ ಬೆಲೆ ನೀಡಿದೆ. ನಿರ್ಧಾರ ತೆಗೆದುಕೊಳ್ಳಲು ತಡವಾದರೂ ರೈತರಿಗೆ ಬೆಲೆ ನೀಡಿದೆ ಎಂದರು.

ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಹೋರಾಟದ ವೇಳೆ ಆದ ರೈತರ ಸಾವಿಗೂ, ಇದಕ್ಕೂ ಸಂಬಂಧವಿಲ್ಲ. ಕೇಂದ್ರ ಸರ್ಕಾರದ್ದು ಐತಿಹಾಸಿಕ ತೀರ್ಮಾನ. ರೈತರಲ್ಲಿ ಸಂತಸವನ್ನುಂಟು ಮಾಡಿದೆ ಎಂದರು.

ಚುನಾವಣೆ ದೃಷ್ಟಿಯಿಂದ ಅಲ್ಲ: 

ಇದೇ ವೇಳೆ ಕೃಷಿ ಕಾಯ್ದೆ ಹೋರಾಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಚುನಾವಣೆ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿಲ್ಲ. ಹೋರಾಟದ ವೇಳೆ ಏನೆಲ್ಲ ಆಯಿತು ಎನ್ನುವುದು ಬೇರೆ. ಆದರೆ, ಒಣ ಪ್ರತಿಷ್ಠೆಗೆ ಒಳಗಾಗದೇ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ಪ್ರಧಾನಮಂತ್ರಿಗೆ ಅಭಿನಂದಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
 

Follow Us:
Download App:
  • android
  • ios