ಬಿಜೆಪಿ ವಕ್ತಾರರಾಗಿ ಹೆಚ್.ಡಿ. ಕುಮಾರಸ್ವಾಮಿ ನೇಮಕ; ಸಚಿವ ಚಲುವರಾಯಸ್ವಾಮಿ ಟೀಕೆ

ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಜನರು ಖುಷಿಪಡಲು ಅವಕಾಶ ಆರೋಪ ಮಾಡುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬಿಜೆಪಿ ವಕ್ತಾರರನ್ನಾಗಿ ನೇಮಕ ಮಾಡಿರಬೇಕು.

HD Kumaraswamy should have been appointed BJP spokesperson Minister Chaluvarayaswamy sat

ಮಂಡ್ಯ (ಆ.05): ರಾಜ್ಯದಲ್ಲಿ ವಿರೋಧ ಪಕ್ಷದವರಾಗಿ ಬಿಜೆಪಿಯರವು ಏನೂ ಮಾಡುತ್ತಿಲ್ಲ. ಆದರೆ, ಜೆಡಿಎಸ್‌ನ ಮುಖಂಡ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡುತ್ತಿದ್ದಾರೆ. ಅವರನ್ನೇ ಬಿಜೆಪಿಯ (ವಿರೋಧ ಪಕ್ಷದ) ವಕ್ತಾರರನ್ನಾಗಿ ಮಾಡಿರಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಟೀಕೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅವರು ಏನು ಮಾತಾಡುತ್ತಿಲ್ಲ. ಬರಿ ಕುಮಾರಸ್ವಾಮಿ ಎಲ್ಲಾ ಮಾತಾಡುತ್ತಾ ಇದ್ದಾರೆ. ಕುಮಾರಸ್ವಾಮಿಗೆ ಮಾತನಾಡಲು ಬಿಜೆಪಿ ಬಿಟ್ಟುಕೊಟ್ಟಿರಬೇಕು. ನಮ್ಮ ಉಚಿತ ಯೋಜನೆಗಳ ಬಗ್ಗೆ ಜನರಿಗೆ ಖುಷಿ ಇದೆ. ಈ ಖುಷಿಯನ್ನು ತಣ್ಣಗೆ ಮಾಡಲು ಕುಮಾರಸ್ವಾಮಿ ಹೀಗೆ ಮಾತಾಡಿತ್ತಾರೆ. ಕುಮಾರಸ್ವಾಮಿಯನ್ನಾ ಬಿಜೆಪಿ ವಕ್ತಾರರನ್ನಾಗಿ ನೇಮಕ ಮಾಡಿರಬೇಕು ಎಂದು ಟೀಕೆ ಮಾಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಯಾಕೆ ಅಂತಾ ಕೇಳಿದ್ರೆ ಸಮ್ಮಿಶ್ರ ಸರ್ಕಾರ ಅಂತಾ ಹೇಳ್ತಾ ಇದ್ದರು. ಆಗ ಮುಖ್ಯಮಂತ್ರಿ ಕುರ್ಚಿ ಇದ್ದಿದ್ದು, ಒಂದೇ ಇದ್ದಿದ್ದು ಎರಡು ಅಲ್ಲ.

ಕುಮಾರಸ್ವಾಮಿ ಹೊಸ ಬಾಂಬ್‌: 15 ಪರ್ಸೆಂಟ್‌ ಕಮೀಷನ್‌ ಆಧಾರದಲ್ಲಿ ಬಿಬಿಎಂಪಿ 710 ಕೋಟಿ ರೂ. ಹಣ ಬಿಡುಗಡೆ

ಕೊಟ್ಟ ಭರವಸೆ ಈಡೇರಿಸದೇ ಸುಳ್ಳು ಆರೋಪ: ಕುಮಾರಸ್ವಾಮಿ ಎಲ್ಲ ಯೋಜನೆ ಹಾಗೂ ದಾಖಲೆಗಳಿಗೆ ಸಹಿ ಹಾಕುತ್ತಿದ್ದದ್ದು, ಅವರ ಪೆನ್‌ನಲ್ಲಿಯೇ. ಹಣಕಾಸಿನ ಖಾತೆಯನ್ನೂ ಅವರೇ ಇಟ್ಟುಕೊಂಡಿದ್ದರು. ಇವರು ಕೊಟ್ಟ ಭರವಸೆಗಳನ್ನು ಈಡೇರಿಸಲು ಯಾವುದೇ ತೊಂದರೆ ಇರಲಿಲ್ಲ. ಈಗ ನಾನು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಈಗ ಜೆಡಿಎಸ್‌ ಬಿಜೆಪಿಗೆ ಲೋಕಸಭೆಗೆ ಏನು ಎಂಬ ಆತಂಕ ಬಂದಿದೆ. ಹೀಗಾಗಿ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ದಿಕ್ಕುತಪ್ಪಿಸಲು ಹೀಗೆ ಹೇಳ್ತಾ ಇದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ವರ್ಗಾವಣೆಗಳು ಎಲ್ಲರ ಕಾಲದಲ್ಲೂ ಆಗಿವೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಎಲ್ಲರ ಕಾಲದಲ್ಲೂ ವರ್ಗಾವಣೆಗಳು ಆಗಿವೆ. ಹೀಗೆ, ಮಾತಾಡೋದು ಮಾಜಿ ಮುಖ್ಯಮಂತ್ರಿ ಆದವರಿಗೆ ಗೌರವ ತರಲ್ಲ. ಈ ರಾಜ್ಯದ ಮುತ್ಸದ್ದಿ ರಾಜಕಾರಣಿ ದೇವೇಗೌಡರು. ಅವರ ಬಳಿ ಕೇಳಿ ನಿಮ್ಮ ಮಗ ಹೀಗೆ ಹೇಳ್ತಾ ಇದಾರೆ ಅಂತಾ. ದೇವೇಗೌಡರು ಏನಾದ್ರು ಹೇಳಿದ್ರೆ ನಾವು ಹೇಳ್ತೀವಿ. ಈಗಾಗಲೇ ನಾವು ಅನೇಕರಿಗೆ ಉತ್ತರ ಕೊಡುವುದನ್ನು ಬಿಟ್ಟಿದ್ದೀವಿ, ಈಗ ಕುಮಾರಸ್ವಾಮಿ ಅವರಿಗೂ ಉತ್ತರ ಕೊಡವುದನ್ನು ಬಿಟ್ಟು ಬಿಡುತ್ತೇವೆ. ದೇವೇಗೌಡರ ಜೊತೆ ನಾನು ಇದ್ದಾಗ ಹೇಳುತ್ತಿದ್ದುದನ್ನು, ಈಗ ಹೇಳೋಕೆ ಆಗಲ್ಲ. ದೇವೇಗೌಡರು, ಕುಮಾರಸ್ವಾಮಿ ಮತ್ತು ನಾನು ಮೂರು ಜನ ಊಟ ಮಾಡ್ತಾ ಇದ್ದಾಗ ಹೇಳ್ತಾ ಇದ್ದರು. ಆ ವಿಚಾರಗಳನ್ನು ಈಗ ಹೇಳೊದಕ್ಕೆ ಆಗಲ್ಲ. ಖಾಸಗಿ ವಿಚಾರ ಚರ್ಚೆಗಳನ್ನು ಈಗ ಹೇಳುವುದು ಸರಿಯಲ್ಲ. ದೇವೇಗೌಡರು ವರ್ಗಾವಣೆ ವಿಚಾರ ತಪ್ಪು ಎಂದ್ರೆ ಒಪ್ಪಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಶೀಘ್ರ ನಾಲೆಗಳಿಗೆ ಕೆಆರ್‌ಎಸ್‌ ನೀರು ಬಿಡುಗಡೆ: ಕೆಆರ್‌ಎಸ್‌ ಡ್ಯಾಂನಲ್ಲಿ 113 ಅಡಿಯಷ್ಟು ನೀರು ಇದೆ. ಕುಡಿಯುವ ನೀರು ಹಾಗೂ ಮಳೆಯ ಆತಂಕ ಇದೆ. ಒಂದು ವೇಳೆ ಈಗ ನೀರು ಬಿಟ್ಟರೆ, ಮುಂದೆ ಮಳೆ ಬೀಳದೆ ಇದ್ದರೆ ಆಗ, ಬೆಳೆದ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗುತ್ತದೆ.ಬೆಳೆದ ಭತ್ತಕ್ಕೆ ತೊಂದರೆ ಆಗುತ್ತಾ ಎಂಬ ಆತಂಕ ಇದೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತಾ ಇದ್ದೀವಿ. ಈ ವಾರದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ‌ ಜೊತೆ ಸಭೆ ನಡೆಸುತ್ತೀವಿ. ಆಗ ನೀರು ಹೇಗೆ ಕೊಡಬೇಕು ಎನ್ನೋದು ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಈ ಜನ್ಮದಲ್ಲಿ ಕುಮಾರಸ್ವಾಮಿ, ಬೊಮ್ಮಾಯಿ ಇಬ್ಬರೇ ಸತ್ಯ ಹರಿಶ್ಚಂದ್ರರು: ವಿಶ್ವನಾಥ್ ವ್ಯಂಗ್ಯ

ಕೇಂದ್ರದ ಮೇಲೆ ಒತ್ತಡ ಹಾಕುತ್ತಿರುವ ತಮಿಳುನಾಡು ಸಿಎಂ: ಈ ತಿಂಗಳು 11ರ ಮೇಲೆ ಮಳೆ ಬೀಳುತ್ತದೆ ಎಂಬ ವರದಿ ಇದೆ. ಇದನ್ನೆಲ್ಲಾ ನೋಡಿಕೊಂಡು ತೀರ್ಮಾನ ಮಾಡಿಕೊಳ್ಳುತ್ತೇವೆ. ತಮಿಳುನಾಡು ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಹೋಗಿ. ಕೆಆರ್‌ಎಸ್‌ ಜಲಾಶಯದಿಂದ ನೀರು ಬಿಡಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ನ್ಯಾಯಾಲಯದ ಹಂಚಿಕೆ ಪ್ರಕಾರ ನೀರು ಕೊಡಿ ಎಂದು ಕೇಳ್ತಾ ಇದ್ದಾರೆ. ನಮ್ಮಲ್ಲೂ ಕುಡಿಯುವ ನೀರು, ವ್ಯವಸಾಯಕ್ಕೆ ಎರಡಕ್ಕೂ ನೀರು ಬೇಕಾಗಿದೆ. ಕಳೆದ 15 ದಿನಗಳಿಂದ ತಮಿಳುನಾಡು ಒತ್ತಡ ಮಾಡ್ತಾ ಇದೆ. ಈಗಾಗಲೇ ನೀರಾವರಿ ಸಚಿವರು ಹಾಗೂ ಅಧಿಕಾರಿಗಳು ಕೇಂದ್ರಕ್ಕೆ  ಮನವರಿಕೆ ಮಾಡಿದ್ದಾರೆ ಎಂದರು.

Latest Videos
Follow Us:
Download App:
  • android
  • ios