ಹೆಚ್‌ಡಿಕೆ ಪೆನ್‌ಡ್ರೈವ್ ಸತ್ಯಾಸತ್ಯತೆ ತನಿಖೆ ಮಾಡ್ತೇವೆ: ಸಚಿವ ಎಂ ಬಿ ಪಾಟೀಲ್

ಹೆಚ್‌ಡಿಕೆ ಪೆನ್ ಡ್ರೈವ್ ಬಿಡುಗಡೆ ಮಾಡುವ ಹೆದರಿಕೆ ಹಾಕುತ್ತಿದ್ದಾರೆ. ಪೆನ್ ಡ್ರೈವ್ ಒಳಗೆ ಸತ್ಯವಾದದ್ದು ಇದ್ದರೆ ತನಿಖೆ ಮಾಡಬೇಕಾಗುತ್ತೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

HD Kumaraswamy pen drive investigate must says Minister MB Patil gow

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಜುಲೈ 09): ಮಾಜಿ ಸಿಎಂ ಕುಮಾರಸ್ವಾಮಿ ಪೆನ್ ಡ್ರೈವ್ ಬಿಡುಗಡೆ ಮಾಡುವ ಹೆದರಿಕೆ ಹಾಕುತ್ತಿದ್ದಾರೆ. ಪೆನ್ ಡ್ರೈವ್ ಒಳಗೆ ಸತ್ಯವಾದದ್ದು ಇದ್ದರೆ ತನಿಖೆ ಮಾಡಬೇಕಾಗುತ್ತೆ ಎಂದು ಜಿಲ್ಲೆಯ ಮುಳವಾಡ ಏತನೀರಾವರಿ 3ಹಂತದ ಕಾಮಗಾರಿಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೆನ್ ಡ್ರೈವ್‌ನಲ್ಲಿರುವ ಸತ್ಯಾಸತ್ಯತೆ ತಿಳಿದು ಕೊಳ್ಳಬೇಕಾಗುತ್ತೆ, ವೈಸ್ ಡಿಟೆಕ್ಷನ್ ಸರಿಯಾಗಿದೆಯಾ ಎನ್ನೊದನ್ನ ಕೇಳ್ಬೇಕಾಗುತ್ತೆ ಈಗೆಲ್ಲ ಮಿಮಿಕ್ರಿ ಬೇರೆ ಮಾಡ್ತಾರೆ. ಯಾರು ಮಾತನಾಡಿದ್ದಾರೆ, ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ  ಎಲ್ಲವು ಕೂಡ ತನಿಖೆಯಾಗ ಬೇಕಾಗುತ್ತೆ ಎಂದರು. ಹೆಚ್ಡಿಕೆ ಪೆನ್ ಟ್ರೈವ್ ಬಿಡುಗಡೆ ಮಾಡಿದಾಗ ಅದಕ್ಕೆ ಸರ್ಕಾರ ಉತ್ತರ ಕೊಡುತ್ತದೆ ಎಂದರು.

ಭಾರತದ ಮೊದಲ ಮಹಿಳಾ ಸರಣಿ ಹಂತಕಿ ಬೆಂಗಳೂರಿನ ಸೈನೈಡ್ ಮಲ್ಲಿಕಾ! 10 ವರ್ಷ

ಮಠ-ಮಾನ್ಯಗಳ ಬಗ್ಗೆ ಅಪಾರ ಗೌರವವಿದೆ: 
ಇದೇ ವೇಳೆ ಮಠ ಮಾನ್ಯಗಳಿಗೆ ಅನುದಾನ ಕಡಿತ ಕುರಿತು ಮಾಜಿ ಸಚಿವ ಸಿ.ಸಿ.‌ಪಾಟೀಲ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಎಂಬಿಪಿ, ನಮಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಈ ವರ್ಷ ನಾವು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದೇವೆ. ಹೀಗಾಗಿ ಮುಂದಿನ ಎಲ್ಲ ಮಠ ಮಾನ್ಯಗಳಿಗೆ ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದರು. ಸಿ.ಸಿ. ಪಾಟೀಲ ಸ್ವಲ್ಪ‌ತಾಳ್ಮೆಯಿಂದ ಇರಲಿ, ಅವರದ್ದೇನಾದರೂ ಮಠವಿದೆಯಾ? ಹೇಳಲಿ ಚಾಟಿ ಏಟು ಬೀಸಿದರು. ನಾವು ಬೇದ-ಭಾವ ಮಾಡಲ್ಲ ಎಲ್ಲರಿಗೂ ಅನುದಾನ ಕೊಡುತ್ತೇವೆ. ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚಗಳಿಗೆ, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನ ಸಮಾನವಾಗಿ ಕಾಣ್ತೇವೆ, ಎಲ್ಲರಿಗೂ ಹಣಕಾಸಿನ ಅನುದಾನ‌ ಕೊಡ್ತೇವೆ.

ಬಿಜೆಪಿ ಮಾಜಿ ಶಾಸಕ ನಿಂಬಣ್ಣವರ್ ವಿಧಿವಶ, ಜು.10ರಂದು ಅಂತ್ಯಕ್ರಿಯೆ

ಬಿಜೆಪಿ ಸರ್ಕಾರದ ಗಂಭೀರ ಆರೋಪ ಮಾಡಿದ ಎಂಬಿಪಿ
 ಸಿ ಸಿ ಪಾಟೀಲರು ತಮ್ಮ ಬಜೆಟ್‌ ಗಿಂತ ನಾಲ್ಕೈದು ಸಾವಿರ ಕೋಟಿ ಜಾಸ್ತಿ ಖರ್ಚು ಮಾಡಿದ್ದಾರೆ. ಸಿಸಿ ಪಾಟೀಲ್‌ರು ಯಾಕೆ ಹೆಚ್ಚು ಖರ್ಚು ಮಾಡಿದ್ರು, ಗೊತ್ತಲ್ಲ ಎಂದರು. ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ಹೆಚ್ಚು ಖರ್ಚು ಮಾಡಿದ್ದಾರೆ. ಬಜೆಟ್ ಗಿಂತ ಹೆಚ್ಚು ಯಾಕೆ ಖರ್ಚು ಮಾಡಿದ್ದೀರಿ. ಜನರನ್ನು ಯಾಕೆ ಮರಳು ಮಾಡಿದ್ದೀರಿ ಎಂದು ಎಂ.ಬಿ.ಪಾಟೀಲ ಆರೋಪಿಸಿದರು. ಇದರ‌ ಹಿಂದಿನ ಉದ್ದೇಶ ಏನು ಹಾಗಿದ್ರೆ? ಬಿಬಿಎಂಪಿಯಲ್ಲು ಭ್ರಷ್ಟಾಚಾರ ನಡೆದಿದೆ. ಲೂಟಿ ಹೊಡೆಯಲು ಬಜೆಟ್ ಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದೀರಿ? ಎಂದು ಪ್ರಶ್ನಿಸಿದರು. ಬಜೆಟ್ ಗಿಂತ ಹೆಚ್ಚು ಖರ್ಚು ಮಾಡುವಾಗ ನಿಮ್ಮ ಶಿಸ್ತು ಎಲ್ಲಿತ್ತು. ನೀವು ಮಾಡಿದ ಅಕ್ರಮಗಳನ್ನು, ಅಶಿಸ್ತು ಎಳೆ-ಎಳೆಯಾಗಿ  ನಮ್ಮ ಸಿಎಂ ಬಜೆಟ್ ಪುಸ್ತಕದಲ್ಲಿಯೇ ಹೇಳಿ ಬಿಟ್ಟಿದ್ದಾರೆ. ಇವರ ಮುಖ ಏನು ಉಳಿದಿಲ್ಲ, ಇವರನ್ನು ಸಿಎಂ ಎಕ್ಸಪೋಸ್ ಮಾಡಿದ್ದಾರೆ ಎಂದರು.

Latest Videos
Follow Us:
Download App:
  • android
  • ios