ಬೆಂಗಳೂರು, (ಮಾ.24): ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ, ರಮೇಶ್​ ಕುಮಾರ್ ಏಕ ಪತ್ನಿ ವ್ರತಸ್ಥರ ಎಂಬ ಸಚಿವ ಡಾ. ಸುಧಾಕರ್ ಹೇಳಿಕೆ ವಿಚಾರ ವಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಇಲ್ಲಿ ಯಾರೂ ಸತ್ಯಹರಿಶ್ಚಂದ್ರರು ಅಲ್ಲ. ನನ್ನ ಹೆಸರನ್ನು ಅವರು ಯಾಕೆ ತಂದ್ರು? ನಾನು ಧೈರ್ಯವಾಗಿ ಹೇಳಿದ್ದೇನೆ. ಭೂಮಿ ಮೇಲೆ ಇರೋ ಪ್ರತಿಯೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತದೆ. ಇದ್ರಲ್ಲಿ ಹರಿಶ್ಚಂದ್ರ ಯಾರು ಅನ್ನೋದು ಚರ್ಚೆ ಮಾಡಿದ್ರೆ, ಇಲ್ಲಿ ಇರೋ ಎಲ್ಲರ ಮನೆಯ ದೋಸೆಯೂ ತೂತೇ ಎಂದರು.

ಸಿದ್ದರಾಮಯ್ಯ, ಡಿಕೆಶಿ, ರಮೇಶ್ ಕುಮಾರ್ ಏಕಪತ್ನಿ ವ್ರತಸ್ಥರಲ್ವಾ, ಈ ತನಿಖೆಗೆ ಒಪ್ಪಲಿ: ಸುಧಾಕರ್ ಸವಾಲ್..!

ರಾಜ್ಯದ ಜನರ ಮೇಲೆ ಒಂದು ದೃಷ್ಟಿ ಇರಲಿ. ಎಲ್ಲಾರ ಮನೆ ದೋಸೆ ತೂತು. ನಾನು ಜೀವನದಲ್ಲಿ ಒಂದು ಸಾರಿ ತಪ್ಪು ಮಾಡಿದ್ದೇನೆ. ಅದನ್ನು ಸದನದಲ್ಲಿ ಒಪ್ಪಿಕೊಂಡಿದ್ದೇನೆ. ನನ್ನ ಬಗ್ಗೆ ಯಾಕೆ ಹೆಸರು ಪ್ರಸ್ತಾಪ ಮಾಡಿದ್ರು ಅಂತ ಗೊತ್ತಿಲ್ಲ ಎಂದು ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಯಾರು ಹರಿಶ್ಚಂದ್ರರಲ್ಲ, ಸುಮ್ಮನೆ ಏಕೆ ರಾಡಿ ಎರಚಿಕೊಳ್ಳುತ್ತೀರಿ. ನೀವು ಸತ್ಯವಂತರಾದರೇ ನೀವು ಕೋರ್ಟ್ ಗೆ ಏಕೆ ತಡೆಯಾಜ್ಞೆ ತಂದಿರಿ, ನಾನು ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ನನ್ನ ಹೆಸರನ್ನು ಏಕೆ ಎಳೆದು ತರುತ್ತೀರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದ ಕುಮಾರಸ್ವಾಮಿ...!

ನೀವೇ ಸಮಸ್ಯೆ ತಂದು ಬೇರೆಯವರ ಮೇಲೆ ಏಕೆ ಕೆಸರು ಹಾಕುತ್ತಿದ್ದಾರೆ. ಬೀದಿಯಲ್ಲಿ ನಿಂತು ನಗೆಪಾಟಲಿಗೀಡಾಗುತ್ತಿದ್ದಾರೆ ಎಂದ ಕುಮಾರ ಸ್ವಾಮಿ, ಜನರ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸುಧಾಕರ್ ವಿರುದ್ಧ ಕಿಡಿಕಾರಿದರು.