ಕುಟುಂಬದ ಕುಡಿ ಪಟ್ಟಾಭಿಷೇಕಕ್ಕೆ ಕುಮಾರಸ್ವಾಮಿ ಹೋರಾಟ: ಯೋಗೇಶ್ವರ್
ಉಪ ಚುನಾವಣೆ ನನ್ನ ರಾಜಕೀಯ ಜೀವನದ ಪ್ರಮುಖ ಘಟ್ಟ. ಈ ರಾಜಕೀಯ ದೈತ್ಯರು ಎರಡು ಬಾರಿ ನನ್ನ ಮೇಲೆ ನುಗ್ಗಿ ಬಂದು ಸೋಲಿಸಿ ಇದೀಗ ಮೂರನೇ ಬಾರಿಗೆ ತಮ್ಮ ವಂಶದ ಕುಡಿಯನ್ನು ಕರೆ ತಂದಿದ್ದಾರೆ. ಇದೆಲ್ಲವನ್ನು ತಾಲೂಕಿನ ಸ್ವಾಭಿಮಾನಿ ಮತದಾರರು ಯೋಚಿಸಿ, ವಿವೇಚಿಸಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
ಚನ್ನಪಟ್ಟಣ(ನ.10): ತಾಲೂಕಿನ ಅಭಿವೃದ್ಧಿ, ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ ನಾನು ಹೋರಾಟ ಮಾಡುತ್ತಿದ್ದರೆ, ಜೆಡಿಎಸ್ ಕುಟುಂಬದ ಕುಡಿಯ ಪಟ್ಟಾಭಿಷೇಕಕ್ಕಾಗಿ ಹೋರಾಟ ಮಾಡುತ್ತಿದೆ. ಇದರಲ್ಲಿ ಯಾರು ಹಿತವರು ಎಂದು ಯೋಚಿಸಿ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.
ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ತಿಗಳ ಸಮುದಾಯ ಸಭೆಯಲ್ಲಿ ಮಾತನಾಡಿದ ಅವರು, ಬಿಸಲಮ್ಮ ನಮ್ಮ ಮನೆ ದೇವರು, ರಾಜಕೀಯ ಪ್ರಾರಂಭದ ದಿನಗಳಿಂದಲೂ ಈ ಜನಾಂಗ ನನ್ನ ಕೈ ಹಿಡಿದಿದ್ದು, ಈ ಬಾರಿಯು ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಯೋಗೇಶ್ವರ್ ಮತದಾರರಲ್ಲಿ ವಿನಂತಿಸಿದರು.
25 ಎಕರೆ ದಾನ ಮಾಡಲು ಡಿಕೆಶಿ ಮಹಾರಾಜರ ವಂಶಸ್ಥರಾ?: ಕುಮಾರಸ್ವಾಮಿ ವಾಗ್ದಾಳಿ
ಉಪ ಚುನಾವಣೆ ನನ್ನ ರಾಜಕೀಯ ಜೀವನದ ಪ್ರಮುಖ ಘಟ್ಟ. ಈ ರಾಜಕೀಯ ದೈತ್ಯರು ಎರಡು ಬಾರಿ ನನ್ನ ಮೇಲೆ ನುಗ್ಗಿ ಬಂದು ಸೋಲಿಸಿ ಇದೀಗ ಮೂರನೇ ಬಾರಿಗೆ ತಮ್ಮ ವಂಶದ ಕುಡಿಯನ್ನು ಕರೆ ತಂದಿದ್ದಾರೆ. ಇದೆಲ್ಲವನ್ನು ತಾಲೂಕಿನ ಸ್ವಾಭಿಮಾನಿ ಮತದಾರರು ಯೋಚಿಸಿ, ವಿವೇಚಿಸಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದ ಶಾಸಕರಾಗಿದ್ದರು ಜೊತೆಗೆ ಸಿಎಂ ಹುದ್ದೆ ಸಹ ಅಲಂಕರಿಸಿದವರು ಆದರೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂದು ಮತದಾರರೇ ಕೇಳ ಬೇಕಿದೆ. ಕೇವಲ ಚುನಾವಣೆಗಳು ಬಂದಾಗ ಮಾತ್ರ ನಿಮ್ಮೂರುಗಳಿಗೆ ಬರುವ ಇವರನ್ನು ನಂಬದೆ ಸದಾ ನಿಮ್ಮ ಜೊತೆ ಇರುವ ನನಗೆ ಈ ಬಾರಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಶರತ್ ಬಚ್ಚೇಗೌಡ, ನಂಜೇಗೌಡ, ಮಾಜಿ ಶಾಸಕ ನರೇಂದ್ರ ಸ್ವಾಮಿ, ಮಾಜಿ ಮೇಯರ್ ರಮೇಶ್, ಪದ್ಮಾವತಿ ಗಂಗಾಧರ್, ಚಿತ್ರನಟ ಮಧನ್ ಪಟೇಲ್, ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.
ಗೌಡರೇ 5 ವರ್ಷ ಆಡಳಿತ ಮಾಡ್ಲಿಲ್ಲ, ಬೇರೆಯವರಿಗೆ ಬಿಡ್ತಾರಾ?: ಚಲುವರಾಯಸ್ವಾಮಿ
ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ
ಚನ್ನಪಟ್ಟಣ: ಕಾಂಗ್ರೆಸ್ ಸರ್ಕಾರ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ಕೊಟ್ಟಿದ್ದೆ. ಕಾಂಗ್ರೆಸ್ ಸರಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ, ಬಿಜೆಪಿಯಿಂದ ಅಭಿವೃದ್ಧಿಸಾಧ್ಯವಿಲ್ಲ ಎಂಬುದನ್ನು ಮತದಾರರು ಅರಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ರಾಜ್ಯದಲ್ಲಿ ಇನ್ನೂ ಮೂರೂವರೆ ವರ್ಷ ಹಾಗೂ ಮುಂದಿನ ಐದು ವರ್ಷ ನಮ್ಮದೆ ಸರ್ಕಾರ ಇರುತ್ತದೆ. ತಿಗಳ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಿದ್ದೆ ಕಾಂಗ್ರೆಸ್. ಹಾಗಾಗಿ ವದಂತಿಗಳಿಗೆ, ಆಸೆ ಆಮಿಷಗಳಿಗೆ ಬಳಿಯಾಗದೆ ಸಮುದಾಯಕಾಂಗ್ರೆಸ್ ಪಕ್ಷದ ಜೊತೆ ನಿಲ್ಲುವಂತೆ ಮನವಿ ಮಾಡಿದರು. ತಾಲೂಕಿನಲ್ಲಿ ನೀರಾವರಿ ಮಾಡುವುದರ ಜೊತೆಗೆ ನಿಮ್ಮೆಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಯೋಗೇಶ್ವರ್ ಸರ್ವಜನಾಂಗದ ನಾಯಕನಾಗಿ ಗುರುತಿಸಿ ಕೊಂಡಿದ್ದು, ಇಂತಹ ವ್ಯಕ್ತಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸೌದದಲ್ಲಿ ಇದ್ದಾಗ ಮಾತ್ರ ತಾಲೂಕಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.