Mysuru: ಬಿಜೆಪಿಗರು ಕನ್ನಡಕ್ಕೆ ದ್ರೋಹ ಎಸಗುತ್ತಿದ್ದಾರೆ: ಎಚ್‌.ಸಿ.ಮಹದೇವಪ್ಪ

ಕರ್ನಾಟಕದಂತಹ ಕನ್ನಡ ನೆಲದಲ್ಲೂ ಹಿಂದಿ ಭಾಷೆಯನ್ನೇ ಹೊತ್ತು ಮೆರೆಸುವ ಕೆಲಸ ಮಾಡುತ್ತಿರುವ ಬಿಜೆಪಿಗರು ಕನ್ನಡ ಭಾಷೆಗೆ ನೇರವಾದ ದ್ರೋಹ ಎಸಗುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ದೂರಿದ್ದಾರೆ.

HC Mahadevappa Slams to BJP over Hindi Diwas at Mysuru gvd

ಮೈಸೂರು (ಸೆ.15): ಕರ್ನಾಟಕದಂತಹ ಕನ್ನಡ ನೆಲದಲ್ಲೂ ಹಿಂದಿ ಭಾಷೆಯನ್ನೇ ಹೊತ್ತು ಮೆರೆಸುವ ಕೆಲಸ ಮಾಡುತ್ತಿರುವ ಬಿಜೆಪಿಗರು ಕನ್ನಡ ಭಾಷೆಗೆ ನೇರವಾದ ದ್ರೋಹ ಎಸಗುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿ ಭಾಷೆಯನ್ನು ನಮ್ಮ ಸಹ ರಾಜ್ಯಗಳ ಹಾಗೂ ಭಾರತದ ಒಂದು ಅಧಿಕೃತ ಭಾಷೆಯಾಗಿ ನೋಡಬೇಕೆ ಹೊರತು ಅದನ್ನು ರಾಷ್ಟ್ರೀಯ ಭಾಷೆ ಎನ್ನುವುದು ಮೂರ್ಖತನದ ಮತ್ತು ಗಣರಾಜ್ಯದ ಆಶಯಕ್ಕೆ ವಿರುದ್ಧವಾದದ್ದು. ಹಿಂದಿ ದಿವಸ ಎಂಬುದು ಹಿಂದಿಯನ್ನು ಅಧಿಕೃತವಾಗಿ ಮಾತನಾಡುವ ರಾಜ್ಯಗಳಿಗೆ ಸಂಭ್ರಮದ ವಿಷಯವಾದರೆ ನಮಗೆಲ್ಲಾ ಸೋದರತ್ವ ಮತ್ತು ಸಹಬಾಳ್ವೆಯ ಕಾರಣಕ್ಕಾಗಿ ಶುಭ ಕೋರುವ ದಿನವಷ್ಟೇ. 

ಹಿಂದಿ ರಾಷ್ಟ್ರಭಾಷೆ ಆಗಲ್ಲ ಎಂದಿದ್ದಾರೆ. ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆ ಆಗಿರುವ ಭಾರತದಲ್ಲಿ ಹಲವು ರಾಜ್ಯಗಳು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಕೊಂಕಣಿ, ಉರ್ದು, ಮಣಿಪುರಿ ಆದಿಯಾಗಿ ಹಲವು ಭಾಷೆಗಳನ್ನು ಆಯಾ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಿಕೊಂಡಿವೆ. ಈ ಪೈಕಿ ಬಿಹಾರ, ದೆಹಲಿ, ಹರಿಯಾಣ, ಜಾರ್ಖಂಡ್‌, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರಾಖಂಡ್‌ ಮತ್ತು ಉತ್ತರಪ್ರದೇಶ ರಾಜ್ಯದ ಅಧಿಕೃತ ಭಾಷೆಯೂ ಹಿಂದಿ ಆಗಿದ್ದು ಈ ದಿನ ಹಿಂದಿ ದಿವಸವು ಹಿಂದಿ ಭಾಷೆ ಅಧಿಕೃತವಾಗಿ ಬಳಕೆ ಆಗುತ್ತಿರುವ ಈ ರಾಜ್ಯಗಳಿಗೆ ಅನ್ವಯಿಸುತ್ತದೆ.

Mysuru Dasara 2022: ಸೆ.19ರಿಂದ ರಂಗ ಸಂಗೀತ, ದಸರಾ ರಂಗೋತ್ಸವ

ಈ ಹಿನ್ನೆಲೆಯಲ್ಲಿ ಭಾರತದ ಸಹ ಜೀವಿಗಳಾದ ನಾವು ಭಾಷಾ ಸಾಮರಸ್ಯದ ದೃಷ್ಟಿಯಿಂದ ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿಕೊಂಡಿರುವ ಈ ಕೆಲವು ರಾಜ್ಯಗಳಿಗೆ ಹಿಂದಿ ದಿವಸದ ಶುಭಾಶಯ ತಿಳಿಸುವುದು ಸಾಮರಸ್ಯದ ನಡೆ ಎನಿಸುತ್ತದೆ. ಆದರೆ ಬಿಜೆಪಿ ಮತ್ತು ಕೆಲವು ಅಜ್ಞಾನಿ ಮನಸ್ಸುಗಳು ಹಿಂದಿಯನ್ನು ರಾಷ್ಟ್ರಭಾಷೆ ಎಂಬ ಭ್ರಮೆ ಹಬ್ಬಿಸುತ್ತಿದ್ದು, ಭಾರತದ ಇತರೆ ಪ್ರಾದೇಶಿಕ ಭಾಷೆಗಳು ಮತ್ತು ಅದನ್ನು ಮಾತನಾಡುವ ಜನರಲ್ಲಿ ಕೀಳರಿಮೆಯ ಒತ್ತಡವನ್ನು ಹೇರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವ ದುರ್ಬಲಗೊಳಿಸುತ್ತಿರುವ ಬಿಜೆಪಿ: ಸಾಮಾಜಿಕ ಸ್ವಾತಂತ್ರ್ಯ ಇರದೇ ಇರುವುದು ಸ್ವಾತಂತ್ರ್ಯವೇ ಅಲ್ಲ. ಬಲಾಢ್ಯರಿಂದ ಬಲಹೀನರನ್ನು ರಕ್ಷಣೆ ಮಾಡುವ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವವಾಗಿದೆ. ಇಂದು ಪ್ರಜಾಪ್ರಭುತ್ವ ದುರ್ಬಲವಾಗುತ್ತಿರುವುದು ವಿಷಾದನೀಯ. ಎಲ್ಲರೂ ಒಂದಾಗಿ ಪ್ರಜಾಪ್ರಭುತ್ವ, ಸಂವಿಧಾನದ ಪರ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್‌ ಮುಖಂಡ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 131ನೇ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದದಲ್ಲಿ ಕುರಿತು ಜಿಲ್ಲಾಮಟ್ಟದ ಚಿಂತನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Mysore Dasara 2022: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆಗೆ ದಿನಾಂಕ ನಿಗದಿ

ಇಂದು ದೇಶದಲ್ಲಿ ಜನಪರವಾಗಿ ಆಡಳಿತ ನಡೆಯುತ್ತಿಲ್ಲ. ಸಂಸತ್ತಿನ ಪ್ರಜಾಪ್ರಭುತ್ವದಲ್ಲಿ ಕಾನೂನು ಮಾಡುವಾಗ ಸಂಸತ್ತಿನ ಚರ್ಚೆ ನಡೆಯಬೇಕು. ಅದು ಆಗದೇ ಸುಗ್ರಿವಾಜ್ಞೆ ಮೂಲಕ ಕಾನೂನುಗಳು ಜಾರಿಗೆಯಾಗುತ್ತಿವೆ. ಎಪಿಎಂಸಿ ಕಾಯ್ದೆಯಿಂದ 20 ಲಕ್ಷ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಗ್ರಾಮೀಣ ಆರ್ಥಿಕ ಬೆನ್ನಲಬು ಮುರಿದು ಹಾಕಲಾಗುತ್ತಿದೆ. ಕೇಂದ್ರ ಸರ್ಕಾರ ಸಂವಿಧಾನವನ್ನು ತಿದ್ದಲು ಹೊರಡಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿರುವ ಸಂವಿಧಾನವನ್ನು ನಾವು ಸಂರಕ್ಷಣೆ ಮಾಡಿದರೆ ಸಂವಿಧಾನ ನಮ್ಮನ್ನು ಉಳಿಸುತ್ತದೆ ಎಂಬುದನ್ನು ಗಮನದಲ್ಲಿ ಇಡಬೇಕಾದ ಅಗತ್ಯವಿದೆ ಎಂದರು.

Latest Videos
Follow Us:
Download App:
  • android
  • ios