Asianet Suvarna News Asianet Suvarna News

ಚಲುವರಾಯಸ್ವಾಮಿಯಿಂದ ದ್ವೇಷದ ರಾಜಕಾರಣ: ಶಾಸಕ ಸುರೇಶ್‌ಗೌಡ ಕಿಡಿ

ನಾಗಮಂಗಲ ಕ್ಷೇತ್ರದಲ್ಲಿ ಚಲುವರಾಯಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಗಳನ್ನೆಲ್ಲಾ ತಡೆಹಿಡಿಯುತ್ತಿದ್ದಾರೆ. ಮನಸೋಇಚ್ಛೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಕೆ.ಸುರೇಶ್‌ಗೌಡ ಆರೋಪಿಸಿದರು.

hater politics by chaluvarayaswamy MLA sureshgowda outraged at mandya rav
Author
First Published Jul 10, 2023, 8:57 PM IST | Last Updated Jul 10, 2023, 8:57 PM IST

ಮಂಡ್ಯ (ಜು.10) : ನಾಗಮಂಗಲ ಕ್ಷೇತ್ರದಲ್ಲಿ ಚಲುವರಾಯಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಗಳನ್ನೆಲ್ಲಾ ತಡೆಹಿಡಿಯುತ್ತಿದ್ದಾರೆ. ಮನಸೋಇಚ್ಛೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಕೆ.ಸುರೇಶ್‌ಗೌಡ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಲುವರಾಯಸ್ವಾಮಿ(Chaluvarayaswamy) ಮಹಾನ್‌ ಸುಳ್ಳುಗಾರ. 5 ಲಕ್ಷ ರು. ಗುತ್ತಿಗೆ ಕೆಲಸ ಮಾಡುವ ಕಂಟ್ರಾಕ್ಟರ್‌ ಆಗಿ, ಪುಟ್ಟೇಗೌಡರ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದವನನ್ನು ಕರೆತಂದು ಎಂಎಲ್‌ಎ, ಮಂತ್ರಿ ಮಾಡಿದವರು ಕುಮಾರಸ್ವಾಮಿ(HD Kumaraswamy). ನಾವು ಕುಮಾರಸ್ವಾಮಿಯನ್ನು ಸಿಎಂ ಮಾಡಿ ಎಂದು ಬೊಬ್ಬೆ ಹಾಕುತ್ತಿದ್ದಾರಲ್ಲ ಇವರೇನು ಮೈಸೂರು ಮಹಾರಾಜರ ಮೊಮ್ಮಕ್ಕಳಾ, ಗಾಂಧಿ ಕುಟುಂಬದವರಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

'ನಾಚಿಕೆ ಆಗುವಂಥದ್ದು ನಾನೇನ್‌ ಮಾಡಿದ್ದೇನೆ..ಸುಮ್ನೆ ಕುಂತ್ಕೋ' ಚಲುವರಾಯಸ್ವಾಮಿಗೆ ಎಚ್‌ಡಿಕೆ ಸಿಟ್ಟು

ಕುಮಾರಸ್ವಾಮಿ ಸಿಎಂ ಆದಾಗ ನನ್ನನ್ನು ಮಂತ್ರಿ ಮಾಡುವಂತೆ ಕಾಲು ಹಿಡಿದುಕೊಂಡು ಕುಳಿತಿದ್ದರು. ಅಂದು ವಿಜಯಲಕ್ಷ್ಮೇ ಬಂಡಿಸಿದ್ದೇಗೌಡರನ್ನು ಮಂತ್ರಿ ಮಾಡುವಂತೆ ದೇವೇಗೌಡರು ಸೂಚಿಸಿದ್ದರು. ಆದರೆ, ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿಯನ್ನು ಸಂಪುಟಕ್ಕೆ ಸೇರಿಸಿಕೊಂಡರು. ಇವರ ನಡವಳಿಕೆಯನ್ನು ಅಂದೇ ಕಂಡಿದ್ದ ದೇವೇಗೌಡರು ಇವರನ್ನು ದೂರವೇ ಇಟ್ಟಿದ್ದರು. ಕುಮಾರಸ್ವಾಮಿ ಹತ್ತಿರಕ್ಕೆ ತೆಗೆದುಕೊಂಡಿದ್ದರಿಂದ ಇಂತಹ ಮಾತುಗಳನ್ನು ಕೇಳಬೇಕಾಗುತ್ತಿದೆ ಎಂದು ಹೇಳಿದರು.

ತಾಲೂಕಿನಲ್ಲಿ ನಾನು ಮಂಜೂರು ಮಾಡಿಸಿಕೊಂಡು ಬಂದ ಕಾಮಗಾರಿಗಳನ್ನೆಲ್ಲಾ ತಡೆಹಿಡಿಯುತ್ತಿದ್ದಾರೆ. ಅಲ್ಲದೆ, ಸದನದಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಹೆಸರನ್ನು ಎಳೆದುತಂದಿದ್ದಾರೆ. ದ್ವೇಷದ ರಾಜಕಾರಣಕ್ಕಾಗಿಯೇ ಜಗದೀಶ್‌ನನ್ನು ವರ್ಗಾವಣೆ ಮಾಡಲು ಚಲುವರಾಯಸ್ವಾಮಿ ಪತ್ರ ಕೊಟ್ಟಿದ್ದಾರೆ. ವಿಚಾರ ತಿಳಿದು ಜಗದೀಶ್‌ ನನಗೆ ಕರೆ ಮಾಡಿ ನನ್ನನ್ನು ವರ್ಗಾವಣೆ ಮಾಡಿದ್ದಾರೆ. ನಮ್ಮ ತಾಯಿಗೆ ನಿತ್ಯ ಡಯಾಲಿಸಿಸ್‌ ಮಾಡಿಸಬೇಕಿದೆ. ವರ್ಗಾವಣೆಯಿಂದ ನನಗೆ ತುಂಬಾ ತೊಂದರೆಯಾಗಲಿದೆ. ನಾನು ವಿಷ ಕುಡಿಯುವುದಾಗಿ ಹೇಳಿದ. ಗಾಬರಿಗೊಂಡ ನಾನು ಕೂಡಲೇ ಕೆಎಸ್‌ಆರ್‌ಟಿಸಿ ಡಿಸಿಗೆ ಕರೆ ಮಾಡಿ ಜಗದೀಶ್‌ ವರ್ಗಾವಣೆ ಮಾಡಬೇಡವೆಂದು ಕೋರಿದಾಗ, ಸಚಿವರಿಂದ ತುಂಬಾ ಒತ್ತಡವಿದೆ. ನಾಗಮಂಗಲ ಬಿಟ್ಟು ಕೆ.ಆರ್‌.ಪೇಟೆ, ಪಾಂಡವಪುರಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದರು. ಅದನ್ನು ಆತನಿಗೆ ತಿಳಿಸುವಷ್ಟರಲ್ಲಿ ವಿಷ ಕುಡಿದಿದ್ದ. ಆನಂತರ ಆಸ್ಪತ್ರೆಗೆ ಅವನನ್ನು ಕರೆದೊಯ್ಯುವಾಗ ಅಡ್ಡ ಹಾಕಿದೆ, ಚಿಕಿತ್ಸೆಗೆ ಸಹಕರಿಸಲಿಲ್ಲ ಎಂದೆಲ್ಲಾ ದೂರಿದ್ದಾರೆ. ಆದರೆ, ನಾನು ಅವರ ಮನೆಯವರಿಗೆ ಧೈರ್ಯ ಹೇಳಿ, ಒಳ್ಳೆಯ ಚಿಕಿತ್ಸೆ ಕೊಡಿಸುವ ಸಲುವಾಗಿ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವ ವೇಳೆ ಎರಡು ನಿಮಿಷ ಮಾತನಾಡಿಸಿ ಕಳುಹಿಸಿದೆ. ಅದನ್ನು ಅಪಪ್ರಚಾರ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

 

'ಸೆಕ್ಯುಲರ್ ಅಂತಾ ಹೇಳಿ ದೇವೇಗೌಡರ ಕುತ್ತಿಗೆ ಕುಯ್ದವರು ನೀವು..' ಸಿದ್ಧುಗೆ ಎಚ್‌ಡಿಕೆ ವಾಗ್ಭಾಣ!

ಸದನದಲ್ಲಿ  KSRTC  ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ ಪ್ರತಿಧ್ವನಿಸಿದೆ. ಎಚ್‌ಡಿಕೆ ಹಾಗೂ ಚೆಲುವರಾಯಸ್ವಾಮಿ ನಡುವೆ ಏಕವಚನದಲ್ಲೇ ಮಾತಿನ ಸಮರವೇ ನಡೆದಿದೆ.

ಜಗದೀಶ್‌ ಪ್ರಕರಣದಿಂದ ವರ್ಗಾವಣೆಯ ಒಂದು ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ. ಬೆಳಕಿಗೆ ಬಾರದ ಎಷ್ಟೋ ಪ್ರಕರಣಗಳಿವೆ. ಇವರು ಶಾಸಕರಾಗಿ ಆಯ್ಕೆಯಾದ ಮೇಲೆ ನಾಗಮಂಗಲದಲ್ಲೇ ಒಂದು ಕ್ಯಾಬಿನೆರಟ್‌ ಇದೆ. ಹೋಮ್‌ ಮಿನಿಸ್ಟರ್‌, ಇರಿಗೇಷನ್‌ ಮಿನಿಸ್ಟರ್‌ ಕೂಡ ಇದ್ದಾರೆ. ಎಲ್ಲಾ ಇಲಾಖೆಗಳಲ್ಲೂ ವರ್ಗಾವಣೆ ನಿರಂತರವಾಗಿ ನಡೆದಿದೆ. ನಾನು ಶಾಸಕನಾಗಿ ಆಯ್ಕೆಯಾದಾಗ ಒಂದೇ ಒಂದು ವರ್ಗಾವಣೆಯನ್ನೂ ಮಾಡಿಸಿರಲಿಲ್ಲ ಎಂದರು.

Latest Videos
Follow Us:
Download App:
  • android
  • ios