ಹಾಸನ ಟಿಕೆಟ್‌ ಫೈಟ್‌ಗೆ ತೆರೆ: ಪತ್ನಿ, ಮಕ್ಕಳಿಗೆ ನಿರಾಶೆ ಮಾಡಿದ ಎಚ್.ಡಿ. ರೇವಣ್ಣ

ಹಾಸನ ವಿಧಾನಸಭಾ ಚುನಾವಣೆ ಟಿಕೆಟ್‌ ಹಂಚಿಕೆ ಕುರಿತು ದೇವೇಗೌಡರು, ಕುಮಾರಸ್ವಾಮಿ ಹಾಗೂ ರಾಜ್ಯದ ಅಧ್ಯಕ್ಷ ರಾದ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ. ಎಲ್ಲರ ಅಭಿಪ್ರಾಯ ಪಡೆದುಕೊಂಡ ನಂತರವೇ ಟಿಕೆಟ್‌ ನೀಡಲಾಗುತ್ತದೆ.

Hassan ticket fight chapter close HD Revanna disappointed his wife and children sat

ಹಾಸನ (ಜ.29):  ಹಾಸನ ವಿಧಾನಸಭಾ ಚುನಾವಣೆ ಟಿಕೆಟ್‌ ಹಂಚಿಕೆ ಕುರಿತು ದೇವೇಗೌಡರು, ಕುಮಾರಸ್ವಾಮಿ ಹಾಗೂ ರಾಜ್ಯದ ಅಧ್ಯಕ್ಷ ರಾದ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ. ಎಲ್ಲರೂ ಕೂತು ಚರ್ಚೆಮಾಡಿ ಜನರ ವಿಶ್ವಾಸ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದುಕೊಂಡ ನಂತರವೇ ಟಿಕೆಟ್‌ ನೀಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ನಡುವಿನ ಗೊಂದಲಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ತೆರೆ ಎಳೆದಿದ್ದಾರೆ. 

ಹೊಳೆನರಸೀಪುರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು, ಟಿಕೆಟ್ ಹಂಚಿಕೆ ಬಗ್ಗೆ ನಾನೊಬ್ಬನೇ ತೀರ್ಮಾನ ಮಾಡೋ ಪ್ರಶ್ನೆಯೇ ಇಲ್ಲಾ. ಕುಮಾರಸ್ವಾಮಿ ರೇವಣ್ಣ ನನ್ನ ಯಾವುದೇ ಕಾರಣದಿಂದ ಬೇರ್ಪಡಿಸಲು ಆಗಲ್ಲ. ಯಾರಾದರೂ ಬೇರ್ಪಡಿಸುತ್ತೇನೆ ಎಂದುಕೊಂಡಿದ್ದರೆ ಭ್ರಮನಿರಸನ ಆಗ್ತಾರೆ. ನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಟಿಕೇಟ್ ವಿಚಾರವನ್ನು ದೇವೇಗೌಡರು, ಕುಮಾರಸ್ವಾಮಿ ಹಾಗೂ ರಾಜ್ಯದ ಅಧ್ಯಕ್ಷ ರಾದ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: Hassan JDS Ticket Fight: ಸಾಮಾಜಿಕ ಜಾಲತಾಣದಲ್ಲಿ ಭವಾನಿ ರೇವಣ್ಣ, ಕುಮಾರಸ್ವಾಮಿ ಪರ ಪೋಸ್ಟರ್‌ ವಾರ್

10 ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ: ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಏರ್ ಪೋರ್ಟ್ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದಾರೆ. ಐಐಟಿ ಜಾಗ ಬೇರೆಯದಕ್ಕೆ ಬಳಸಿದ್ದಾರೆ. ಹಾಸನದ ಅಸ್ಪತ್ರೆ ಕುಮಾರಣ್ಣ ಬರದಿದ್ದರೆ ಆಗುವುದಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೇಟ್ ಕುಮಾರಸ್ವಾಮಿ ದೇವೇಗೌಡರು ರಾಜ್ಯದ ಅಧ್ಯಕ್ಷ ರು ಜಿಲ್ಲಾ ಮುಖಂಡರು ಏನು ತೀರ್ಮಾನ ಮಾಡ್ತಾರೆ ಅದೇ ಅಂತಿಮ. ನಾನು ಕುಮಾರಸ್ವಾಮಿ ಬಿಟ್ಟು ತೀರ್ಮಾನ ಮಾಡೋ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ ಅವರಿಗೆ ಕೊಡಿ ಅಂತಾರೆ. ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಪಕ್ಷದಲ್ಲಿ ಕೂತು ತೀರ್ಮಾನ ಮಾಡಲಾಗುತ್ತದೆ. ‌ನಾನಾಗಲಿ, ಸೂರಜ್ ಆಗಲಿ. ಪ್ರಜ್ವಲ್ ಆಗಲಿ ಯಾರೂ ತೀರ್ಮಾನ ಮಾಡೋ ಪ್ರಶ್ನೆ ಇಲ್ಲ ಎಂದರು.

ಹೈಕಮಾಂಡ್‌ ಮಾತು ಕೇಳುತ್ತೇವೆ: ಇನ್ನು ನಮ್ಮ ಪಕ್ಷದ ಹೈ ಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ನಾವೆಲ್ಲರೂ ಬದ್ದರಾಗಿ ಇರಬೇಕಾಗುತ್ತದೆ. ಕುಮಾರಸ್ವಾಮಿ, ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಾಹೇಬ್ರು ಹಾಗೂ  ಜಿಲ್ಲೆಯ ಶಾಸಕರು ನಮ್ಮ ಏಳು ಸೀಟ್ ತೀರ್ಮಾನ ಮಾಡ್ತಾರೆ. ನಮ್ಮದು ಜಿಲ್ಲೆಯ ಅಭಿವೃದ್ಧಿ ಮುಖ್ಯವಾಗಿದೆ ಎಂದು ಹೇಳುವ ಮೂಲಕ ಹಾಸನದ ಟಿಕೇಟ್ ಗೊಂದಲದ ಚರ್ಚೆಗೆ ಎಚ್.ಡಿ. ರೇವಣ್ಣ ಅವರು ತೆರೆ ಎಳೆದಿದ್ದಾರೆ. 

Karnataka Election 2023: ಹಾಸನ ಜೆಡಿಎಸ್ ಟಿಕೆಟ್ ಫೈಟ್: ಭವಾನಿ ರೇವಣ್ಣ ಪಟ್ಟು, ಹೆಚ್.ಡಿ.ಕೆಗೆ ಇಕ್ಕಟ್ಟು

Latest Videos
Follow Us:
Download App:
  • android
  • ios