ಹಳೇಬಿಡು ಗ್ರಾಪಂ ಚುನಾವಣೆ ಬಳಿಕ ನಡೆದ ವಿಜಯೋತ್ಸವ ವೇಳೆ ಬಿಜೆಪಿ ಜೆಡಿಎಸ್ ಪಕ್ಷಗಳ ಸದಸ್ಯರು ನಡುರಸ್ತೆಯಲ್ಲೇ ಬಡಿದಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಹಳೇಬಿಡು ಗ್ರಾಮದ ಹೊಯ್ಸಳ ವೃತ್ತದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಸದಸ್ಯನಿಗೆ ಗಂಭೀರ ಗಾಯ. ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.
ಹಾಸನ (ಜು.29) : ಹಳೇಬಿಡು ಗ್ರಾಪಂ ಚುನಾವಣೆ ಬಳಿಕ ನಡೆದ ವಿಜಯೋತ್ಸವ ವೇಳೆ ಬಿಜೆಪಿ ಜೆಡಿಎಸ್ ಪಕ್ಷಗಳ ಸದಸ್ಯರು ನಡುರಸ್ತೆಯಲ್ಲೇ ಬಡಿದಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಹಳೇಬಿಡು ಗ್ರಾಮದ ಹೊಯ್ಸಳ ವೃತ್ತದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಸದಸ್ಯನಿಗೆ ಗಂಭೀರ ಗಾಯ. ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.
ದಲ್ಲಾಳಿಗಳ ಹಾವಳಿ: ನಾಡಕಚೇರಿ ಉಪತಹಸೀಲ್ದಾರ್‌ಗೆ ಶಾಸಕ ಮಂಜು ತರಾಟೆ
ಏನಿದು ಘಟನೆ?
ಹಳೇಬಿಡು ಗ್ರಾಪಂ ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮೂವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. 20 ಸದಸ್ಯರ ಸಂಖ್ಯಾಬಲ ಹೊಂದಿರುವ ಪಂಚಾಯ್ತಿಯಲ್ಲಿ ವಿಜೇತ ಅಭ್ಯರ್ಥಿಯ ಪರವಾಗಿ 11 ಮತ ಹಾಗೂ ಪರಾಜಿತ ಅಭ್ಯರ್ಥಿಯ ಪರವಾಗಿ 9 ಮತಗಳ ಚಲಾವಣೆಯಾಗಿವೆ. ನೂತನ ಅಧ್ಯಕ್ಷರಾಗಿ ನಿತ್ಯಾನಂದ ಅಧ್ಯಕ್ಷರಾಗಿ ಹಾಗೂ ಕಾಂತಾಮಣಿ ಉಪಾಧ್ಯಕ್ಷರಾಗಿ ಹೆಸರು ಘೋಷಣೆಯಾಗಿದೆ. ಗೆದ್ದ ಸಂಭ್ರಮದಲ್ಲಿ ವಿಜಯೋತ್ಸವ ಆಚರಿಸಿತ್ತು. ಈ ವೇಳೆ ಪರಾಜಿತ ಅಭ್ಯರ್ಥಿಗಳ ನಡುವೆ ಜಗಳ. ಮಾತಿಗೆ ಮಾತು ಬೆಳೆದು ನಡು ರಸ್ತೆಯಲ್ಲಿ ಮಾರಾಮಾರಿ ನಡೆದಿದೆ.
ಸದ್ಯ ಎರಡು ಪಕ್ಷಗಳ ಬೆಂಬಲಿಗರಿಂದ ಹಳೇಬಿಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
