ದಲ್ಲಾಳಿಗಳ ಹಾವಳಿ: ನಾಡಕಚೇರಿ ಉಪತಹಸೀಲ್ದಾರ್‌ಗೆ ಶಾಸಕ ಮಂಜು ತರಾಟೆ
ತಾಲೂಕಿನ ರಾಮನಾಥಪುರ ಹೋಬಳಿಯ ನಾಡ ಕಚೇರಿಗೆ ಶಾಸಕ ಎ. ಮಂಜು ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ, ಉಪತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅರಕಲಗೂಡು (ಜು.25): ತಾಲೂಕಿನ ರಾಮನಾಥಪುರ ಹೋಬಳಿಯ ನಾಡ ಕಚೇರಿಗೆ ಶಾಸಕ ಎ. ಮಂಜು ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ, ಉಪತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮ ಲೆಕ್ಕಿಗರ ವರದಿಯನ್ನು ಕೇಳದೆ ವೃದ್ಧಾಪ್ಯ ವೇತನ ಮಾಡಿ ಕೊಟ್ಟಿದ್ದೀರಿ. ನೀವು ಮಾಡಿಕೊಡಲ್ಲ. ಬದಲಾಗಿ ದಲ್ಲಾಳಿ ತಂದು ಕೊಡುತ್ತಾನೆ. ಆಗ ನೀವು ಮಾಡುತ್ತೀರಿ. ಫಲಾನುಭವಿಯ ಬಗ್ಗೆ ಮಾಹಿತಿಯನ್ನು ಗ್ರಾಮ ಲೆಕ್ಕಿಗರಿಂದ ಪಡೆಯುವುದಿಲ್ಲ. ಅ ವ್ಯಕ್ತಿ ಗ್ರಾಮದಲ್ಲಿ ಹೋಗಿ ಹಣ ನೀಡಿ ಮಾಡಿಸಿಕೊಂಡು ಬಂದೆ ಎಂದು ಹೇಳುತ್ತಾನೆ. ಆಗ ವಿಎ ಗೌರವ ಏನಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರ ಉರುಳಿಸಲು ಎಚ್‌ಡಿಕೆ ಅಪ್ಪನಿಂದಲೂ ಸಾಧ್ಯವಿಲ್ಲ’ ಕುಮಾರಸ್ವಾಮಿ ವಿರುದ್ಧ ಮೊಯ್ಲಿ ಕಿಡಿ
ಈ ವೇಳೆ ಸಾರ್ವಜನಿಕರು ನಮ್ಮ ಗ್ರಾಮದಲ್ಲಿ ಕೆಲವರಿಗೆ ಇನ್ನು 50 ವರ್ಷವೇ ಆಗಿಲ್ಲ. ಅವರಿಗೆಲ್ಲ ವೃದ್ಧಾಪ್ಯ ವೇತನ ಮಾಡಿಕೊಟ್ಟಿದ್ದಾರೆ ಎಂದಾಗ, ಉಪತಹಸೀಲ್ದಾರ್ ಅವರು, ಈ ಕುರಿತು ಪರಿಶೀಲಿಸುತ್ತೇನೆ. ನಾನು ಹಾಗೆ ಮಾಡಿಲ್ಲ ಎಂದಾಗ, ತಲೆಹರಟೆ ಮಾಡಬೇಡ. 50 ವರ್ಷ ಒಳಪಟ್ಟವರ ಮಾಹಿತಿಯನ್ನು ತಹಸೀಲ್ದಾರ್ ಅವರಿಗೆ ನೀಡಲಾ ಎಂದು ಸಿಟ್ಟಾದರು.
ಇದಕ್ಕೆ ಉಪತಹಸೀಲ್ದಾರ್ ಪ್ರತಿಕ್ರಿಯಿಸಿ, ಡಾಕ್ಟರ್ ಸರ್ಟಿಫಿಕೇಟ್ ಇಲ್ಲದೆ ಮಾಡಿಲ್ಲ ಎಂದರು. ಆಗ ಶಾಸಕರು, ಸಹಿ ಡಾಕ್ಟರ್ ಅವರದೇ ಎಂದು ನಿಮಗೆ ಗೊತ್ತಾ? ಎಂದು ಪ್ರಶ್ನಿಸಿದ ಅವರು, ವಿಎ ಅವರಿಗೆ ಹೇಳಿ ಪರಿಶೀಲಿಸಬೇಕು. ಅವರು ಇರುವುದೇ ಪರಿಶೀಲಿಸಲು ಎಂದು ಹೇಳಿದರು.
ಸಾರ್ವಜನಿಕರು ಕಚೇರಿಗೆ ಬಂದಾಗ ಗೌರವದಿಂದ ಮಾತನಾಡಿಸಬೇಕು. ಕಾನೂನಿನ ಬಗ್ಗೆ ತಿಳಿಸಬೇಕು. 15 ದಿನದೊಳಗೆ ವಿಎ ಮತ್ತು ಉಪತಹಸೀಲ್ದಾರ್ ಅವರು ತಪ್ಪನ್ನು ಸರಿಪಡಿಸಿಕೊಂಡು ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು. ಈ ವೇಳೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್ ಇದ್ದರು.
ಹಾಸನ: ಆಲೂರು ಬಳಿ ಇನ್ನೋವಾ ಕಾರು-ಟಿಪ್ಪರ್ ಮಧ್ಯೆ ಅಪಘಾತ, ನಾಲ್ವರ ದುರ್ಮರಣ