ಬಿಜೆಪಿ ಸಂಸದರ ಪರ ಶಾಮನೂರು ಬ್ಯಾಂಟಿಂಗ್; ಕಾಂಗ್ರೆಸ್ ಜೀವಂತ ಇದ್ರೆ ಮೊದಲು ಅವನನ್ನು ಪಾರ್ಟಿಯಿಂದ ಕಿತ್ತೊಗೆಯಿರಿ: ಎಚ್ ವಿಶ್ವನಾಥ
ಕಾಂಗ್ರೆಸ್‌ನಲ್ಲಿದ್ದು ಕೊಂಡು, ಕಾಂಗ್ರೆಸ್ ಪಕ್ಷದ ಅಧಿಕಾರ ಅನುಭವಿಸುತ್ತಾ ಬಿಜೆಪಿ ಸಂಸದರನ್ನು ಗೆಲ್ಲಿಸುವಂತೆ ಕರೆ ಕೊಡುವ ಅವನನನ್ನು ಮೊದಲು ಪಕ್ಷದಿಂದ ಕಿತ್ತೊಗೆಯಿರಿ ಎಂದು ಶಾಮನೂರು ಶಿವಶಂಕರಪ್ಪ ವಿರುದ್ಧ ಎಚ್ ವಿಶ್ವನಾಥ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಚಾಮರಾಜನಗರ (ಜ.27): ಬಿಜೆಪಿ ಸಂಸದರನ್ನು ಗೆಲ್ಲಿಸುವಂತೆ ಕರೆ ನೀಡಿದ ಶ್ಯಾಮನೂರು ಶಿವಶಂಕರಪ್ಪ ಯಾವ ಹಿರಿಯ ಮುತ್ಸದ್ದಿಯೂ ಅಲ್ಲ. ಎಲ್ಲ ಜಾತಿವಾದಿ ಮುತ್ಸದ್ಧಿಗಳು ಎಂದು ಅವರದೇ ಶೈಲಿಯಲ್ಲಿ ಎಚ್ ವಿಶ್ವನಾಥ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿವೈ ರಾಘವೇಂದ್ರರನ್ನು ಗೆಲ್ಲಿಸುವಂತೆ ಕರೆಕೊಟ್ಟಿ ಶಾಮನೂರು ಹೇಳಿಕೆ ಸಂಬಂಧ ಚಾಮರಾಜನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜೀವಂತವಾಗಿದ್ರೆ ಮೊದ್ಲು ಅವನನ್ನ ಪಾರ್ಟಿಯಿಂದ ಸಸ್ಪೆಂಡ್ ಮಾಡ್ಲಿ. ಶ್ಯಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಶಾಸಕರಾಗಿದ್ದಾರೆ, ಮಗ ಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿದ್ದುಕೊಂಡೇ, ಕಾಂಗ್ರೆಸ್ ಅಧಿಕಾರ ಅನುಭವಿಸಿಕೊಂಡೇ ಬೇರೆ ಪಾರ್ಟಿಗೆ ಕ್ಯಾನ್ವಸ್ ಮಾಡ್ತಿಯಲ್ಲ ಏನು ಹೇಳಬೇಕು ನಿನಗೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಬಿಜೆಪಿ ಸಂಸದರನ್ನ ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಕರೆ! ಬಿವೈ ರಾಘವೇಂದ್ರ ಪರ ಶಾಮನೂರು ಬ್ಯಾಟಿಂಗ್!
ನೀನು ದೇಶವಾದಿಯೋ? ಜಾತಿವಾದಿಯೋ?
ಮೊದಲು ಅವನನ್ನು ಪಕ್ಷದಿಂದ ಕಿತ್ತೊಗೆಯಿರಿ. ಅವರೆಲ್ಲ ನೆಂಟರು.. ಪಾರ್ಟಿ ಸೋತ್ರು ನೆಂಟಸ್ತಿಗೆ ಸೋಲುಬಾರದು ಅವ್ರಿಗೆ. ಪಕ್ಷ ಬೇರೆ ಬೇರೆಯಾದ್ರೂ ಒಳಗೆ ಎಲ್ಲ ಕಡೆ ಒಂದೇ ಇರ್ತಾರೆ. ಮೊದಲು ಇಂಥವನನ್ನು ಪಕ್ಷದಲ್ಲಿಟ್ಟುಕೊಳ್ಳೋದೇ ತಪ್ಪು. ಕಾಂಗ್ರೆಸ್ ಪಕ್ಷ ಜೀವಂತ ಇದ್ರೆ ಮೊದಲು ಕಿತ್ತೊಗೆಯಿರಿ ಎಂದು ಕಿಡಿಕಾರಿದರು.
ಇನ್ನು ಮೀಸಲಾತಿ ವಿಚಾರ ಪ್ರಸ್ತಾಪಿಸಿ ವಿಶ್ವನಾಥ್, ಯಾವುದೇ ಮೀಸಲಾತಿಯನ್ನು ಕೆನೆಪದರ ತೆಗೆದು ನೀಡಬೇಕು. ಮಳೆ ಗಾಳಿ ಚಳಿ ಅನ್ನದೆ ಕುರಿ ಕಾಯೋ ಅಲೆಮಾರಿ ಕುರುಬನ ಮಗನು ಒಂದೇ, ವಿಶ್ವನಾಥ್ ಮಗನು ಒಂದೆ ಅಂದ್ರೆ ಹೇಗೆ? ಖರ್ಗೆ ಸಾಹೇಬ್ರ ಮಗನಿಗೂ ಒಂದೇ ರಿಸರ್‌ವೇಷನ್ನು.. ನಮ್ಮೂರಲ್ಲಿ ತಮಟೆ ಹೊಡೆಯೋನ ಮಗನಿಗೂ ಒಂದೇ ರಿಸರ್ವೇಷನ್ ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಬಿಜೆಪಿ ಸಂಸದರ ಪರ ಶಾಮನೂರು ಬ್ಯಾಟಿಂಗ್; ಸಚಿವ ಪ್ರಿಯಾಂಕ್ ಖರ್ಗೆ ಕೊಟ್ಟ ವಾರ್ನಿಂಗ್ ಏನು?
ದೇಶದಲ್ಲಿ ಮೀಸಲಾತಿ ಕುರಿತು ಒಳ್ಳೆ ವರದಿ ಕೊಟ್ಟಿದ್ದು ಚಿನ್ನಪ್ಪರೆಡ್ಡಿ. ವೇತನ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಅಂತ ವರದಿ ಕೊಟ್ಟಿದ್ದರು. ಆದರೆಕ ಪುಣ್ಯಾತ್ಮ ದೇವೇಗೌಡರು ಈ ವರದಿನಾ ಅಸೆಂಬ್ಲಿಯೊಳಕ್ಕೆ ಬರೋದಿಕ್ಕೆ ಬಿಡಲೇ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧವೂ ಕಿಡಿಕಾರಿದರು.