Asianet Suvarna News Asianet Suvarna News

ಕಾಂಗ್ರೆಸ್ ಹಿರಿಯ ನಾಯಕ ನಿಧನ: ಕಳಚಿದ ಮಧ್ಯೆ ಕರ್ನಾಟಕದ ಕೈ ಕೊಂಡಿ..!

ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ವಿಧಿವಶರಾಗಿದ್ದು, ಅವರಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

karnataka Congress Leader dr y nagappa passes away rbj
Author
Bengaluru, First Published Oct 27, 2020, 2:08 PM IST

ದಾವಣಗೆರೆ, (ಅ.27): ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಡಾ.ವೈ.ನಾಗಪ್ಪ (87)  ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆಗಿದ್ದ ನಾಗಪ್ಪ ಅವರು ಇಂದು (ಮಂಗಳವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಧರಂ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ನಾಗಪ್ಪ ಅವರು ಹರಿಹರ ವಿಧಾನ ಸಭಾ ಕ್ಷೇತ್ರದಿಂದ 1989, 1999 ಹಾಗೂ 2004 ರಲ್ಲಿ ಶಾಸಕರಾಗಿ  ಆಯ್ಕೆಯಾಗಿದ್ದರು. 

ಕರ್ನಾಟಕದ MLC ಪುತ್ರ ಹಠಾತ್ ನಿಧನ, ಮಗನ ಮುಖ ನೋಡದ ಸ್ಥಿತಿಯಲ್ಲಿ ತಂದೆ

2004 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2008 ರಲ್ಲಿ ಮತ್ತೆ ಹರಿಹರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಡಾ. ವೈ ನಾಗಪ್ಪ ಪರಾಭವಗೊಂಡಿದ್ದರು. ನಂತರ ಬದಲಾದ ರಾಜಕೀಯದಿಂದ ಮತ್ತು ಅನಾರೋಗ್ಯದಿಂದ  ರಾಜಕಾರಣದಿಂದ ದೂರ ಉಳಿದಿದ್ದರು.

1980 ರಲ್ಲಿ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪದೇ ಪದೇ ವರ್ಗಾವಣೆ ಮಾಡಿಸಿದಾಗ ಬೇಸತ್ತು ಶಾಸಕರಿಗೆ ಸೆಡ್ಡು ಹೊಡೆದು ರಾಜಕೀಯ ಪ್ರವೇಶಿಸಿದ್ದರು. 

ಮೃತರು ಒಬ್ಬ ಪುತ್ರ, ಮೂವರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.  ಮೃತರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಹರಿಹರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಗಣ್ಯರ ಸಂತಾಪ
 

Follow Us:
Download App:
  • android
  • ios