Asianet Suvarna News Asianet Suvarna News

ಬಿಜೆಪಿಯಿಂದ ಹಾರ್ದಿಕ್‌, ಅಲ್ಪೇಶ್‌ಗೆ ಟಿಕೆಟ್‌ ಸಾಧ್ಯತೆ : ಹರ್ಭಜನ್‌ ಆಪ್ ಸ್ಟಾರ್ ಪ್ರಚಾರಕ

ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಬುಧವಾರ ಸಂಜೆ ದಿಲ್ಲಿಯಲ್ಲಿ ನಡೆಯಿತು. ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಹಾರ್ದಿಕ್‌ ಪಟೇಲ್‌ ಹಾಗೂ ಅಲ್ಪೇಶ್‌ ಠಾಕೂರ್‌ (Alpesh Thakur) ಅವರಿಗೆ ಪಕ್ಷವು ಟಿಕೆಟ್‌ ಘೋಷಿಸುವ ಸಾಧ್ಯತೆ ಇದೆ.

Gujarath Assembly Election: Hardik, Alpesh likely to get ticket from BJP, Harbhajan AAP star campaigner akb
Author
First Published Nov 10, 2022, 9:43 AM IST

ನವದೆಹಲಿ: ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಬುಧವಾರ ಸಂಜೆ ದಿಲ್ಲಿಯಲ್ಲಿ ನಡೆಯಿತು. ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಹಾರ್ದಿಕ್‌ ಪಟೇಲ್‌ ಹಾಗೂ ಅಲ್ಪೇಶ್‌ ಠಾಕೂರ್‌ (Alpesh Thakur) ಅವರಿಗೆ ಪಕ್ಷವು ಟಿಕೆಟ್‌ ಘೋಷಿಸುವ ಸಾಧ್ಯತೆ ಇದೆ. ಹಾರ್ದಿಕ್‌ ಅವರಿಗೆ ವಿರಾಮ್‌ಗಾಂ ಕ್ಷೇತ್ರದ (Viramgam constituency) ಟಿಕೆಟ್‌ ಲಭಿಸುವ ಸಾಧ್ಯತೆ ಇದೆ. ಇನ್ನು ಕ್ರಿಕೆಟಿಗ ರವೀಂದ್ರ ಜಡೇಜಾ (cricketer Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ ಅವರಿಗೆ ಭಾವನಗರದಿಂದ (Bhavnagar) ಟಿಕೆಟ್‌ ಸಿಗುವ ನಿರೀಕ್ಷೆಯಿದೆ. ಆದರೆ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ (Vijay Rupani) ಅವರು ಕಣದಿಂದ ಹಿಂದೆ ಸರಿಯುವ ಸಂಭವವಿದೆ ಎಂದು ಮೂಲಗಳು ಹೇಳಿವೆ.

ಇತ್ತೀಚೆಗೆ ಮೊರ್ಬಿ ಸೇತುವೆ ದುರಂತ ಸಂಭವಿಸಿದ ಮೋರ್ಬಿಯಿದ ಜನರನ್ನು ರಕ್ಷಿಸಲು ನೀರಿಗೆ ಧುಮುಕಿದ್ದ ಕಾಂತಿಲಾಲ್‌ ಅಮೃತಿಯಾಗೆ (Kantilal Amritiya) ಟಿಕೆಟ್‌ ಲಭಿಸುವ ಸಂಭವವಿದೆ. ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda), ಕೇಂದ್ರ ಸಚಿವ ಅಮಿತ್‌ ಶಾ, ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ (Bhupendra Patel), ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (B.S. Yeddyurappa) ಹಾಜರಿದ್ದರು.

ಚುನಾವಣಾ ಬಾಂಡ್ ಗಳೇ ರಾಜಕೀಯ ಪಕ್ಷಗಳ ತಿಜೋರಿ; 2018ರಿಂದ ಇಲ್ಲಿಯ ತನಕ 10,791ಕೋಟಿ ರೂ. ಸಂಗ್ರಹ
ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಗುಜರಾತ್‌ನಲ್ಲಿ ಆಪ್‌ ಸ್ಟಾರ್‌ ಪ್ರಚಾರಕ

ಅಹಮದಾಬಾದ್‌: ಗುಜರಾತ್‌ ವಿಧಾನಸಭಾ ಚುನಾವಣೆಗೆ ಧುಮುಕಿರುವ ಆಮ್‌ಆದ್ಮಿ ಪಕ್ಷ (Aam Aadmi Party) ಮಂಗಳವಾರ ತನ್ನ 20 ಸ್ಟಾರ್‌ ಪ್ರಚಾರಕರ (star campaigners) ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಟಗಾರ ಹರ್ಭಜನ್‌ ಸಿಂಗ್‌ (Harbhajan Singh), ಗಾಯಕ ಅನ್ಮೋಲ್‌ ಗಗನ್‌ ಮಾನ್‌ (Anmol Gagan Mann), ಪಂಜಾಬ್‌ ಮುಖ್ಯಮಂತ್ರಿ (Punjab Chief Minister) ಭಗವಂತ್‌ ಮಾನ್‌ (Bhagwant Mann)ಹೆಸರುಗಳು ಅಗ್ರಸ್ಥಾನದಲ್ಲಿವೆ. ಉಳಿದಂತೆ ಪಕ್ಷದ ಪ್ರಮುಖರಾದ ಮನೀಶ್‌ ಸಿಸೊಡಿಯಾ, ಸಂಜಯ್‌ ಸಿಂಗ್‌, ರಾಘವ್‌ ಛಡ್ಡಾ, ಇಸುದಾನ್‌ ಗಢ್ವಿ, ಮಹಿಳಾ ನಾಯಕಿ ಬಲ್ಜಿಂದರ್‌ ಕೌರ್‌ ಸೇರಿ ಅನೇಕರ ಹೆಸರುಗಳಿವೆ. ಡಿ.1 ಹಾಘೂ 5ರಂದು ಎರಡು ಹಂತಗಳಲ್ಲಿ ಗುಜರಾತ್‌ ಚುನಾವಣೆ ನಡೆಯಲಿದ್ದು ಈಗಾಗಲೇ ಬಿಜೆಪಿ, ಕಾಂಗ್ರೆಸ್‌, ಆಮ್‌ಆದ್ಮಿ ಅಬ್ಬರದ ಪ್ರಚಾರ ನಡೆಸಿವೆ.

ಗುಜರಾತ್ ಚುನಾವಣೆ: ಒಂದೇ ಕ್ಷೇತ್ರದಿಂದ ಕಣಕ್ಕಿಳಿದ ರವೀಂದ್ರ ಜಡೇಜಾ ಪತ್ನಿ, ಸೋದರಿ

Follow Us:
Download App:
  • android
  • ios