Gujarat Election 2022: ರಾಹುಲ್ ಪಾದಯಾತ್ರೆ ವಿರುದ್ಧ ಮೋದಿ ವಾಗ್ದಾಳಿ
- ರಾಹುಲ್ ಪಾದಯಾತ್ರೆ ವಿರುದ್ಧ ಮೋದಿ ವಾಗ್ದಾಳಿ
- ಅಧಿಕಾರ ವಂಚಿತರಿಂದ ಇದೀಗ ಅಧಿಕಾರಕ್ಕಾಗಿ ಪಾದಯಾತ್ರೆ
- ನನ್ನ ಯೋಗ್ಯತೆ ವಿಷಯ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ
- ಗುಜರಾತ್ ಪ್ರಚಾರ ವೇಳೆ ಕಾಂಗ್ರೆಸ್‌ಗೆ ಪ್ರಧಾನಿ ಸವಾಲು
ಸುರೇಂದ್ರನಗರ (ಗುಜರಾತ್) (ನ.22): ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ ‘ಕೆಲವು ವ್ಯಕ್ತಿಗಳು ಮರಳಿ ಅಧಿಕಾರ ಪಡೆಯುವುದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಇಲ್ಲಿ ಪಕ್ಷದ ಪರ ಚುನಾವಣಾ ರಾರಯಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕೆಲವು ವ್ಯಕ್ತಿಗಳು ಮರಳಿ ಅಧಿಕಾರ ಪಡೆಯುವುದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಜೊತೆಗೆ ಗುಜರಾತ್‌ನ ಅನ್ನು 40 ವರ್ಷಗಳ ಕಾಲ ಬಾಯಾರಿಕೆಯಿಂದ ಕಾಡುವಂತೆ ಮಾಡಿದ ಮತ್ತು ನರ್ಮದಾ ಯೋಜನೆ 40 ವರ್ಷ ವಿಳಂಬವಾಗುವಂತೆ ಮಾಡಿದವರನ್ನು ತಮ್ಮೊಂದಿಗೆ ಪಾದಯಾತ್ರೆಯಲ್ಲಿ ಕರೆದೊಯ್ಯುತ್ತಿದ್ದಾರೆ’ ಎನ್ನುವ ಮೂಲಕ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಜೊತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದನ್ನು ಟೀಕಿಸಿದರು.
ನೀವು ಹಿಂದಿಯಲ್ಲೇ ಮಾತನಾಡಿ ಎಂದು ವೇದಿಕೆಯಿಂದ ರಾಹುಲ್ ಗಾಂಧಿ ಭಾಷಣ ಅನುವಾದಕ ಎಸ್ಕೇಪ್!
ಯೋಗ್ಯತೆ ಬಗ್ಗೆ ಮಾತು- ಕಿಡಿ:
ಇನ್ನು ‘ಗುಜರಾತ್ ವಿಧಾನಸಭಾ ಚುನಾವಣೆ ಅಭಿವೃದ್ಧಿ ವಿಷಯ ಮಾತನಾಡುವುದು ಬಿಟ್ಟು ಕಾಂಗ್ರೆಸ್ ನಾಯಕರು ನನಗೆ ನನ್ನ ಯೋಗ್ಯತೆ ತೋರಿಸಿಕೊಡುವ ವಿಷಯ ಮಾತನಾಡುತ್ತಿದ್ದಾರೆ. ಇಂಥ ಮಾತುಗಳನ್ನು ಆಡುವ ಅವರ ಅಹಂಕಾರವನ್ನು ನೋಡಿ. ಹೌದು, ಅವರು ರಾಜಮನೆತನಕ್ಕೆ ಸೇರಿದವರು. ನಾನೋ ಯಾವುದೇ ಯೋಗ್ಯತೆ ಇಲ್ಲದ ಕೇವಲ ಜನಸೇವಕ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
‘ಚುನಾವಣೆಯಲ್ಲಿ ಅಭಿವೃದ್ದಿ ವಿಷಯ ಬಿಟ್ಟು, ನನ್ನ ಯೋಗ್ಯತೆ ವಿಷಯ ಮಾತನಾಡುತ್ತಿದ್ದಾರೆ. ಈ ಹಿಂದೆಯೂ ನನ್ನನ್ನು ನೀಚ ವ್ಯಕ್ತಿ, ಸಾವಿನ ಸರದಾರ, ಚರಂಡಿಯ ಕ್ರಿಮಿ ಎಂದೆಲ್ಲಾ ಟೀಕಿಸಿದ್ದರು. ಆದರೆ ನನ್ನ ಗುರಿ ಕೇವಲ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದಾಗಿರುವ ಕಾರಣ, ಇಂಥ ಟೀಕೆಗಳನ್ನು ಅರಗಿಸಿಕೊಳ್ಳುತ್ತೇನೆ’ ಎಂದು ಹೇಳಿದರು.
ಸೋಮನಾಥ ಸನ್ನಿಧಿಯಲ್ಲಿ ಮೋದಿ: ಮೂರು ದಿನಗಳಲ್ಲಿ 25 ರ‍್ಯಾಲಿ