ಗುಜರಾತ್ ಚುನಾವಣೆ, ಸಬರಮತಿ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಮತದಾನ!

ಗುಜರಾತ್ ಎರಡನೇ ಹಂತದ ಮತದಾನಕ್ಕೆ ಸಜ್ಜಾಗಿದೆ. ನಾಳೆ 93 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸಬರಮತಿ ಕ್ಷೇತ್ರದಲ್ಲಿ ಮತದಾನ ಮಾಡಲಿದ್ದಾರೆ. 
 

Gujarat Election 2022 Pm Modi to cast vote in Sabarmati constituency December 5th on 2nd phase polling security tightened ckm

ಅಹಮ್ಮದಾಬಾದ್(ಡಿ.04):  ಗುಜರಾತ್ ಚುನಾವಣೆ ಅಂತಿಮ ಹಂತಕ್ಕೆ ತಲುಪಿದೆ. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿದೆ. 93 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 182 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದ ಮತದಾನದಲ್ಲಿ 89 ಸ್ಥಾನಗಳಿಗೆ ಮತದಾನ ನಡೆದಿತ್ತು. ಇದೀಗ ಎರಡನೇ ಹಂತದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಮತದಾನ ಮಾಡಲಿದ್ದಾರೆ. ಸಬರಮತಿ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಮತದಾನ ಮಾಡಲಿದ್ದಾರೆ. ಅಹಮ್ಮದಾಬಾದ್‌ನ ರಾನಿಪ್ ಹೈಸ್ಕೂಲ್‌ ಮತಗಟ್ಟೆಯಲ್ಲಿ ಮೋದಿ ಹಕ್ಕು ಚಲಾಯಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಎಲ್ಲಾ ತಯಾರಿ ಮಾಡಲಾಗಿದೆ. ಭದ್ರತಾ ಸಿಬ್ಬಂದಿಗಳು ಈಗಾಗಲೇ ಸ್ಥಳದಲ್ಲಿ ಠಿಕಾಂ ಹೂಡಿದ್ದಾರೆ. ಇನ್ನು ಟ್ರಾಫಿಕ್ ಜಂಜಾಟ ತಪ್ಪಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ತುರ್ತು ಸೇವೆಗಳು ಸ್ಥಳದಲ್ಲೇ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. 

ಮೋದಿ ಮತದಾನ ಮಾಡಲಿರುವ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಹರ್ಷದ್ ಭಾಯಿ ಪಟೇಲ್ ಸ್ಪರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ದಿನೇಶ್ ಮಹಿದಾ ಹಾಗೂ ಆಮ್ ಆದ್ಮಿ ಪಾರ್ಟಿಯಿಂದ ಜಸ್ವಂತ್ ಠಾಕೂರ್ ಸ್ಪರ್ಧಿಸುತ್ತಿದ್ದಾರೆ. ಸಬರಮತಿ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿದೆ. ಮೋದಿ ಇದೇ ಕ್ಷೇತ್ರದಲ್ಲಿ ಹಕ್ಕ ಚಲಾಯಿಸುವ ಕಾರಣ ಹೆಚ್ಚುವರಿ ಬಂದೋಬಸ್ತ್ ಮಾಡಲಾಗಿದೆ.

ಮೋದಿ ಭಸ್ಮಾಸುರ, ಉಗ್ರಪ್ಪ ಹೇಳಿಕೆಗೆ ಬಿಜೆಪಿ ಗರಂ

ಎಲ್ಲ ಕ್ಷೇತ್ರಗಳಲ್ಲಿ 2.51 ಕೋಟಿ ಮತದಾರರಿದ್ದಾರೆ. 14,975 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1.13 ಲಕ್ಷ ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗಿದೆ. 2ನೇ ಹಂತದಲ್ಲಿ ಒಟ್ಟು 182 ಸ್ಥಾನಗಳ ಪೈಕಿ 93 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಸೇರಿ 60ಕ್ಕೂ ಹೆಚ್ಚು ರಾಜಕೀಯ ಪಕ್ಷಕ್ಕೆ ಸೇರಿದ 833 ಜನರು ಚುನಾವಣಾ ಕಣದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮತದಾರರ ಓಲೈಕೆಗಾಗಿ ಪಕ್ಷಗಳು ಕೊನೆಯ ಬಾರಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಗುಜರಾತ್‌ ವಿಧಾನಸಭೆಗೆ ಒಟ್ಟು 182 ಸ್ಥಾನಗಳಿದ್ದು, ಡಿ.1ರಂದು ಮೊದಲನೇ ಹಂತದ ಚುನಾವಣೆ 89 ಕ್ಷೇತ್ರಗಳಲ್ಲಿ ನಡೆದಿತ್ತು. ಇದರಲ್ಲಿ ಶೇ. 63.31 ಮತದಾನದ ಪ್ರಮಾಣ ದಾಖಲಾಗಿತ್ತು. ಚುನಾವಣೆ ಫಲಿತಾಂಶ ಡಿ.8ರಂದು ಪ್ರಕಟವಾಗಲಿದೆ.

ಇವಿಎಂ ದೂಷಣೆ ಕಾಂಗ್ರೆಸ್‌ ಸೋಲೊಪ್ಪಿದ ಸೂಚನೆ: ಮೋದಿ
ಗುಜರಾತ್‌ನಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿರುವುದು ಈಗಾಗಲೇ ಚುನಾವಣೆಯಲ್ಲಿ ಪಕ್ಷ ಸೋಲೊಪ್ಪಿಕೊಂಡಿರುವುದನ್ನು ತೋರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಪಟಾಣ್‌ನಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿದ ಮಾತನಾಡಿದ ಮೋದಿ, ಕಛ್‌, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನಲ್ಲಿ ನಡೆದ ಚುನಾವಣೆಯ ಬಳಿಕ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್‌ ದೂಷಿಸುತ್ತಿದೆ. ಇದನ್ನು ನೋಡಿದರೆ ವಿರೋಧ ಪಕ್ಷ ಈಗಾಗಲೇ ತನ್ನ ಸೋಲು ಹಾಗೂ ಬಿಜೆಪಿಯ ಗೆಲುವನ್ನು ಒಪ್ಪಿಕೊಂಡಿದೆ ಎನ್ನುವುದು ತಿಳಿಯುತ್ತಿದೆ. ಕಾಂಗ್ರೆಸ್‌ಗೆ ಗೊತ್ತಿರುವುದು ಕೇವಲ 2 ವಿಷಯ ಮಾತ್ರ. ಒಂದು ಚುನಾವಣೆಗೆ ಮೊದಲು ಮೋದಿಗೆ ಬೈಯುವುದು ಮತ್ತು ಚುನಾವಣೆಯ ಬಳಿಕ ಇವಿಎಂಗೆ ಬೈಯುವುದು ಎಂದು ಅವರು ಹೇಳಿದರು.

ಬಿಜೆಪಿ ಸರಿಯಾಗಿ ಕೆಲಸ ಮಾಡಿದ್ದರೆ ಮೋದಿ ಏಕೆ ಇಷ್ಟು ಸುತ್ತಬೇಕು: ಖರ್ಗೆ

ಇದೇ ವೇಳೆ ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ವಿರುದ್ಧ ಕಿಡಿಕಾರಿದ ಅವರು, ಈ ಸರ್ಕಾರಗಳು ಬಡವರಿಗೆ ಮೀಸಲಿಟ್ಟಬಂಡವಾಳವನ್ನು ಲೂಟಿ ಮಾಡುವ ಮೂಲಕ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಹೆಚ್ಚು ಮಾಡಿದವು ಎಂದು ಹೇಳಿದರು. ಇದಕ್ಕಾಗಿ ಕೇಂದ್ರ ಸರ್ಕಾರ 1 ರು. ನೀಡಿದರೆ ಬಡವನಿಗೆ ಕೇವಲ 15 ಪೈಸೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹೇಳಿದ್ದ ಮಾತನ್ನು ಉಲ್ಲೇಖ ಮಾಡಿದ ಅವರು, ಆ ಸಮಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಹಿಡಿದೂ ಕೇಂದ್ರ ಸರ್ಕಾರದವರೆಗೂ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿತ್ತು ಎಂದು ಹೇಳಿದರು.

Latest Videos
Follow Us:
Download App:
  • android
  • ios