ಮೋದಿ ಭಸ್ಮಾಸುರ, ಉಗ್ರಪ್ಪ ಹೇಳಿಕೆಗೆ ಬಿಜೆಪಿ ಗರಂ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೀಯ ಪದಗಳನ್ನು ಬಳಸುವುದು ಕಾಂಗ್ರೆಸ್‌ಗೆ ಸಾಮಾನ್ಯವಾಗಿಬಿಟ್ಟಿದೆ ಎಂದು ಬಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯನ್ನು ‘ರಾವಣ’ ಎಂದು ಕರೆದಿದ್ದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮೋದಿ ‘ಭಸ್ಮಾಸುರ’ ಎಂದು ಟೀಕಿಸಿದ್ದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೀಯ ಪದಗಳನ್ನು ಬಳಸುವುದು ಕಾಂಗ್ರೆಸ್‌ಗೆ ಸಾಮಾನ್ಯವಾಗಿಬಿಟ್ಟಿದೆ ಎಂದು ಬಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯನ್ನು ‘ರಾವಣ’ ಎಂದು ಕರೆದಿದ್ದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮೋದಿ ‘ಭಸ್ಮಾಸುರ’ ಎಂದು ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾತ್ರ, ‘ಮೋದಿಯನ್ನು ಟೀಕಿಸಲು ಇಂಥ ಪದಗಳನ್ನು ಬಳಸುವುದು ಕಾಂಗ್ರೆಸ್ ಮಟ್ಟಿಗೆ ಸಾಮಾನ್ಯ ಸಂಗತಿಯಾಗಿದ್ದು ಅದೊಂದು ನಿಂದನೀಯ ಪಕ್ಷವಾಗೇ ಮಾರ್ಪಟ್ಟಿದೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ, ಭಾರತ ಜಿ-20 ಅಧ್ಯಕ್ಷತೆ ವಹಿಸಿಕೊಂಡಾಗ ‘ನಾನು ನನ್ನ ಸ್ನೇಹಿತ ಮೋದಿಯೊಂದಿಗೆ (Narendra Modi) ನಿಲ್ಲುತ್ತೇನೆ’ ಎಂಬ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿಕೆ ಉಲ್ಲೇಖಿಸಿದ ಸಂಬಿತ್ ‘ಪ್ರಪಂಚವೇ ಮೋದಿಯೊಂದಿಗೆ ನಿಂತಿದೆ. ಆದರೆ ಇನ್ನೊಂದೆಡೆ ಕಾಂಗ್ರೆಸ್ ಮೋದಿಗೆ ಇಂಥ ಭಾಷೆ ಬಳಸುತ್ತದೆ’ ಎಂದಿದ್ದಾರೆ. ಇದೇ ವೇಳೆ ಮೋದಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಅವರು ‘ಕಾಂಗ್ರೆಸ್ ಮೋದಿಯೆಡೆ 100 ನಿಂದನೆಗಳನ್ನು ಎಸೆದಿದೆ. ಆದರೆ ಗುಜರಾತ್ ಚುನಾವಣೆಯಲ್ಲಿ (Gujarath Assembly Election) ಕಾಂಗ್ರೆಸ್ಸನ್ನು ಮುಗಿಸಲು ಜನರು ಮಹಾಭಾರತದಲ್ಲಿ ಶ್ರೀ ಕೃಷ್ಣನಂತೆ ಸುದರ್ಶನ ಚಕ್ರ ಹಿಡಿದು ನಿಂತಿದ್ದಾರೆ’ ಎಂದಿದ್ದಾರೆ.
ಆಧುನಿಕ ಭಸ್ಮಾಸುರನಂತೆ ಪ್ರಧಾನಿ ಮೋದಿ ವರ್ತನೆ: ಕಾಂಗ್ರೆಸ್
ಮೋದಿ ಭಸ್ಮಾಸುರ
ತೈಲಬೆಲೆ (Oil rate) ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡ-ಮಧ್ಯಮ ವರ್ಗದವರ ಪಾಲಿಗೆ ಆಧುನಿಕ ಭಸ್ಮಾಸುರ ಎನಿಸಿದ್ದರೆ, ಪುತ್ರವ್ಯಾಮೋಹಕ್ಕೆ ರಾಜ್ಯವನ್ನು ಬಲಿಕೊಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೃತರಾಷ್ಟ್ರ ಆಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ (V S Ugrappa) ವ್ಯಂಗ್ಯವಾಡಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲಬೆಲೆ ಏರಿಕೆ, ಕೋವಿಡ್ ಸೋಂಕು ನಿಯಂತ್ರಣದ ವೈಫಲ್ಯದಿಂದ ನರೇಂದ್ರ ಮೋದಿ ಅತ್ಯಂತ ದುರ್ಬಲ ಪ್ರಧಾನಿ ಎಂಬುದನ್ನು ಋುಜುವಾತು ಪಡಿಸಿದ್ದಾರೆ ಎಂದು ಟೀಕಿಸಿದ್ದರು.
ಕನಿಷ್ಠ ಆಕ್ಸಿಜನ್ ಸಹ ಪೂರೈಕೆ ಮಾಡಲಾಗಲಿಲ್ಲ. ಪರಿಣಾಮವಾಗಿ ದೇಶದ 3 ಲಕ್ಷ ಜನರು ಸೋಂಕಿನಿಂದ ಮರಣ ಹೊಂದಿದರು. ದೇಶ ನಿವಾಸಿಗಳಿಗೆ ಕೋವಿಡ್ ವ್ಯಾಕ್ಸಿನ್ ಕೊಡಿಸಲು ಸಹ ಇವರಿಂದಾಗುತ್ತಿಲ್ಲ ಎಂದು ಹರಿಹಾಯ್ದರು. ಕೋವಿಡ್‌ನಿಂದ ಜನರು ಆರ್ಥಿಕ ಸಂಕಷ್ಟದಿಂದ ಒದ್ದಾಡುತ್ತಿದ್ದರೆ, ಪದೇ ಪದೇ ತೈಲಬೆಲೆ ಏರುತ್ತಿದೆ. ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಭಾರಿ ಏರಿಕೆಯಿಂದ ಬಡ-ಮಧ್ಯಮ ಜನರು ಬದುಕು ನಡೆಸಲು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದರು.
Karnataka Politics: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ವಿಶ್ವನಾಥ್
ತೈಲಬೆಲೆ ಏರಿಕೆ ಜಾಗತಿಕ ಮಟ್ಟದಲ್ಲಾಗುವ ಬೆಳವಣಿಗೆ ಎನ್ನುತ್ತಿದ್ದಾರೆ. ಆದರೆ, ನೆರೆಯ ದೇಶಗಳಾದ ನೇಪಾಳ(Nepal), ಶ್ರೀಲಂಕಾ(Srilanka), ಪಾಕಿಸ್ತಾನ (Pakistan), ಭೂತಾನ್ (Bhutan), ಬರ್ಮಾ (Burma) ದೇಶಗಳಲ್ಲಿ ಈ ಪರಿಯ ಬೆಲೆ ಏರಿಕೆ ಯಾಕಾಗಲಿಲ್ಲ? ಭಾರತದಲ್ಲಿ ಮಾತ್ರ ಸೆಂಚುರಿ ಬಾರಿಸಿದ್ದು, ಇವರ ಅಧಿಕಾರ ಅವಧಿಯಲ್ಲಿ ಡಬಲ್ ಸೆಂಚುರಿ ಬಾರಿಸಿದರೂ ಅಚ್ಚರಿಯಿಲ್ಲ ಎಂದರು.