Asianet Suvarna News Asianet Suvarna News

Gujarat Election: ರಾಣಿಪ್‌ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾನ

ಗುಜರಾತ್‌ ವಿಧಾನಸಭೆಗೆ ಸೋಮವಾರ 2ನೇ ಹಂತದ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ನ ರಾಣಿಪ್‌ ಮತಗಟ್ಟೆಯಲ್ಲಿ ಬೆಳಗ್ಗೆ 9 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದ್ದಾರೆ.

Gujarat assembly Election 2nd stage Prime Minister Narendra modi Casts his Vote in Ranip san
Author
First Published Dec 5, 2022, 9:35 AM IST

ಅಹಮದಾಬಾದ್‌ (ಡಿ.5): ಈ ವರ್ಷದ ದೇಶದ ಬಹುನಿರೀಕ್ಷಿತ ಚುನಾವಣೆ ಆಗಿರುವ ಗುಜರಾತ್‌ ವಿಧಾನಸಭೆಗೆ ಸೋಮವಾರ 2ನೇ ಹಂತದ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ನ ರಾಣಿಪ್‌ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ದೃಷ್ಟಿಯಿಂದಲೇ ಭಾನುವಾರವೇ ಅಹಮದಾಬಾದ್‌ಗೆ ಬಂದಿದ್ದರು. ಗಾಂಧಿನಗರದಲ್ಲಿ ತಾಯಿ ಹೀರಾಬೆನ್‌ ಅವರನ್ನು ಭೇಟಿ ಮಾಡಿದ್ದರು. 2ನೇ ಹಂತದಲ್ಲಿ ಗುಜರಾತ್‌ನ 14 ಜಿಲ್ಲೆಗಳಲ್ಲಿ 93 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮತದಾನಕ್ಕೂ ಮುನ್ನ ಟ್ವೀಟ್‌ ಮೂಲಕ ಮನವಿ ಮಾಡಿದ ಪ್ರಧಾನಿ ಮೋದಿ, ಎಲ್ಲರೂ ಮತದಾನ ಮಾಡುವಂತೆ ಒತ್ತಾಯಿಸಿದರು. ಪ್ರಧಾನಿ ಮೋದಿ ಮತ ಹಾಕಲು ರಾಣಿಪ್‌ ಮತಗಟ್ಟೆಗೆ ಬರುತ್ತಿರುವ ಕಾರಣ, ಟ್ರಾಫಿಕ್‌ಗೆ ಬೇರೆ ಬೇರೆ ಮಾರ್ಗಗಳನ್ನು ಪ್ಲ್ಯಾನ್‌ ಮಾಡಲಾಗಿದೆ. ಅಗ್ನಿಶಾಮಕ ದಳದ ಅಧಿಕಾರಿಗಳಿಗೂ ಎಎಚ್ಚರಿಕೆಯಲ್ಲಿ ಇರುವಂತೆ ಹೇಳಗಾಗಿದೆ. ತುರ್ತು ಪರಿಸ್ಥಿತಿ ಎದುರಾದಲ್ಲಿ ಅದನ್ನು ಸಮಪರ್ಕವಾಗಿ ನಿರ್ವಹಿಸುವ ಯೋಜನೆ ಕೂಡ ರೂಪಿಸಲಾಗಿದೆ ಎಂದು ಅಹಮದಾಬಾದ್‌ ನಗರಪಾಲಿಕೆಯ ಚೀಫ್‌ ಫೈರ್‌ ಆಫೀಸರ್‌ ಅನಿರುದ್ದ್‌ ಗಧ್ವಿ ಹೇಳಿದ್ದಾರೆ.


ರಾಣಿಪ್‌ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ವಾಸವಿರುವ ಅಣ್ಣ ಸೋಮಾ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈಗಾಗಲೇ ಆ ಪ್ರದೇಶದಲ್ಲೂ ಕೂಡ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.ರಾಣಿಪ್‌ ಮತಗಟ್ಟೆಗೆ ಬಿಗಿ ಭದ್ರತೆಯಲ್ಲಿ ಆಗಮಿಸಿದ ಪ್ರಧಾನಿ ಮೋದಿ, ಕೆಲ ದೂರ ನಡೆದುಕೊಂಡೇ ಬಂದು ಮತಗಟ್ಟೆಯ ಆವರಣ ಪ್ರವೇಶಿಸಿದರು. ಅಲ್ಲಿದ್ದ ಅಧಿಕಾರಿಗಳು ಮೋದಿಗೆ ಕೈಮುಗಿದು ಮತಗಟ್ಟೆಗೆ ಸ್ವಾಗತ ಮಾಡಿದರು.

 

ರಾಣಿಪ್‌ನ ನಿಶಾಲ್‌ ಪಬ್ಲಿಕ್‌ ಸ್ಕೂಲ್‌ಗೆ ಸಾಗುವ ಹಾದಿಯಲ್ಲಿ ಅಕ್ಕಪಕ್ಕದಲ್ಲಿ ನಿಂತಿದ್ದ ಜನರಿಗೆ ಕೈಬೀಸುತ್ತಲೇ ಮೋದಿ ಸಾಬರಮತಿ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ಮಾಡಲು ರಾಣಿಪ್‌ನ ಮತಗಟ್ಟೆಗೆ ಪ್ರವೇಶಿಸಿದ್ದರು. ಇದೇ ಮತಗಟ್ಟೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ 2017ರಲ್ಲಿ ತಮ್ಮ ಮತ ಹಾಕಿದ್ದರು. ಅಹಮದಾಬಾದ್‌ಗೆ ಭಾನುವಾರ ಆಗಮಿಸಿದ್ದ ಮೋದಿ, ತಾಯಿಯನ್ನು ಭೇಟಿಯಾಗಿ 45 ನಿಮಿಷ ಕಾಲ ಕಳೆದಿದ್ದರು. ಆ ಬಳಿಕ ಪಕ್ಷದ ಕಚೇರಿಗೆ ತೆರಳಿದ್ದರು.

ಗುಜರಾತ್‌: ಇಂದು ಅಂತಿಮ ಕದನ:93 ಮತಕ್ಷೇತ್ರಗಳಲ್ಲಿ ಮತದಾನ

ಪಿಎಂ ಮೋದಿ ರಾನಿಪ್ ಪ್ರದೇಶದ ನೋಂದಾಯಿತ ಮತದಾರರಾಗಿದ್ದು, 2019 ರ ಲೋಕಸಭೆ ಚುನಾವಣೆ ಮತ್ತು ಹಿಂದಿನ ಚುನಾವಣೆಯಲ್ಲಿ ಇದೇ ಪ್ರದೇಶದಲ್ಲಿ ಚಲಾಯಿಸಿದ್ದಾರೆ. ಸಬರಮತಿ ಕ್ಷೇತ್ರ ದಶಕಗಳಿಂದ ಬಿಜೆಪಿಯ ವಶದಲ್ಲಿದೆ. ಈ ಬಾರಿ ಬಿಜೆಪಿಯ ಹರ್ಷದಭಾಯ್ ಪಟೇಲ್, ಕಾಂಗ್ರೆಸ್‌ನ ದಿನೇಶ್ ಮಹಿದಾ ಮತ್ತು ಎಎಪಿಯ ಜಸ್ವಂತ್ ಠಾಕೂರ್ ಸ್ಪರ್ಧಿಗಳಾಗಿದ್ದಾರೆ.

ಸತತ ಪ್ರಚಾರ, ಪ್ರವಾಸ ಮುಗಿಸಿ ತಾಯಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ!

ಇಂಡಿಯಾ ಟಿವಿ-ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿ 117 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಯ ಸಂಭಾವ್ಯ ಮತ ಪಾಲು ಶೇ.50ರಷ್ಟು ಇರಲಿದೆ ಎಂದು ಹೇಲಲಾಗಿದೆ. ಎಬಿಪಿ-ಸಿವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ಐತಿಹಾಸಿಕ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಬಿಜೆಪಿ ಸುಮಾರು 140 ಸ್ಥಾನಗಳನ್ನು ಗಳಿಸಲಿದ್ದು, ಆ ಮೂಲಕ ಹಾಲಿ ಆಡಳಿತ ದೊಡ್ಡ ಮಟ್ಟದ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.

Follow Us:
Download App:
  • android
  • ios