Asianet Suvarna News Asianet Suvarna News

Belagavi: ಫೆ.27ರಂದು ಕುಂದಾನಗರಿಗೆ ಪ್ರಧಾನಿ ಮೋದಿ ಭೇಟಿ: ರೋಡ್ ಶೋಗೆ ಭರ್ಜರಿ ಸಿದ್ಧತೆ

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಫೆ. 27 ರಂದು ಬೆಳಗಾವಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್‌ ಶೋ ನಡೆಸಲು ಬಿಜೆಪಿ ಶಾಸಕ ಅಭಯ ಪಾಟೀಲ ಪ್ಲಾನ್‌ ರೂಪಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ. 

Great preparation for PM Narendra Modi Road Show in Belagavi On Feb 27th gvd
Author
First Published Feb 25, 2023, 9:33 AM IST

ಬೆಳಗಾವಿ (ಫೆ.25): ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಫೆ. 27 ರಂದು ಬೆಳಗಾವಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್‌ ಶೋ ನಡೆಸಲು ಬಿಜೆಪಿ ಶಾಸಕ ಅಭಯ ಪಾಟೀಲ ಪ್ಲಾನ್‌ ರೂಪಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ. ಕುಂದಾನಗರಿ ಬೆಳಗಾವಿಯಲ್ಲಿ ಎಂಟು ಕಿಲೋಮೀಟರ್ ರೋಡ್ ಶೋಗೆ ಭರ್ಜರಿ ಸಿದ್ಧತೆ ನಡೆಸಿದೆ. ರೋಡ್ ಶೋ ಮಾರ್ಗದಲ್ಲಿ ಸ್ವತಃ ಪಕ್ಷದ ಧ್ವಜ, ಬಂಟಿಂಗ್ಸ್‌ಗಳನ್ನು ಶಾಸಕ ಅಭಯ ಪಾಟೀಲ್ ಕಟ್ಟಿದ್ದು, ರೋಡ್ ಶೋ ಮಾರ್ಗದ ರಸ್ತೆಯ ಎರಡು ಬದಿಗಳಲ್ಲಿ ಪಕ್ಷದ ಧ್ವಜವನ್ನು ಕಾರ್ಯಕರ್ತರು ಕಟ್ಟುತ್ತಿದ್ದಾರೆ .

8 ಕಿಲೋಮೀಟರ್ ರೋಡ್ ಶೋ ಉದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಅವಳವಡಿಕೆಗೆ ಸಿದ್ಧತೆ ನಡೆಸಿದ್ದು, ತಡರಾತ್ರಿ ಡಿಸಿ ನಿತೇಶ್ ಪಾಟೀಲ್ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದ್ದಾರೆ. ಇನ್ನು ಹೆಲಿಕಾಪ್ಟರ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಿಪಿಎಡ್‌ ಮೈದಾನಕ್ಕೆ ಆಗಮಿಸಲಿದ್ದು, ಅಲ್ಲಿಂದ ಸುಮಾರು 10 ಕಿ.ಮೀ. ಮಾರ್ಗದಲ್ಲಿ ರೋಡ್‌ ಶೋ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಲಬ್‌ ರಸ್ತೆ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಕಿಂಡ ಗಲ್ಲಿ, ಶನಿಮಂದಿರ, ಕಪಿಲೇಶ್ವರ ರೈಲ್ವೆ ಗೇಟ್‌, ಶಿವಾಜಿ ಉದ್ಯಾನ, ಶಿವಚರಿತ್ರೆ ರಸ್ತೆ ಮೂಲಕ ಹಾಯ್ದು ಬಿ.ಎಸ್‌.ಯಡಿಯೂರಪ್ಪ ಮಾರ್ಗವಾಗಿ ಕಾರ್ಯಕ್ರಮ ನಡೆಯಲಿರುವ ಮಾಲಿನಿ ಸಿಟಿಗೆ ತೆರಳುವರು. 

ತುಮಕೂರಿನಲ್ಲಿ ಸದ್ದು ಮಾಡಿದ ಪೇ ಎಂಎಲ್ಎ ಪೋಸ್ಟರ್: ಶಾಸಕ ಜ್ಯೋತಿಗಣೇಶ್ ವಿರುದ್ಧ ಅಭಿಯಾನ

ಮೋದಿ ರೋಡ್‌ ಶೋ ಎಂಟ್ರಿಯಾಗುತ್ತಿದ್ದಂತೆಯೇ ರಸ್ತೆಯುದ್ಧಕ್ಕೂ ಸಾಂಸ್ಕೃತಿಕ ಲೋಕವೇ ಅನಾವರಣಗೊಳ್ಳುವಂತೆ ತಯಾರಿ ಮಾಡಿಕೊಳ್ಳಲಾಗುತ್ತಿದ್ದೆರ. ರೋಡ್‌ ಶೋ ನಡೆಯುವ ರಸ್ತೆ ಮಾರ್ಗದ ಎರಡೂ ಬದಿಯಲ್ಲಿ ಭಾರತದ ಬೇರೆ ಬೇರೆ ರಾಜ್ಯ, ಪ್ರಾಂತಗಳ ವಿಶಿಷ್ಟಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿ ಮಹಾನ್‌ ನಾಯಕರ, ಮಹಾಪುರುಷರ ಪರಿಚಯ ಮಾಡುವ ಭಿತ್ತಿಚಿತ್ರಗಳನ್ನು ಹಾಕಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಭಾರತ ಹೇಗಿತ್ತು. 



ಈಗ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತ ಯಾವ ರೀತಿಯಲ್ಲಿ ಬದಲಾಗಿದೆ ಎನ್ನುವುದನ್ನು ಬಿತ್ತಿಚಿತ್ರಗಳ ಮೂಲಕ ಸಂದೇಶ ಸಾರಲು ಸಿದ್ಧತೆ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆಳಗಾವಿ ರೋಡ್‌ ಶೋ ಮಾರ್ಗ ಇನ್ನೂ ಅಂತಿಮಗೊಂಡಿಲ್ಲ. ಈ ಕುರಿತು ಎಸ್‌ಪಿಜಿ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ಸದನದಿಂದ ಬಿಎಸ್‌ವೈಗೆ ಪಕ್ಷಾತೀತ ಭಾವುಕ ವಿದಾಯ: ಗುಡ್‌ಬೈ ಬಿಎಸ್‌ವೈ

ಹೀಗಿರಲಿದೆ ರೋಡ್‌ ಶೋ: ಬೆಳಗಾವಿ ಚನ್ನಮ್ಮ ವೃತ್ತದಿಂದ ಮಾಲಿನಿ ಸಿಟಿವರೆಗೆ ರೋಡ್‌ ಶೋಗೆ ಚಿಂತನೆ ಮಾಡಲಾಗಿದೆ. ಈ ವೇಳೆ ಹತ್ತು ಸಾವಿರ ಮಹಿಳೆಯರು ಭಗವಾ ಪೇಟ ಧರಿಸಿ ಪೂರ್ಣಕುಂಭ ಹೊತ್ತು ಪ್ರಧಾನಿ ಮೋದಿ ಸ್ವಾಗತಿಸಲಿದ್ದಾರೆ. ಮೋದಿರವರು ಪ್ರಧಾನಿ ಆಗುವ ಮೊದಲು ಇದ್ದ ಭಾರತ ಬಳಿಕ ಆದ ಭಾರತದ ಕಲ್ಪನೆ ಕಟ್ಟಿ​ಕೊ​ಡ​ಲಾ​ಗು​ವುದು. ರೋಡ್‌ ಶೋ ನಡೆಯುವ ರಸ್ತೆಯ ಅಕ್ಕಪಕ್ಕದಲ್ಲಿ ನೇರ ಕಾರ್ಯಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಿಂದ 4 ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ.

Follow Us:
Download App:
  • android
  • ios