Asianet Suvarna News Asianet Suvarna News

ಬಿಜೆಪಿ ಸೋಲಿಗೆ ಗೋವಿಂದ ಕಾರಜೋಳ, ಎ.ನಾರಾಯಣಸ್ವಾಮಿ ಕಾರಣ: ಶಾಸಕ ಎಂ.ಚಂದ್ರಪ್ಪ

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದಕ್ಕೆ ರಾಜ್ಯದ ವಿವಿದೆಡೆ ಪಾರಮಾರ್ಶೆಗಳು ನಡೆದಿದ್ದು, ಶುಕ್ರವಾರ ಹೊಳಲ್ಕೆರೆಯಲ್ಲಿ ನಡೆದ ಬಿಜೆಪಿ ಬೆಂಬಲಿಗರ ಸಭೆಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ, ಪರಿಶಿಷ್ಟರ ಒಳ ಮೀಸಲು ಜಾರಿಯಿಂದಾಗಿ ಬಿಜೆಪಿ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಯಿತು ಎಂದಿದ್ದಾರೆ. 
 

Govinda Karajola and A Narayanaswamy responsible for BJPs defeat Says MLA M Chandrappa gvd
Author
First Published Jun 3, 2023, 1:40 AM IST

ಹೊಳಲ್ಕೆರೆ (ಜೂ.03): ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದಕ್ಕೆ ರಾಜ್ಯದ ವಿವಿದೆಡೆ ಪಾರಮಾರ್ಶೆಗಳು ನಡೆದಿದ್ದು, ಶುಕ್ರವಾರ ಹೊಳಲ್ಕೆರೆಯಲ್ಲಿ ನಡೆದ ಬಿಜೆಪಿ ಬೆಂಬಲಿಗರ ಸಭೆಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ, ಪರಿಶಿಷ್ಟರ ಒಳ ಮೀಸಲು ಜಾರಿಯಿಂದಾಗಿ ಬಿಜೆಪಿ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಯಿತು ಎಂದಿದ್ದಾರೆ. ಒಳ ಮೀಸಲಾತಿಯನ್ನು ತರಾತುರಿಯಲ್ಲಿ ಜಾರಿಗೆ ತಂದು, ತಲಾಂತರದಿಂದ ಓಟು ಹಾಕಿಕೊಂಡು ಬಂದವರನ್ನು ಹೊರಗೆ ದಬ್ಬಿದ ಪರಿಣಾಮ ಈ ಬಾರಿಯ ವಿಧಾನಸಭೆ ಚುನಾವಣೆಯ ಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. 

ಅಂದಿನ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮಾ. 24 ರಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಂಡು ಒಳಮೀಸಲಾತಿಯನ್ನು ಜಾರಿಗೆ ತಂದ ಪರಿಣಾಮ ಕೊರಚ, ಕೊರಮ, ಲಂಬಾಣಿ, ಭೋವಿ ಸಮಾಜದವರು ಬಿಜೆಪಿ ವಿರುದ್ಧ ಮತ ಚಲಾಯಿಸುವಂತಾಯಿತು ಎಂದರು. ಬಿಜೆಪಿ ಸೋಲಲು ಗೋವಿಂದ ಕಾರಜೋಳ, ಎ. ನಾರಾಯಣಸ್ವಾಮಿ ಇವರೇ ಕಾರಣ. ಬಿ.ವೈ ವಿಜಯೇಂದ್ರ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಾಗಿತ್ತು. ಕೇವಲ ಹತ್ತು ಸಾವಿರ ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಅವೈಜ್ಞಾನಿಕ ತೀರ್ಮಾನದಿಂದ ನಲವತ್ತು, ಐವತ್ತು ಸೀಟುಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸುವಂತಾಯಿತು ಎಂದು ಚಂದ್ರಪ್ಪ ಹೇಳಿದರು. ಐದು ವರ್ಷಗಳ ಕಾಲ ಹೊಳಲ್ಕೆರೆ ಕ್ಷೇತ್ರಾದ್ಯಂತ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನತೆ ಮತ್ತೊಮ್ಮೆ ಆಶೀರ್ವದಿಸಿದ್ದೀರಿ. 

ಭಾರತದ ಆರ್ಥಿಕ ಪ್ರಗತಿಗೆ ಜಾಗತಿಕ ಮೆಚ್ಚುಗೆ: ಸಂಸದ ದೇವೇಂದ್ರಪ್ಪ

ನನ್ನ ಮೈಯಲ್ಲಿ ಒಂದು ಹನಿ ರಕ್ತವಿರುವ ತನಕ ನಿಮ್ಮ ಪ್ರೀತಿ, ವಿಶ್ವಾಸವನ್ನು ಮರೆಯುವುದಿಲ್ಲ. ರೈತರು ಚೆನ್ನಾಗಿರಬೇಕೆಂದು ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದೇನೆ. ತಾಲೂಕಿನಾದ್ಯಂತ ಸಿಸಿ ರಸ್ತೆ ನಿರ್ಮಿಸಲಾಗಿದೆ. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೇರವಾಗಿ ನೀರು ತಂದು ಪ್ರತಿ ಮನೆ ಮನೆಗೆ ಪೂರೈಸುವುದಕ್ಕಾಗಿ ಐದು ನೂರ ಎಪ್ಪತ್ತು ಕೋಟಿ ರು.ಗಳನ್ನು ಖರ್ಚು ಮಾಡಿದ್ದೇನೆ. ಶರಾವತಿಯಿಂದ ನೇರವಾಗಿ ವಿದ್ಯುತ್‌ ತರಲಾಗುವುದು. ಇದರಿಂದ ಇನ್ನು ನೂರು ವರ್ಷಗಳ ಕಾಲ ರೈತರಿಗೆ ವಿದ್ಯುತ್‌ ಸಮಸ್ಯೆಯಿರುವುದಿಲ್ಲ ಎಂದರು. ಎರಡು ಬಾರಿ ನನ್ನ ತಪ್ಪಿನಿಂದ ನಾನು ಸೋತಿದ್ದನೇ ವಿನಃ. ಆಂಜನೇಯ ತನ್ನ ಸ್ವಂತ ಶಕ್ತಿಯಿಂದೇನು ಗೆದ್ದಿಲ್ಲ. ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿದರೆ ಕ್ಷೇತ್ರದ ಜನ ನಂಬುವಷ್ಟುಮೂರ್ಖರಲ್ಲ. 

ಇನ್ನು ಮುಂದೆ ಎಚ್ಚರಿಕೆಯಿಟ್ಟುಕೊಂಡು ಮಾತನಾಡುವಂತೆ ಆಂಜನೇಯಗೆ ಶಾಸಕ ಎಂ.ಚಂದ್ರಪ್ಪ ಎಚ್ಚರಿಸಿದರು. ಐದು ವರ್ಷಗಳ ಕಾಲ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ನಾಲ್ಕೈದು ಎಸ್ಸಿಎಸ್ಟಿಹಾಸ್ಟೆಲ್‌ಗಳನ್ನು ಕಟ್ಟಿಸಿದ್ದನ್ನು ಬಿಟ್ಟರೆ ಇನ್ನೇನು ಅಭಿವೃದ್ಧಿಯಾಗಿಲ್ಲ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಐದು ಗ್ಯಾರಂಟಿಗಳನ್ನು ಆರುವರೆ ಕೋಟಿ ಜನರಿಗೆ ನೀಡಿ ಅಧಿಕಾರಕ್ಕೆ ಬಂದಿದೆ. ಈಗ ಎಲ್ಲವನ್ನು ಈಡೇರಿಸದಿದ್ದರೆ ಸುಮ್ಮನೆ ಬಿಡಲ್ಲ. ಆಂಜನೇಯನನ್ನು ನೋಡಿ ಓಟು ಹಾಕಿಲ್ಲ. ಗ್ಯಾರಂಟಿಗಳನ್ನು ನಂಬಿ ಜನ ಕಾಂಗ್ರೆಸ್‌ಗೆ ಮತ ಕೊಟ್ಟಿದ್ದಾರೆ. ನೀವುಗಳು ನನ್ನ ಮೇಲೆ ತೋರಿಸಿರುವ ಪ್ರೀತಿ ವಿಶ್ವಾಸಕ್ಕೆ ತಕ್ಕಂತೆ ಐದು ವರ್ಷಗಳ ಕಾಲ ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುತ್ತೇನೆ ಎಂದು ಮತದಾರರಿಗೆ ಭರವಸೆ ನೀಡಿದರು.

ಕನ್ನಡ ವಿವಿ ಪಿಎಚ್‌ಡಿ ಪರೀಕ್ಷೆಗೆ ಅಭ್ಯರ್ಥಿಗಳ ನಿರಾಸಕ್ತಿ: ಶೇ. 54ರಷ್ಟು ಮಾತ್ರ ಹಾಜರಾತಿ!

ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್‌, ಪುರಸಭೆ ಅಧ್ಯಕ್ಷ ಆರ್‌.ಎ ಅಶೋಕ, ಸದಸ್ಯರುಗಳಾದ ಮುರುಗೇಶ್‌, ಬಸವರಾಜ್‌ ಯಾದವ್‌, ಮಲ್ಲಿಕಾರ್ಜುನಸ್ವಾಮಿ, ಈಶ್ವರಪ್ಪ, ಚಿತ್ರಹಳ್ಳಿ ದೇವರಾಜ್‌, ತಿಪ್ಪೇಸ್ವಾಮಿ, ಮಹೇಶ್ವರಪ್ಪ ಕೆ.ಸಿ. ಲಿಂಗರಾಜು ಚಿಕ್ಕಜಾಜೂರು, ಪಿ.ಎಸ್‌ ಮೂರ್ತಿ, ಡಿ.ಸಿ ಮೋಹನ್‌, ಡಿ.ಎಸ್‌ ಪ್ರದೀಪ್‌ಕುಮಾರ್‌, ಶಿವಕುಮಾರ್‌, ರಾಮಣ್ಣ ರಾಮಗಿರಿ, ಹೇಮಂತ್‌, ರಾಮಣ್ಣ, ಕುಮಾರಣ್ಣ, ಮಾರುತೇಶ್‌, ಕಣಿವೆಹಳ್ಳಿ ಜಗದೀಶ್‌, ಕಲ್ಲೇಶ್‌, ರಮೇಶಣ್ಣ, ಸಿದ್ರಾಮಣ್ಣ, ಧನಂಜಯ, ಅಜ್ಜಯ್ಯ, ಶ್ರೀನಿವಾಸ್‌, ಲವಕುಮಾರ್‌, ರಾಜಣ್ಣ, ಶ್ರೀಹರ್ಷ, ಶರಣಪ್ಪ, ರಾಜಣ್ಣ, ಮರುಳಸಿದ್ದಪ್ಪ, ರೂಪಾ, ಸರಸ್ವತಿ, ಲೋಲಾಕ್ಷಮ್ಮ, ಕರಿಯಮ್ಮ ಸಮಾರಂಭದಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios