Asianet Suvarna News Asianet Suvarna News

Mekedatu Politics: ಕಾಂಗ್ರೆಸ್‌ ಪಾದಯಾತ್ರೆ ತಡೆಗೆ ಸರ್ಕಾರದ ಮಾಸ್ಟರ್‌ ಪ್ಲಾನ್‌..?

*   ಬೆಂಗಳೂರು ದ್ವಾರದಲ್ಲೇ ತಡೆ ಒಡ್ಡಲು ಸರ್ಕಾರದ ಪ್ಲಾನ್‌?
*   ಹಿರಿಯ ಸಚಿವರ ಜತೆ ಸಿಎಂ ಬೊಮ್ಮಾಯಿ ಸಭೆ
*   ಏನೇ ಬಂದರೂ ಹೋರಾಟ ನಿಲ್ಲಿಸಬೇಡಿ: ಮಲ್ಲಿಕಾರ್ಜುನ ಖರ್ಗೆ
 

Government of Karnataka Master Plan to Stop Congress Padayatra grg
Author
Bengaluru, First Published Jan 10, 2022, 7:10 AM IST

ಬೆಂಗಳೂರು(ಜ.10):  ಮೇಕೆದಾಟು ಯೋಜನೆ(Mekedatu Project) ಅನುಷ್ಠಾನಕ್ಕೆ ಒತ್ತಾಯಿಸಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಪಾದಯಾತ್ರೆ ಆರಂಭಿಸಿದ ಬೆನ್ನಲ್ಲೇ ಅದನ್ನು ಕಟ್ಟಿಹಾಕುವ ಸಂಬಂಧ ರಾಜ್ಯ ಸರ್ಕಾರ(Government of Karnataka) ಗಂಭೀರ ಚರ್ಚೆ ನಡೆಸಿದೆ.

ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಹಿರಿಯ ಸಚಿವರೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ ಪಾದಯಾತ್ರೆಯ(Congress Padayatra) ಸಾಧಕ ಬಾಧಕಗಳ ಕುರಿತು ಸಮಾಲೋಚನೆ ನಡೆಸಿದರು. ಕೋವಿಡ್‌(Covid19) ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ನಿಯಮ ಮೀರಿ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವುದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆಯೂ ಚರ್ಚಿಸಿದರು ಎನ್ನಲಾಗಿದೆ.

Covid Rules Break: ಪಾದಯಾತ್ರೆ ವೇಳೆ ಕೋರೋನಾ ನಿಯಮ ಗಾಳಿಗೆ ತೂರಿದ ಕಾಂಗ್ರಸ್ಸಿಗರು

ರಾಜಧಾನಿ ಬೆಂಗಳೂರಿನಲ್ಲಿ(Bengaluru) ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದರಿಂದ ಕಾಂಗ್ರೆಸ್‌ ಪಾದಯಾತ್ರೆ ಬೆಂಗಳೂರಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳುವ ದಿಕ್ಕಿನಲ್ಲಿ ಸಮಾಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

15ಕ್ಕೂ ಹೆಚ್ಚು ಕಾರವಾನ್‌ 17 ಸ್ಲೀಪರ್‌ ಬಸ್‌ಗಳು

ರಾಮನಗರ(Ramanagara): ಮೇಕೆ​ದಾಟು ಯೋಜ​ನೆಯಲ್ಲಿ ಪಾಲ್ಗೊಳ್ಳುವ ಗಣ್ಯರ ವಿಶ್ರಾಂತಿಗಾಗಿಯೇ 15ಕ್ಕೂ ಹೆಚ್ಚು ಕಾರವಾನ್‌ ಮತ್ತು 17ಕ್ಕೂ ಹೆಚ್ಚು ಸ್ಲೀಪರ್‌ ಬಸ್‌ಗಳ(Sleeper Bus) ವ್ಯವಸ್ಥೆ ಮಾಡಲಾ​ಗಿದೆ. ಪಾದ​ಯಾ​ತ್ರೆಯು ರಾತ್ರಿ ಉಳಿದುಕೊಳ್ಳುವ ಸ್ಥಳದಲ್ಲಿ ಈ ಕಾರಾ​ವಾನ್‌, ವಾಹನಗಳು ತಂಗಲಿವೆ.

ಉಚಿತ ಪೆಟ್ರೋಲ್‌ ವ್ಯವಸ್ಥೆ:

ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಕನಕಪುರದ ಕೆಲ ಪೆಟ್ರೋಲ್‌(Petrol) ಬಂಕ್‌ಗಳಲ್ಲಿ ಉಚಿತ ಪೆಟ್ರೋಲ್‌ ವ್ಯವಸ್ಥೆ ಮಾಡಲಾಗಿತ್ತು. ಕನಕಪುರ ತಾಲೂಕಿನ ಎಲ್ಲಾ ಗ್ರಾಪಂ ಜನರಿಗೆ ಉಚಿತ ಪೆಟ್ರೋಲ್‌ ವ್ಯವಸ್ಥೆಯನ್ನು ಕಾಂಗ್ರೆಸ್‌ ಕಾರ್ಯಕರ್ತರೇ ಮಾಡಿದ್ದು, ಪ್ರತಿ ಬೈಕ್‌ಗೆ 300ರಿಂದ 500 ಪೆಟ್ರೋಲ್‌ ಹಾಕಿಸಲು ಬಂಕ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ವಾಕಿಟಾಕಿ ವ್ಯವಸ್ಥೆ

ರಾಮನಗರ: ಸಂಗಮ ಕ್ಷೇತ್ರದಲ್ಲಿ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ಇದ್ದ ಕಾರಣ ಕಾಂಗ್ರೆಸ್ಸಿಗರು ಸಂವಹನಕ್ಕಾಗಿ ಪ್ರತ್ಯೇಕಗ ವಾಕಿಟಾಕಿ ವ್ಯವಸ್ಥೆ ಮಾಡಿಕೊಂಡಿದ್ದರು. ಭಾರೀ ಸಂಖ್ಯೆಯಲ್ಲಿ ಜನ ಸೇರುವುದು ಮತ್ತು ಹಲವು ಪ್ರಮುಖ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಸಂವಹನಕ್ಕೆ ಪಾದಯಾತ್ರೆಗೆ ಚಾಲನೆ ನೀಡುವ ಸ್ಥಳವಾದ ಸಂಗಮದಲ್ಲಿ ಮೊಬೈಲ್‌ ಸಮಸ್ಯೆ ಎದುರಾಗಿತ್ತು. ಈ ಕುರಿತು ಮೊದಲೇ ತಿಳಿದುಕೊಂಡಿದ್ದ ಮುಖಂಡರು ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಮುಖಂಡರು, ಕಾರ್ಯಕರ್ತರಿಗೆ ಪ್ರತ್ಯೇಕ ವಾಕಿಟಾಕಿ ಒದಗಿಸಿದ್ದರು. ಈ ಮೂಲಕ ಸಂವಹನ ಕೊರತೆಯಾಗದಂತೆ ನೋಡಿಕೊಂಡರು.

Mekedatu Padayatre: ಡಿಕೆ ಸೋದರರಿಗೆ ಅದ್ಧೂರಿ ಸ್ವಾಗತ: ಮೊದಲ ದಿನ 15 ಕಿಮೀ ನಡಿಗೆ, 8000 ಜನ ಭಾಗಿ!

ಏನೇ ಬಂದರೂ ಹೋರಾಟ ನಿಲ್ಲಿಸಬೇಡಿ: ಮಲ್ಲಿಕಾರ್ಜುನ ಖರ್ಗೆ

ಮೇಕೆದಾಟು ಯೋಜನೆಯ ಶ್ರೇಯಸ್ಸು ಕಾಂಗ್ರೆಸ್‌ಗೆ(Congress) ಹೋಗಬಾರದು ಎಂಬ ಕಾರಣಕ್ಕೆ ಪಾದಯಾತ್ರೆ ತಡೆಯಲು ಬಿಜೆಪಿ(BJP), ಜೆಡಿಎಸ್‌(JDS) ಪ್ರಯತ್ನಿಸುತ್ತಿವೆ. ಎಷ್ಟೇ ಅಡ್ಡಿ ಉಂಟಾದರೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸಬೇಡಿ ಎಂದು ರಾಜ್ಯಸಭೆ ವಿರೋಧಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಕರೆ ನೀಡಿದರು. ಈ ಯೋಜನೆಯಿಂದ ತಮಿಳುನಾಡು(Tamil Nadu) ಸೇರಿದಂತೆ ಯಾರೊಬ್ಬರಿಗೂ ತೊಂದರೆ ಆಗುವುದಿಲ್ಲ. ಎರಡೂ ರಾಜ್ಯಗಳ ಜನರಿಗೆ ಈ ಯೋಜನೆ ನೆರವಾಗಲಿದೆ. ಹೀಗಾಗಿ ಈ ಯೋಜನೆಗೆ ಯಾವುದೇ ಅಡೆತಡೆ ಎದುರಾಗಬಾರದು ಎಂದರು.

ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನೆಯಿಂದ ಬೆಂಗಳೂರಿಗೆ ಹಾಗೂ ಸುಮಾರು ಹಳ್ಳಿಗಳಿಗೆ 62 ಟಿಎಂಸಿ ಕುಡಿಯುವ ನೀರು(Drinking Water) ಸಿಗುತ್ತದೆ. ಜತೆಗೆ 400 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಮಾಡಬಹುದು. ಜತೆಗೆ ತಮಿಳುನಾಡಿನ ಪಾಲಿನ ನೀರನ್ನು ಎಲ್ಲಾ ಕಾಲದಲ್ಲೂ ಬಿಡಲು ಸಹ ನೆರವಾಗುತ್ತದೆ. ಇಂತಹ ಉತ್ತಮ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಎಂ.ಬಿ. ಪಾಟಿಲ್‌ ರೂಪ ಕೊಟ್ಟಿದ್ದರು. ಡಿ.ಕೆ. ಶಿವಕುಮಾರ್‌(DK Shivakumar) ಅವರು ಜಲ ಸಂಪನ್ಮೂಲ ಸಚಿವರಾದಾಗ ಪರಿಷ್ಕೃತ ಡಿಪಿಆರ್‌ನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಯೋಜನೆ ಜಾರಿಯಾದರೆ ಬೆಂಗಳೂರಿನ ನೀರಿನ ಸಮಸ್ಯೆ ನೀಗುತ್ತದೆ ಎಂದರು.
 

Follow Us:
Download App:
  • android
  • ios