Mekedatu Padayatre: ಡಿಕೆ ಸೋದರರಿಗೆ ಅದ್ಧೂರಿ ಸ್ವಾಗತ: ಮೊದಲ ದಿನ 15 ಕಿಮೀ ನಡಿಗೆ, 8000 ಜನ ಭಾಗಿ!

*ಅಡ್ಡಿ-ಆತಂಕವಿಲ್ಲದೆ ಮೇಕೆದಾಟು ಪಾದಯಾತ್ರೆ ಶುಭಾರಂಭ
*ಸಂಗಮದಿಂದ ಹೊರಟು ಡಿಕೆಶಿ ಹುಟ್ಟೂರು ದೊಡ್ಡಾಲಹಳ್ಳಿಗೆ ಆಗಮನ
 

8000 people including DK Shivakumar walk  for 15Km in Congress Mekedatu Padayatre in Ramanagar mnj

ರಾಮ​ನ​ಗರ (ಜ. 10): ರಾಜ್ಯ ಸರ್ಕಾರದ ಕೋವಿಡ್‌ ಕಠಿಣ ನಿರ್ಬಂಧಗಳಿಗೆ (Covid 19 Restrictions) ಸಡ್ಡು ಹೊಡೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ನೇತೃತ್ವದಲ್ಲಿ ನಮ್ಮ ನೀರು, ನಮ್ಮ ಹಕ್ಕು ಘೋಷಣೆಯೊಂದಿಗೆ ಆರಂಭವಾದ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಮೊದಲ ದಿನವಾದ ಭಾನುವಾರ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಸುಮಾರು 15 ಕಿ.ಮೀ. ಕ್ರಮಿಸಿತು. ಕಾವೇರಿ ನದಿ ನೀರಿನ ನೀನಾದ ಹಿಮ್ಮೇ​ಳ, ಜಾನ​ಪದ ಕಲೆಗಳ ಮುಮ್ಮೇ​ಳ​ದೊಂದಿಗೆ ಐತಿ​ಹಾ​ಸಿಕ ಪಾದ​ಯಾ​ತ್ರೆ ಮೊದಲ ದಿನ ಮೇಕೆದಾಟು ಸಮೀಪದ ಸಂಗಮದಿಂದ ಡಿ.ಕೆ.ಶಿವಕುಮಾರ್‌ ಅವರ ಹುಟ್ಟೂರಾದ ದೊಡ್ಡಾಲಹಳ್ಳಿವರೆಗೆ ಹೆಜ್ಜೆಹಾಕಿತು. ರಾಜ್ಯದ ವಿವಿಧ ಕಡೆ​ಗ​ಳಿಂದ ಆಗ​ಮಿ​ಸಿದ್ದ ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ ಸೇರಿ​ ವಿವಿಧ ಜಾನ​ಪದ ಕಲಾ ತಂಡ​ಗಳು ಕಲಾ ಪ್ರದ​ರ್ಶನ ನೀಡುವ ಮೂಲಕ ಕಳೆ​ಕ​ಟ್ಟಿ​ದವು.

"

ಉತ್ಸಾ​ಹ​ದಿಂದ ಹೆಜ್ಜೆ ಮೇಲೆ ಹೆಜ್ಜೆ

ಪಾದ​ಯಾ​ತ್ರೆಯಲ್ಲಿ ಎಲ್ಲಾ ನಾಯ​ಕರು ಒಟ್ಟಾಗಿ ತೆರ​ಳದೆ ಹಲವು ತಂಡ​ಗಳ ಮೂಲಕ ಪ್ರತ್ಯೇಕವಾಗಿ ಹೆಜ್ಜೆ ಹಾಕಿ​ದರು. ಮಾಜಿ ಸಿಎಂ ಸಿದ್ದ​ರಾ​ಮಯ್ಯ ಮತ್ತು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಪ್ರತ್ಯೇಕ ತಂಡ​ಗ​ಳಲ್ಲಿ ಮುನ್ನ​ಡೆ​ದು ಕಾರ್ಯ​ಕ​ರ್ತ​ರಲ್ಲಿ ಜೋಶ್‌ ತುಂಬು​ತ್ತಿ​ದ್ದರು. ಹಿರಿಯರೂ ಆದ ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರಿ​ನಲ್ಲಿ ತೆರ​ಳಿ​ದರು. ಕಾಂಗ್ರೆಸ್‌ನ ​ಘ​ಟಾ​ನು​ಘಟಿ ಹಿರಿಯ ನಾಯಕರು, ಸಂಸದರು, ಶಾಸಕರು, ಮಹಿಳಾ ಪ್ರತಿನಿಧಿಗಳು ಸೇರಿ ಸು​ಮಾರು 8 ರಿಂದ 10 ಸಾವಿರ ಕಾರ್ಯಕರ್ತರು ಪಾದ​ಯಾ​ತ್ರೆ​ಯಲ್ಲಿ ಭಾಗಿಯಾಗಿದ್ದರು. ಹೆಚ್ಚಿನ ನಾಯ​ಕರು ಮಾಸ್ಕ್‌ ಧರಿ​ಸದೆ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದ್ದು ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Mekedatu Politics: ಕಾಂಗ್ರೆಸ್ಸಿನದ್ದು ರಾಜಕೀಯಪ್ರೇರಿತ ಪಾದಯಾತ್ರೆ: ಬೊಮ್ಮಾಯಿ ಕಿಡಿ

ಹೆಗ್ಗೂರಲ್ಲಿ ಭೋಜನ:ಸುಮಾರು 6.5 ಕಿ.ಮೀ ಸಾಗಿದ ಪಾದಯಾತ್ರಿಕರು ಹೆಗ್ಗ​ನೂರು ಗ್ರಾಮದಲ್ಲಿ ಭೋಜನ ಸ್ವೀಕರಿಸಿ, ವಿಶ್ರಾಂತಿ ಪಡೆದರು. ನಂತರ ಸಂಜೆ 5ಕ್ಕೆ ಮತ್ತೆ ನಡಿಗೆ ಆರಂಭಿದರು. ಈ ವೇಳೆ ನಟಿ ಉಮಾಶ್ರೀ ತಮಟೆ ಸದ್ದಿಗೆ ಡ್ಯಾನ್ಸ್‌ ಮಾಡಿದ್ದು ವಿಶೇಷವಾಗಿತ್ತು. ಅವ​ರನ್ನು ಅನು​ಕ​ರಿ​ಸಿದ ಮಹಿಳಾ ಕಾಂಗ್ರೆ​ಸ್ಸಿ​ಗರು ಡೊಳ್ಳು-ತಮಟೆ ನಾದಕ್ಕೆ ತಾಳ ಹಾಕುತ್ತಾ ದೊಡ್ಡಾ​ಲ​ಹ​ಳ್ಳಿ ವರೆಗಿನ ಪ್ರಯಾಣಕ್ಕೆ ಉತ್ಸಾಹ ತುಂಬಿದರು. ವೀಕೆಂಡ್‌ ಕರ್ಫ್ಯೂ ಕಾರ​ಣ ಪಾದಯಾತ್ರೆಗೆ ಜಿಲ್ಲಾಡಳಿತ ಹಾಗೂ ಪೊಲೀಸರು ತಡೆ ಒಡ್ಡಬಹುದೆಂಬ ನಿರೀಕ್ಷೆ ಇತ್ತು.

 

 

11.15ಕ್ಕೆ ನಡಿಗೆ ಆರಂಭ

11.15ರ ಸುಮಾರಿಗೆ ಸಂಗಮದಿಂದ ಆರಂಭ, ಮಧ್ಯಾಹ್ನ 3.30ರ ವೇಳೆಗೆ ಹೆಗ್ಗ​ನೂರು ದೊಡ್ಡಿಗೆ ಆಗಮನ, ಭೋಜನ ಸೇವಿ​ಸಿ, ಕೆಲ​ಹೊತ್ತು ವಿಶ್ರಾಂತಿ. 5ಗಂಟೆಗೆ ಹೊರಟು ಸಂಜೆ 7 ಗಂಟೆಗೆ ದೊಡ್ಡಾ​ಲ​ಹ​ಳ್ಳಿ ಪ್ರವೇಶ. ರಾತ್ರಿ ವಾಸ್ತವ್ಯ.

ಇಂದು ಕನಕಪುರಕ್ಕೆ ಆಗಮನ

2ನೇ ದಿನ ದೊಡ್ಡಾಲಹಳ್ಳಿಯಿಂದ 8 ಕಿ.ಮೀ. ಸಾಗಿ ಮಾದಪ್ಪನದೊಡ್ಡಿ ಬಳಿ ವಿಶ್ರಾಂತಿ, ಊಟ ಮುಗಿಸಿ ಮತ್ತೆ 8 ಕಿ.ಮೀ. ಸಾಗಿ ಕನಕಪುರ ತಾಲೂಕು ಕೇಂದ್ರ ಪ್ರವೇಶ. ರಾತ್ರಿ ಕನಕಪುರದಲ್ಲಿ ಪಾದಯಾತ್ರಿಗಳು ವಾಸ್ತವ್ಯ.

ಇದನ್ನೂ ಓದಿ: Mekedatu padayatra ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಷಡ್ಯಂತ್ರ, ಸ್ವಗ್ರಾಮದಲ್ಲಿ ಡಿಕೆಶಿ ಭಾವನಾತ್ಮಕ ಭಾಷಣ

ಡಿಕೆ ಸೋದರರಿಗೆ ಅದ್ಧೂರಿ ಸ್ವಾಗತ

ರಾಮ​ನ​ಗರ: ಪಾದಯಾತ್ರೆಯಲ್ಲಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸೋದರ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಹುಟ್ಟೂರು ದೊಡ್ಡಾ​ಲ​ಹ​ಳ್ಳಿ​ಯಲ್ಲಿ ಭರ್ಜರಿ ಸ್ವಾಗತ ದೊರೆ​ಯಿತು. ಸಂಜೆ 8 ಗಂಟೆ ವೇಳೆಗೆ ಆಗ​ಮಿ​ಸಿದ ಸೋದರರಿಗೆ ಗ್ರಾಮಸ್ಥರು ಹೂವಿನ ಮಳೆಯ ಸ್ವಾಗತ ನೀಡಿದರು, ಆರತಿ ಬೆಳ​ಗಿದರು. ಈ ವೇಳೆ ಗ್ರಾಮದ ಯುವ​ಕರು ಪಟಾಕಿ ಸಿಡಿಸಿ ಜೈಕಾರ ಹಾಕಿ ಪಾದ​ಯಾ​ತ್ರೆಗೆ ಶುಭ ಕೋರಿ​ದರು. ಇದಕ್ಕೂ ಮೊದಲು ಬೆಂಡ​ಗೋಡು ಗ್ರಾಮದ ದ್ವಾರ​ದಲ್ಲಿ ಹೆಣ್ಣು ಮಕ್ಕಳು ಕಳಸ ಹಿಡಿದು ಅದ್ಧೂ​ರಿ​ಯಾಗಿ ಸ್ವಾಗತಿಸಿ​ದರೆ, ಮಹಿ​ಳೆ​ಯರು ಬೆಲ್ಲ​ದಾ​ರತಿ ಮಾಡಿದರು. ಏಳ​ಗಳ್ಳಿ ಬಳಿಯೂ ನೂರಾರು ಜನರು ಡಿ.ಕೆ.​ಶಿ​ವ​ಕು​ಮಾರ್‌ಗೆ ಆರತಿ ಬೆಳಗಿ ಸ್ವಾಗತಿಸಿ​ದ​ರು. ಮೊದಲ ದಿನದ ಪಾದ​ಯಾತ್ರೆ ದೊಡ್ಡಾ​ಲ​ಹ​ಳ್ಳಿ​ಯಲ್ಲೇ ಮುಕ್ತಾ​ವಾ​ಗಿದ್ದು, ಪಾದ​ಯಾ​ತ್ರಿ​ಗ​ಳಿಗೆ ಇಲ್ಲಿ ವಾಸ್ತ​ವ್ಯದ ವ್ಯವಸ್ಥೆ ಮಾಡ​ಲಾ​ಗಿದೆ.

Latest Videos
Follow Us:
Download App:
  • android
  • ios