Asianet Suvarna News Asianet Suvarna News

Covid Rules Break: ಪಾದಯಾತ್ರೆ ವೇಳೆ ಕೋರೋನಾ ನಿಯಮ ಗಾಳಿಗೆ ತೂರಿದ ಕಾಂಗ್ರಸ್ಸಿಗರು

*   ಮಾಸ್ಕ್‌ ಇಲ್ಲ, ಅಂತರ ಮಾಯ, ಪೊಲೀಸರ ಮೌನ
*  ವೀಕೆಂಡ್‌ ಕರ್ಫ್ಯೂಗೆ ಬೆಲೆ ಕೊಡದ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು
*  ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡ್ತೇವೆ: ಕಾಂಗ್ರೆಸ್

Congress Leaders Break Covid Rules During Padayatra grg
Author
Bengaluru, First Published Jan 10, 2022, 6:53 AM IST

ಸಂಗಮ(ಜ.10): ಕಾಂಗ್ರೆಸ್‌ನ(Congress) ಮೇಕೆದಾಟು ಜಲಯೋಜನೆ(Mekedatu Project) ಪಾದಯಾತ್ರೆ ವೇಳೆ ಕೊರೋನಾ ಮಾರ್ಗಸೂಚಿಗಳನ್ನು ‘ನೀರಿಗೆ ಎಸೆದ’ ಪ್ರಸಂಗ ನಡೆಯಿತು. ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು, ವಾರಾಂತ್ಯದ ಕರ್ಫ್ಯೂ(Weekend Curfew) ಬೆಲೆ ಕೊಡಲಿಲ್ಲ. ಅಲ್ಲದೆ, ಮಾಸ್ಕ್‌ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಪಾಡದೇ ನಿಯಮ ಉಲ್ಲಂಘಿಸಿದರು. ಆದರೂ ತಕ್ಷಣ ಕ್ರಮ ಕೈಗೊಳ್ಳುವ ಪೊಲೀಸ್‌ ವ್ಯವಸ್ಥೆ ಹಾಗೂ ಜಿಲ್ಲಾಡಳಿತ ಸಂಗಮದಲ್ಲಿ ಮೂಕ ಪ್ರೇಕ್ಷಕರಾಗಿ ನಿಂತಿತ್ತು.

ಪಾದಯಾತ್ರೆ(Padayatra) ಉದ್ಘಾಟನಾ ಸಮಾರಂಭಕ್ಕೆ ಸಂಗಮದ ಹಿನ್ನೀರಿನ ಮೇಲೆ ನಿರ್ಮಿಸಿದ್ದ ಬೃಹತ್‌ ವೇದಿಕೆಯಲ್ಲಿ 300ಕ್ಕೂ ಹೆಚ್ಚು ಗಣ್ಯರು ಸಾಮಾಜಿಕ ಅಂತರ(Social Distance), ಮಾಸ್ಕ್‌(Mask) ಇಲ್ಲದೆ ಭಾಗವಹಿಸಿದ್ದರು. ಜತೆಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಇಕ್ಕಟ್ಟಾದ ಸ್ಥಳದಲ್ಲಿ ಸೇರಿದ್ದರಿಂದ ತೀವ್ರ ಜನಜಂಗುಳಿ ಉಂಟಾಗಿತ್ತು.

Mekedatu Padayatre: ಈ ಸಂದರ್ಭದಲ್ಲಿ ಪಾದಯಾತ್ರೆ ಬೇಕಾ.? ಕಾಂಗ್ರೆಸ್ ಜವಾಬ್ದಾರಿಯಿಂದ ವರ್ತಿಸಲಿ: ಆರಗ

ವಿಡಿಯೋ ದೃಶ್ಯ ಆಧರಿಸಿ ಕೇಸ್‌?

ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ಕರ್ಫ್ಯೂ ನಡುವೆಯೂ ಸಾವಿರಾರು ಮಂದಿ ನಡೆಯುತ್ತಿದ್ದರೂ ಪೊಲೀಸರ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಬದಲಿಗೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಮೂಲಗಳ ಪ್ರಕಾರ ವಿಡಿಯೋ ದೃಶ್ಯ ಆಧರಿಸಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡ್ತೇವೆ: ಕಾಂಗ್ರೆಸ್

ರಾಜಧಾನಿ ಬೆಂಗಳೂರು ಸೇರಿ ಕಾವೇರಿ ಜಲಾನಯನ ಪ್ರದೇಶದ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮೇಕೆದಾಟು (Mekedatu) ಯೋಜನೆಗೆ ಚಾಲನೆ ನೀಡಲು ಒತ್ತಡ ಹೇರುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದೆ. 

'ಇದರಲ್ಲಿ ನಾವು ಯಾವುದೇ ರೂಲ್ಸ್ ಬ್ರೇಕ್ ಮಾಡುತ್ತಿಲ್ಲ. ಕೋವಿಡ್ ನಿಯಮ ಪಾಲಿಸಿಯೇ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಶಾಸಕ ರಂಗನಾಥ್ ಹೇಳಿದ್ದರು.  ಕೊರೋನಾ ಹಾವಳಿ ವಿಪರೀತ ಆಗುತ್ತಿರುವ ಕಾರಣಕ್ಕೂ ಪಾದಯಾತ್ರೆ ಕೈಬಿಡುವಂತೆ ಪ್ರತಿಪಕ್ಷ ಕಾಂಗ್ರೆಸ್‌ಗೆ ರಾಜ್ಯ ಸರ್ಕಾರ ನೇರ ಆಗ್ರಹ ಮಾಡಿದೆ. ಅಲ್ಲದೆ, ವಾರಾಂತ್ಯ ಕರ್ಫ್ಯೂದಂತಹ ಕ್ರಮಗಳ ಮೂಲಕ ತಡೆಯೊಡ್ಡುವ ಪ್ರಯತ್ನವನ್ನೂ ನಡೆಸಿದೆ. ಆದರೆ, ಇದ್ಯಾವುದಕ್ಕೂ ಜಗ್ಗದೆ ಕೋವಿಡ್‌ ನಿಯಮಾವಳಿ ಪಾಲಿಸಿಯೇ ಪಾದಯಾತ್ರೆ ನಡೆಸುವ ವಾಗ್ದಾನದೊಂದಿಗೆ ಕಾಂಗ್ರೆಸ್‌ ನಾಯಕರು ಪಾದಯಾತ್ರೆಗೆ ಮುಂದಾಗಿದ್ದರು. ಆದರೆ, ಅದು ಪಾದಯಾತ್ರೆ ವೇಳೆ ಪಾಲನೆಯಾಗಿಲ್ಲ. 

 'ಎಂ.ಬಿ. ಪಾಟೀಲ್‌ ರಾಜಕಾರಣಿಯಾಗಿರಲು ನಾಲಾಯಕ್‌'

ಹುಬ್ಬಳ್ಳಿ: ಮೇಕೆದಾಟು ಯೋಜನೆ(Mekedatu Project) ವಿಚಾರದಲ್ಲಿ ಅನಾಹುತ ಮತ್ತು ಅನಪೇಕ್ಷಿತ ವಿಳಂಬಕ್ಕೆ ಹಿಂದಿನ ಕಾಂಗ್ರೆಸ್‌ ಸರಕಾರದ ನೀರಾವರಿ ಸಚಿವ ಎಂ.ಬಿ. ಪಾಟೀಲರೇ(MB Patil) ಕಾರಣ ಎಂದು ಬಿಜೆಪಿ(BJP)ಎಸ್‌.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ(Mahendra Kautala) ಕಿಡಿಕಾರಿದ್ದರು.

Karnataka Politics: ಪಾದಯಾತ್ರೆಗೆ ಸಿದ್ದು, ಡಿಕೆಶಿ ಹಠ ಹಿಡಿದರೆ ನಾವೇನು ಮಾಡೋಣ: ಈಶ್ವರಪ್ಪ

ಈಗ ನೀರಾವರಿ ಸಚಿವರಾಗಿರುವ ಗೋವಿಂದ ಕಾರಜೋಳ(Govind Karjol)ಅವರು ಕಾಂಗ್ರೆಸ್ಸಿಗರಿಂದ ಆಗಿರುವ ಸಮಸ್ಯೆಗಳನ್ನು ಮತ್ತು ಕಾಂಗ್ರೆಸ್‌ ಸರಕಾರದ ವೈಫಲ್ಯವನ್ನು ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಇದರಿಂದ ಕುಪಿತಗೊಂಡ ಎಂ.ಬಿ. ಪಾಟೀಲ ಅವರು ಕಾರಜೋಳ ಅವರನ್ನು ನಾಲಾಯಕ್‌ ಎಂದು ಕೆಟ್ಟಕೆಟ್ಟದಾಗಿ ಬೈದಿದ್ದಾರೆ. ಅವರು ಪರಿಶಿಷ್ಟ ಜಾತಿಯವರು(Scheduled Caste) ಎಂಬ ಕಾರಣಕ್ಕೇ ಇಷ್ಟೊಂದು ಕೀಳು ಭಾಷೆಯನ್ನು ಬಳಸಿದ್ದಾರೆ ಎಂದು ಖಂಡಿಸಿದ್ದರು.

ಬೇರೆ ಯಾರಾದರೂ ಇದ್ದರೆ ಕೀಳು ಭಾಷೆ ಬಳಸುತ್ತಿರಲಿಲ್ಲ. ಇವರ ದಡ್ಡತನಕ್ಕೆ ರಾಜ್ಯ ಉತ್ತರ ಕೊಡಬೇಕಾಗಿದೆ. ತಮ್ಮ ವೈಫಲ್ಯ ಮುಚ್ಚಿಡಲು ಬಿಜೆಪಿಯ ವಿರುದ್ಧ ಟೀಕಿಸುತ್ತಿದ್ದಾರೆ. ಇದು ಅತ್ಯಂತ ಹಾಸ್ಯಾಸ್ಪದ. ಕಾರಜೋಳ ಅವರು ಉತ್ತಮ ಮತ್ತು ದೂರದೃಷ್ಟಿಯ ಸಚಿವರು. ಆದರೆ, ಎಂ.ಬಿ. ಪಾಟೀಲರು ನಾಲಾಯಕ್‌ ಮಂತ್ರಿಯಾಗಿದ್ದರು ಎಂದು ಟೀಕಿಸಿದ್ದಾರೆ.

ಕಾರಜೋಳ ಅವರು ದಲಿತರಾದರೂ(Dalit) ದೇಶದ ಸಂವಿಧಾನಕರ್ತೃ ಡಾ. ಬಿ.ಆರ್‌. ಅಂಬೇಡ್ಕರ್‌(Dr BR Ambedkar), ಜಗಜೀವನರಾಂ, ರಾಂವಿಲಾಸ್‌ ಪಾಸ್ವಾನ, ಕರ್ನಾಟಕದ ಬಸವಲಿಂಗಪ್ಪ, ಎನ್‌. ರಾಚಯ್ಯ, ಬಿ. ರಾಚಯ್ಯ, ಟಿ.ಎನ್‌. ನರಸಿಂಹಮೂರ್ತಿ ಅವರ ಮಾದರಿಯಲ್ಲೇ ದೂರದೃಷ್ಟಿಯ ರಾಜಕಾರಣಿ(Politician). ಅವರ ಕುರಿತು ನೀಚ ಭಾಷೆಯನ್ನು ಬಳಸಿ ಅವರನ್ನು ನಿಂದಿಸಿರುವುದು ದಲಿತ ಸಮುದಾಯಕ್ಕೇ ಮಾಡಿದ ನಿಂದನೆ ಮತ್ತು ಅವಮಾನ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios