Mysuru: ದಕ್ಷಿಣ ಪದವಿಧರ ಕ್ಷೇತ್ರ ಚುನಾವಣೆಗೆ ತಪ್ಪಿದ ಬಿಜೆಪಿ ಟಿಕೆಟ್: ಗೋ.ಮಧುಸೂದನ್ ಹೇಳಿದ್ದಿಷ್ಟು
* ನನಗೆ ಸತತವಾಗಿ ಎರಡನೇ ಬಾರಿಗೆ ಅವಕಾಶ ನಿರಾಕರಣೆ
* ಪಕ್ಷದ ನಿರ್ಧಾರವನ್ನು ಹೃದಯದಿಂದ ಒಪ್ಪಿರುತ್ತೇನೆ
* ಇದು ‘ದೇವರ ಚಿತ್ತ’ ಎಂಬುದು ನನ್ನ ನಂಬಿಕೆ, ಮುಂದೆಯೂ ತಾವು ಸಹಕರಿಸುವಿರಾಗಿ ನಂಬಿರುತ್ತೇನೆ
ಮೈಸೂರು(ಮಾ.12): ದಕ್ಷಿಣ ಪದವಿದರ ಕ್ಷೇತ್ರ(South Graduates Constituency) ಚುನಾವಣೆಗೆ ಎರಡನೇ ಬಾರಿಯೂ ಅವಕಾಶ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಗೋ.ಮಧುಸೂದನ್(Go Madhusoodhan) ಅವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಫೇಸ್ಬುಕ್(Facebook) ಖಾತೆಯಲ್ಲಿ ಬರೆದುಕೊಂಡಿರುವ ಗೋ.ಮಧುಸೂದನ್ ಅವರು, ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ, ಮೂರು ಬಾರಿ ತಮ್ಮೆಲ್ಲರ ಆಶೀರ್ವಾದದಿಂದ ಗೆದ್ದು, ಪ್ರಾಮಾಣಿಕವಾಗಿ ದೇಶದ ಸೇವೆಯನ್ನು ಮಾಡುವ ಸೌಭಾಗ್ಯ ನನ್ನದಾಗಿತ್ತು. ಈಗ ನನಗೆ ಸತತವಾಗಿ ಎರಡನೇ ಬಾರಿಗೆ ಅವಕಾಶ ನಿರಾಕರಿಸಲಾಗಿದೆ .
ಸಿದ್ದರಾಮಯ್ಯ ಹುಣಸೂರಿನಲ್ಲಿ ಸ್ಪರ್ಧೆ ಮಾಡ್ಲಿ, ಗೆಲ್ಲಿಸ್ಕೊಂಡು ಬರುವ ಜವಾಬ್ದಾರಿ ನನ್ನದು ಎಂದ ಜೆಡಿಎಸ್ ಶಾಸಕ
ಪಕ್ಷದ ನಿರ್ಧಾರವನ್ನು ಹೃದಯದಿಂದ ಒಪ್ಪಿರುತ್ತೇನೆ. ಈ ಬಾರಿ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಲು ತಾವೆಲ್ಲರೂ ಆಶೀರ್ವದಿಸಿ ಸಹಕರಿಸಿರುತ್ತೀರಿ, ತಮಗೆಲ್ಲರಿಗೂ ಧನ್ಯವಾದಗಳು. ಇದು ‘ದೇವರ ಚಿತ್ತ’ ಎಂಬುದು ನನ್ನ ನಂಬಿಕೆ, ಮುಂದೆಯೂ ತಾವು ಸಹಕರಿಸುವಿರಾಗಿ ನಂಬಿರುತ್ತೇನೆ ಎಂದು ಹೇಳುವ ಮೂಲಕ ಬೆಂಬಲಿಗರಿಗೆ ಧನ್ಯವಾದ ತಿಳಿಸಿದ್ದಾರೆ.
ಬಿಜೆಪಿ ಟಿಕೆಟ್ಗೆ ಗೋ. ಮಧುಸೂದನ್ ಆಕಾಂಕ್ಷಿ
ಮೈಸೂರು: ವಿಧಾನಪರಿಷತ್ತಿಗೆ (Legislative council) ದಕ್ಷಿಣ ಪದವೀಧರರ ಕ್ಷೇತ್ರದಿಂದ (South Graduates Constituency) ನಡೆಯುವ ಚುನಾವಣೆಗೆ (Election) ಬಿಜೆಪಿ (BJP) ಟಿಕೆಟ್ಗೆ ಪದವೀಧರರ ನೊಂದಣಿ ಕಾರ್ಯದ ಮೂಲಕ ಗೋ. ಮಧುಸೂದನ ಅವರು ಆಕಾಂಕ್ಷಿ ಎಂಬುದನ್ನು ತೋರಿಸಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ತಿಳಿಸಿದರು.
ಜಿಆರ್ಎಸ್ ಫ್ಯಾಂಟಸಿ ಫಾರ್ಕ್ನಲ್ಲಿ (GRS Park) ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ ನೇತೃತ್ವದಲ್ಲಿ ಅ.10 ರಲ್ಲಿ ನಡೆದಿದ್ದ ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ದರು.
ಗೋ. ಮಧುಸೂದನ ಅವರಲ್ಲಿ ಬಿಜೆಪಿ ಅಭ್ಯರ್ಥಿ ಆಗಬೇಕೆನ್ನುವ ಆಕಾಂಕ್ಷೆ ಇದೆ. ಹಾಗೆಯೇ, ಅನೇಕರಲ್ಲಿ ಆ ಭಾವನೆ ಸ್ವಾಭಾವಿಕವಾಗಿಯೇ ಇದೆ. ಹೀಗಾಗಿ ಅನೇಕರು ಬಿಜೆಪಿ ಟಿಕೆಟ್ (BJP Ticket) ಆಕಾಂಕ್ಷಿಗಳಿರುವುದು ಸ್ಪಷ್ಟವಾಗಿದೆ. ಕೆಲವರು ಈಗಾಗಲೇ ಪದವೀಧರರ ಭೇಟಿ ಮಾಡಿ, ನೊಂದಣಿ ಮಾಡಿಸುವ ಪ್ರಯತ್ನ ನಡೆಸುತ್ತಾ ಪ್ರಬಲ ಆಕಾಂಕ್ಷಿಗಳು ಎನ್ನುತ್ತಿದ್ದಾರೆ. ಆದರೆ, ಗೋ. ಮಧುಸೂದನ ಅವರು ಚುನಾವಣಾ ಆಯೋಗದ ನೋಟಿಫಿಕೇಷನ್ (Notification) ಆದ ಬಳಿಕ ನೋಂದಣಿಗೆ ಮುಂದಾಗುವ ಮೂಲಕ ತಾವು ಆಕಾಂಕ್ಷಿ ಎಂದು ಮುನ್ನೆಲೆಗೆ ಬಂದಿದ್ದಾರೆ. ಆದರೆ, ಪಕ್ಷ ಇನ್ನೂ ಅಭ್ಯರ್ಥಿಗಳನ್ನು (Candidates) ಘೋಷಿಸಿಲ್ಲ. ಮುಂದಿನ ದಿನಗಳಲ್ಲಿ ಘೋಷಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದರು.
2022ರ ಜೂನ್ನಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಮೈಸೂರು (Mysuru), ಹಾಸನ (Hassan), ಮಂಡ್ಯ (Mandya), ಚಾಮರಾಜನಗರ (chamarajanagar) ವಿಶಾಲ ನಾಲ್ಕೂ ಜಿಲ್ಲೆಗಳಲ್ಲಿರುವ ಪದವೀಧರರು ಮತದಾರರು ಮತದಾನ ಮಾಡಲು ಅವಕಾಶವಿದೆ. ನೊಂದಣಿಯಾದ ಎಲ್ಲಾ ಪದವೀಧರರೂ ಮತದಾನ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದರು.
'ಇಷ್ಟು ವರ್ಷ ಏನೆಲ್ಲಾ ಚಿಂತನೆಗಳನ್ನ ಮಾಡಿದ್ದೇವೋ ಆ ವಿಚಾರಕ್ಕೆ ಪೂಕರವಾಗಿ ಸರ್ಕಾರ ನಡೆಯುತ್ತಿದೆ'
ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡರು (D Madegowda) ಮಾತನಾಡಿ, ಮಧುಸೂದನರವರ ಸಾರ್ವಜನಿಕ ಜೀವನದ ಬಗ್ಗೆ ಕೇಳಿದ್ದೀರಿ. ತಾವು ನಂಬಿದ ತತ್ವ ಸಿದ್ಧಾಂತಗಳ ಮೇಲೆ ಅವರೆಷ್ಟುಕಟುವಾಗಿ ವಾದ ಮಾಡುತ್ತಾರೆಂದು ನೋಡಿದ್ದೇನೆ. ಯಾವತ್ತೂ ಕೂಡ ದೇಶಭಕ್ತಿ, ದೇಶನಿಷ್ಠೆ, ಪ್ರಾಮಾಣಿಕತೆಗೆ ಕುಂದು ಬರದಂತೆ ಸಾರ್ವಜನಿಕ ಜೀವನವನ್ನು ನಡೆಸಿದಂತಹವರಾಗಿದ್ದಾರೆ ಎಂದು ಹೇಳಿದ್ದರು.
ಪದವೀದರರು ನೋಂದಣಿ ಮಾಡಿಸಬೇಕು. ಯಾರಾದರೂ ಅಭ್ಯರ್ಥಿಯಾಗಿ ತಮ್ಮ ಅಭ್ಯರ್ಥಿಗಳ ಗೆಲ್ಲಬೇಕು ಅನ್ನೋ ಛಲದಿಂದ ನಾವು ನೋಂದಣಿ ಮಾಡಿಸಿಕೊಳ್ಳಬೇಕು. ಈ ನಾಲ್ಕು ಜಿಲ್ಲೆಯ ಒರ್ವ ಪದವೀಧರನೂ ನೊಂದಣಿಯಿಂದ ದೂರ ಉಳಿಯದಂತೆ ನೋಡಿಕೊಂಡರೆ ಗೆಲುವು ನಮ್ಮದಾಗಲಿದೆ ಎಂದು ತಿಳಿಸಿದ್ದರು.