Asianet Suvarna News Asianet Suvarna News

ಬಡವರ ಸೇವೆ ಮಾಡಲು ಜೆಡಿಎಸ್‌ಗೆ ಬಹುಮತ ನೀಡಿ: ಕುಮಾರಸ್ವಾಮಿ

ನೊಂದವರು, ಬಡವರಿಗೆ ನೆಮ್ಮದಿ ಕಲ್ಪಿಸಲು ಸ್ಪಷ್ಟ ಬಹುಮತದೊಂದಿಗೆ ಐದು ವರ್ಷಗಳ ಕಾಲ ಅಧಿಕಾರ ಕೊಟ್ಟು ಜನಸೇವೆ ಮಾಡಲು ಅವಕಾಶ ಕೊಡಿ. ಸಿಂಧನೂರಿನ ಬಾಲಕಿಯೊಬ್ಬಳಿಗೆ ಬೋನ್‌ ಮ್ಯಾರೋ ಕಾಯಿಲೆಯಿದ್ದು, ಇದರ ಚಿಕಿತ್ಸೆಗಾಗಿ ರು.35 ಲಕ್ಷ ಬೇಕು. ಫೆ.5ಕ್ಕೆ ಬೆಂಗಳೂರಿನಲ್ಲಿ ಆ ಬಾಲಕಿಗೆ ಚಿಕಿತ್ಸೆ ಕೊಡಿಸುತ್ತೇನೆ: ಕುಮಾರಸ್ವಾಮಿ

Give Majority to JDS Says Former CM HD Kumaraswamy grg
Author
First Published Jan 31, 2023, 10:00 PM IST

ಸಿಂಧನೂರು(ಜ.31):  ಬಡವರ ಸೇವೆ ಮಾಡಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಜೆಡಿಎಸ್‌ ಪಕ್ಷ ಅಧಿಕಾರ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
ಸ್ಥಳೀಯ ಜೂನಿಯರ್‌ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಪಂಚರತ್ನ ರಥಯಾತ್ರೆಯ ಬೃಹತ್‌ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನೊಂದವರು, ಬಡವರಿಗೆ ನೆಮ್ಮದಿ ಕಲ್ಪಿಸಲು ಸ್ಪಷ್ಟ ಬಹುಮತದೊಂದಿಗೆ ಐದು ವರ್ಷಗಳ ಕಾಲ ಅಧಿಕಾರ ಕೊಟ್ಟು ಜನಸೇವೆ ಮಾಡಲು ಅವಕಾಶ ಕೊಡಿ. ಸಿಂಧನೂರಿನ ಬಾಲಕಿಯೊಬ್ಬಳಿಗೆ ಬೋನ್‌ ಮ್ಯಾರೋ ಕಾಯಿಲೆಯಿದ್ದು, ಇದರ ಚಿಕಿತ್ಸೆಗಾಗಿ ರು.35 ಲಕ್ಷ ಬೇಕು. ಫೆ.5ಕ್ಕೆ ಬೆಂಗಳೂರಿನಲ್ಲಿ ಆ ಬಾಲಕಿಗೆ ಚಿಕಿತ್ಸೆ ಕೊಡಿಸುತ್ತೇನೆಂದು ಹೇಳಿದ್ದೇನೆ.

ರಾಜಕಾರಣಿಗಳ ಮಕ್ಕಳೇಕೆ ರಾಜಕೀಯ ಮಾಡಬಾರದು? : ಎಚ್ಡಿಕೆ

ಈಗಾಗಲೇ 40 ರಿಂದ 50 ಜನರಿಗೆ ಈ ಕಾಯಿಲೆಯ ಚಿಕಿತ್ಸೆ ಕೊಡಿಸಿದ್ದೇನೆ. ಮುಂದೆ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಇಂತಹ ದುಬಾರಿ ಕಾಯಿಲೆಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸುವಂತೆ ಮಾಡುತ್ತೇನೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸಾಲಮನ್ನಾ ಹಾಗೂ 60 ವರ್ಷ ಮೇಲ್ಪಟ್ಟಹಿರಿಯ ನಾಗರಿಕರಿಗೆ 6 ಸಾವಿರ ಪಿಂಚಣಿ ಸೌಲಭ್ಯ ಕಲ್ಪಿಸುತ್ತೇನೆ ಎಂದು ಹೇಳಿದರು.

ನಂತರ ಶಾಸಕ ವೆಂಕಟರಾವ್‌ ನಾಡಗೌಡರು ಮಾತನಾಡಿದರು. ಗೊರೇಬಾಳ ಸಿದ್ಧಯ್ಯತಾತ, ಮಾಜಿ ಸಚಿವ ಸಾ.ರಾ.ಮಹೇಶ, ಶಾಸಕರಾದ ಭೋಜೇಗೌಡ, ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್‌ ಸದಸ್ಯರಾದ ರಮೇಶಗೌಡ, ಮಂಜೇಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

Follow Us:
Download App:
  • android
  • ios