Asianet Suvarna News Asianet Suvarna News

ರಾಜಕಾರಣಿಗಳ ಮಕ್ಕಳೇಕೆ ರಾಜಕೀಯ ಮಾಡಬಾರದು? : ಎಚ್ಡಿಕೆ

ವೈದ್ಯರ ಮಕ್ಕಳು ವೈದ್ಯಾರುಗುತ್ತಾರೆ. ಜಡ್ಜ್‌ಗಳ ಮಕ್ಕಳು ಜಡ್ಜ್  ಅಗ್ತಾರೆ. ಐಎಎಸ್‌ ಅಧಿಕಾರಿಗಳ ಮಕ್ಕಳು ಐಎಎಸ್‌ ಮಾಡಲ್ವಾ. ಹಾಗಾದರೆ ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗಬಾರದೇ? ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಪ್ರಶ್ನೆ ಇದು.

Children of politicians should not do politics HDK question at koppal rav
Author
First Published Jan 31, 2023, 1:18 PM IST

ಕೊಪ್ಪಳ (ಜ.31) : ವೈದ್ಯರ ಮಕ್ಕಳು ವೈದ್ಯಾರುಗುತ್ತಾರೆ. ಜಡ್ಜ್‌ಗಳ ಮಕ್ಕಳು ಜv್ಜ… ಅಗ್ತಾರೆ. ಐಎಎಸ್‌ ಅಧಿಕಾರಿಗಳ ಮಕ್ಕಳು ಐಎಎಸ್‌ ಮಾಡಲ್ವಾ. ಹಾಗಾದರೆ ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗಬಾರದೇ? ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಪ್ರಶ್ನೆ ಇದು.

 ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕುಟುಂಬದವರು ಮಾಡುವ ಕಾಯಕ ಅಥವಾ ಉದ್ಯೋಗವನ್ನು ಅವರು ಮಕ್ಕಳು ಇಷ್ಟಪಟ್ಟು ಮಾಡಿದರೆ ತಪ್ಪಲ್ಲ. ವಯಸ್ಕರು ತಾವೇನು ಮಾಡಬೇಕು ಎನ್ನುವ ಹಕ್ಕನ್ನು ಸಂವಿಧಾನವೇ ನೀಡಿದೆ. ಅದರಂತೆ ರಾಜಕಾರಣಗಳ ಮಕ್ಕಳು ರಾಜಕಾರಣಿಗಳಾದರೆ ತಪ್ಪೇನಲ್ಲ ಎಂದು ಹೊಸ ವ್ಯಾಖ್ಯಾನ ಮಾಡಿದರು.

ಸಂಗಣ್ಣ ಕರಡಿಗೆ ಮರುಜೀವ ತುಂಬಿದ್ದೇ ಜೆಡಿಎಸ್‌: ಎಚ್‌ಡಿಕೆ

ಇದಕ್ಕೂ ಮೊದಲು ಅಮಿತ್‌ ಶಾ ಅವರು ಜೆಡಿಎಸ್‌ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಕ್ಕೆ ಕೆಂಡಮಂಡಲವಾದ ಅವರು, ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಅತಿ ಹೆಚ್ಚು ಕುಟುಂಬ ರಾಜಕಾರಣ ಬಿಜೆಪಿ, ಕಾಂಗ್ರೆಸ್ಸಿನಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.

ಅಮಿತ್‌ ಶಾ ಅವರಿಗೆ ಜೆಡಿಎಸ್‌ ನಾಯಕರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಅಮಿತ್‌ ಶಾ ಅವರ ಪುತ್ರನನ್ನು ಬಿಸಿಸಿಐನ ಉನ್ನತ ಹುದ್ದೆಯಲ್ಲಿ ಯಾವ ಆಧಾರದಲ್ಲಿ ನೇಮಿಸುವಂತೆ ಮಾಡಿದ್ದಾರೆ? ಅವರಿಗೆ ಯಾವ ಕ್ರಿಕೆಟ್‌ ಅನುಭವ ಇದೆ ? ಎಂದು ಖಾರವಾಗಿ ಪ್ರಶ್ನಿಸಿದರು. ಸುಪ್ರೀಂ ಕೋರ್ಚ್‌ ಆದೇಶ ಉಲ್ಲಂಘಿಸಿ ನೇಮಕ ಮಾಡಿದ್ದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಜೆಡಿಎಸ್‌ಗೆ ವೋಟ್‌ ಹಾಕಬೇಡಿ ಅನ್ನುವುದು ಯಾಕೆ? ಹಾಗಾದರೆ ಯಾರಿಗೆ ವೋಟು ಹಾಕಬೇಕು ಅನ್ನುವುದನ್ನು ಹೇಳಿ. ಅದನ್ನು ಬಿಟ್ಟು ನನ್ನನ್ನು ಯಾಕೆ ಟಾರ್ಗೆಟ್‌ ಮಾಡ್ತಾರೆ ಎಂದು ಕೇಳಿದರು.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಭದ್ರವಾಗಿದೆ. ಅಲ್ಲಿ ನಮ್ಮನ್ನು ಟಾರ್ಗೆಟ್‌ ಮಾಡಿದರೂ ಏನು ಆಗಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಪಂಚರತ್ನ ಯಾತ್ರೆಯಿಂದ ಜೆಡಿಎಸ್‌ ಪರ ಸುನಾಮಿ ಎದ್ದಿದೆ. ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಜೆಡಿಎಸ್‌ಗೆ ಕಡಿಮೆ ಸ್ಥಾನ, ನಾನೇನು ತಪ್ಪು ಮಾಡಿದ್ದೇನೆ?: ಎಚ್‌.ಡಿ.ಕುಮಾರಸ್ವಾಮಿ

ಈ ಭಾಗದಲ್ಲಿ ಸುಮಾರು 40ರಿಂದ 50 ಸ್ಥಾನಗಳು ಗೆಲ್ಲುವುದರಲ್ಲಿ ಅನುಮಾನ ಇಲ್ಲ. ಕುಷ್ಟಗಿಯಲ್ಲಿ ಇಂಥ ಸಭೆ ಆಗುತ್ತೆ ಅಂತಾ ಯಾರಾದರೂ ಊಹೆ ಮಾಡಿದ್ದಾರಾ? ತಾವರಗೇರಾದಲ್ಲಿ ಸೇರಿದ ಜನರನ್ನು ನಾನು ಊಹೆ ಮಾಡಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ನಮಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಕಾಂಗ್ರೆಸ್‌ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದರು.

Follow Us:
Download App:
  • android
  • ios