ಡಿ.25ರಂದು ರಾಜಕೀಯ ನಿರ್ಧಾರ ಪ್ರಕಟ, ಗಂಗಾವತಿಯಿಂದಲೇ ಸ್ಪರ್ಧೆ: ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟನೆ
ನನ್ನ ರಾಜಕೀಯ ಜೀವನದ ಬಗ್ಗೆ ಹಾಗು ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಪ್ರಯಾಣದ ಬಗ್ಗೆ ಡಿಸೆಂಬರ್ 25ರಂದು ಮಾಧ್ಯಮದ ಮೂಲಕವೇ ವಿವರಣೆ ನೀಡುತ್ತೇನೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ (ಡಿ.19): ನನ್ನ ರಾಜಕೀಯ ಜೀವನದ ಬಗ್ಗೆ ಹಾಗು ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಪ್ರಯಾಣದ ಬಗ್ಗೆ ಡಿಸೆಂಬರ್ 25ರಂದು ಮಾಧ್ಯಮದ ಮೂಲಕವೇ ವಿವರಣೆ ನೀಡುತ್ತೇನೆ. ಅಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಚರ್ಚೆ ಮಾಡುವುದು ಬೇಡ. ಈಗಾಗಲೇ ಕೆಲವೊಂದು ನಿರ್ಧಾರಗಳನ್ನು ಮಾಡಿದ್ದೇನೆ. ಆ ಪ್ರಕಾರ ನಾನು ಬರುವ 25ನೇ ತಾರೀಖಿನಂದು ವಿವರಣೆ ನೀಡುತ್ತೇನೆ ಅಂತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ನನಗೆ ಪ್ರತಿ ಸಾರಿ ಬೆಂಗಳೂರಿಗೆ ಹೋಗಿ ಕುಳಿತುಕೊಳ್ಳಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ನಾನು ಬಳ್ಳಾರಿ ಜಿಲ್ಲೆಗೆ ಪ್ರವೇಶ ನಿರ್ಬಂಧ ಇರುವ ನಿಟ್ಟಿನಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ.
ಬಿಜೆಪಿ ನಾಯಕರ ಭೇಟಿಯ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮೆಲ್ಲಾ ಪ್ರಶ್ನೆಗೆ 25ರಂದೇ ಉತ್ತರ ನೀಡುತ್ತೇನೆ. ಆಗಲೇ ರಾಜಕೀಯ ವಿದ್ಯಮಾನಗಳ ಬಗ್ಗೆ ಹಾಗೂ ನನ್ನ ರಾಜಕೀಯ ನಿರ್ಧಾರದ ಬಗ್ಗೆ ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.
21ಕ್ಕೆ ಮಸ್ಕಿಯಲ್ಲಿ ಬೆಂಬಲಿಗರ ಜತೆ ಜನಾರ್ದನ ರೆಡ್ಡಿ ಸಭೆ: ಇನ್ನೂ ಹುಬ್ಬಳ್ಳಿಯ ಭೇಟಿ ಕುರಿತು ಮಾತನಾಡಿದ ಅವರು, ಸಿದ್ಧಾರೂಢರ ದರ್ಶನ ಪಡೆದಿರುವುದು ನನಗೆ ನಿಜಕ್ಕೂ ಸಂತೋಷ ತಂದಿದೆ. ಅಲ್ಲದೇ ಇಲ್ಲಿಗೆ ಬಂದು ಮಂಗಳಾರತಿ ಮಾಡಿ ಸದ್ಗುರು ಸಿದ್ಧಾರೂಢರಲ್ಲಿ ನನ್ನ ಬೇಡಿಕೆಗಳನ್ನು ಬೇಡಿಕೊಂಡಿದ್ದಾಗಿ ಗಾಲಿ ರೆಡ್ಡಿ ಹೇಳಿದ್ದಾರೆ.
ಟಿಕೆಟ್ ಕೊಟ್ರೂ ಕಷ್ಟ, ಬಿಟ್ಟರೂ ಕಷ್ಟ: ಬಿಜೆಪಿಗೆ ಬಿಸಿತುಪ್ಪವಾದ ಜನಾರ್ದನ ರೆಡ್ಡಿ..!
ಇನ್ನು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಡಿ.21 ರಂದು ಮಸ್ಕಿಯಲ್ಲಿ ಬೆಂಬಲಿಗರ ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಲಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂಬ ಊಹಾಪೋಹಗಳ ನಡುವೆಯೇ ಇದೀಗ ಸಭೆ ನಡೆಸುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
\ಗಾಲಿ ಜನಾರ್ದನರೆಡ್ಡಿಗೆ 101 ಟಗರು ಕಾಣಿಕೆ ನೀಡುವುದಾಗಿ ಘೋಷಿಸಿದ ಅಭಿಮಾನಿ!
ಬಳ್ಳಾರಿಯ ಗಣಿಧಣಿ ರೆಡ್ಡಿ ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಚಾರ ಮಾಡುತ್ತಿದ್ದು, ಇದೀಗ ಮಸ್ಕಿಯಲ್ಲೂ ಸಭೆ ಆಯೋಜಿಸಿದ್ದಾರೆ. ಇದು ಅವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ. ರೆಡ್ಡಿ ಸಭೆ ಕುರಿತು ಸ್ಥಳೀಯ ಮುಖಂಡ ಮಲ್ಲಿಕಾರ್ಜುನ ನಾಗರವೆಂಚಿ ಮಾಹಿತಿ ನೀಡಿದ್ದಾರೆ. ಆದರೆ, ಹೊಸ ಪಕ್ಷಕ್ಕೆ ಸಂಬಂಧಿಸಿ ಈ ಸಭೆ ಆಯೋಜಿಸುತ್ತಿದ್ದಾರಾ ಎಂಬ ಕುರಿತು ಯಾರೂ ಮಾಹಿತಿ ಬಿಟ್ಟುಕೊಟ್ಟಿಲ್ಲ.