Asianet Suvarna News Asianet Suvarna News

Bengaluru: 2 ಸಾವಿರ ಜನರಿಗೆ ತೀರ್ಥ ಸ್ಥಳಕ್ಕೆ ಉಚಿತ ಪ್ರವಾಸ : ಕಾಂಗ್ರೆಸ್‌ ಮುಖಂಡ ರಘುವೀರ್ ಎಸ್.ಗೌಡ ಆಯೋಜನೆ

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನೇತಾಜಿ ಸುಭಾಶ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಇಂದು 2,000 ಭಕ್ತರು, 30 ಬಸ್‌ಗಳಲ್ಲಿ ಮಲೈಮಹದೇಶ್ವರ ಬೆಟ್ಟ, ನಿಮಿಷಾಂಬದೇವಿ ದೇವಸ್ಥಾನ, ಶ್ರೀರಂಗಪಟ್ಟಣ ರಂಗನಾಥ ದೇವಸ್ಥಾನ, ಮೈಸೂರು ಚಾಮುಂಡಿ ಬೆಟ್ಟ, ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನಗಳಿಗೆ ಉಚಿತ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Free tour for 2 thousand people Congress leader Raghuveer S Gowda plan sat
Author
First Published Jan 22, 2023, 9:59 PM IST

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಜ.22): ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನೇತಾಜಿ ಸುಭಾಶ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಇಂದು 2,000 ಭಕ್ತರು, 30 ಬಸ್‌ಗಳಲ್ಲಿ ಮಲೈಮಹದೇಶ್ವರ ಬೆಟ್ಟ, ನಿಮಿಷಾಂಬದೇವಿ ದೇವಸ್ಥಾನ, ಶ್ರೀರಂಗಪಟ್ಟಣ ರಂಗನಾಥ ದೇವಸ್ಥಾನ, ಮೈಸೂರು ಚಾಮುಂಡಿ ಬೆಟ್ಟ, ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನಗಳಿಗೆ ಉಚಿತ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ರಘುವೀರ್ ಎಸ್.ಗೌಡ ಅವರು, ಶ್ರೀಮತಿ ಅಪೇಕ್ಷಾ ಕಟ್ಟಿರವರು ಗೋ ಪೂಜೆ ಸಲ್ಲಿಸಿ, ಆಗಮಿಸಿದ್ದ ಭಕ್ತ ಸಮುದಾಯಕ್ಕೆ ಶುಭಾ ಹಾರೈಸಿ, ಬೀಳ್ಕೂಡುಗೆ ನೀಡಿದರು. ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಕೃಷ್ಣಮೂರ್ತಿ, ಶ್ರೀಮತಿ ಮಂಜುಳ ವಿಜಯಕುಮಾರ್ ಹಾಗೂ ವಿಜಯಕುಮಾರ್, ಕಾಂಗ್ರೆಸ್ ಪಕ್ಷದ ರಾಕೇಶ್, ಗಂಗಾಧರ್ ಪಾಲ್ಗೊಂಡಿದ್ದರು.

ಭ್ರಷ್ಟಾಚಾರ ನಿಲ್ಲಿಸಿ ಬೆಂಗಳೂರು ಉಳಿಸಿ ಹೆಸರಿನಲ್ಲಿ ಬೆಂಗಳೂರಿನ ಹಲವೆಡೆ ನಾಳೆ ಕಾಂಗ್ರೆಸ್‌ ಪ್ರತಿಭಟನೆ

20 ವರ್ಷಗಳಿಂದ ಜನಸೇವೆ: ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ರಘುವೀರ್ ಎಸ್.ಗೌಡರವರು ಮಾತನಾಡಿ ಬಡವರ, ಹಿರಿಯ ನಾಗರಿಕರ ಸೇವೆ ಮಾಡುವುದು ಏಳು ಜನ್ಮದ ಪುಣ್ಯದ ಫಲ. ತಂದೆ, ತಾಯಿ ಮತ್ತು ಗುರು ಹಿರಿಯರ ಆಶೀರ್ವಾದದ ಫಲದಿಂದ ಕಳೆದ 20 ವರ್ಷಗಳಿಂದ ಜನಸೇವೆಯನ್ನ ನಿರಂತರ ಮಾಡಿಕೊಂಡು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಮನೆಯ ಮಗನಾಗಿ ಅವರ ನೋವು, ನಲಿವುಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದೇನೆ. ಈಗಾಗಲೇ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೀರೆ ವಿತರಣೆ ಮತ್ತು ದಿನಸಿ ಕಿಟ್ ವಿತರಣೆ ಮತ್ತು ನೂರಾರು ಆಟೋ ಚಾಲಕರಿಗೆ ಉಚಿತವಾಗಿ ಆಟೋ ಟೈಯರ್ ಗಳು, ಇನ್ಯೂರೆನ್ಸ್ ಬಾಂಡ್ ಗಳನ್ನು ವಿತರಿಸಲಾಗಿದೆ ಎಂದರು.

ಬಡಾವಣೆ ದೇವರುಗಳು ಹೆಸರುಗಳು: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆನಾರೋಗ್ಯ ಪೀಡಿತರಿಗೆ ವೈದ್ಯಕೀಯ ವೆಚ್ಚದ ಸಹಾಯಹಸ್ತ ನೀಡಲಾಗಿದೆ. ಸಮಾಜ ನಮಗೆ ಏನು ಕೊಟ್ಟಿದೇ ಏನ್ನುದಕ್ಕಿಂತ, ಸಮಾಜಕ್ಕೆ ನಾವು ಏನು ಕೊಡುಗೆ ನೀಡಿದ್ದೇವೆ ಏನ್ನುವುದು ಮುಖ್ಯ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಬಡಾವಣೆ ದೇವರುಗಳು ಹೆಸರುಗಳು ಇಡಲಾಗಿದೆ. ಇಲ್ಲಿ ಅತಿ ಹೆಚ್ಚು ದೇವಾಲಯಗಳು ಇಲ್ಲಿದೆ. ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರು ದೇವಾಲಯಕ್ಕೆ ತೆರಳಬೇಕು ಮತ್ತು ದೇವರ ದರ್ಶನ ಪಡೆಯಬೇಕು ಆಭಿಲಾಶೆ ಹೊಂದಿರುತ್ತಾರೆ. ಅದರೆ ಆರ್ಥಿಕ ಆನಾನುಕೂಲತೆಯಿಂದ ಹೋಗಲು ಸಾಧ್ಯವಾಗಿರುವುದಿಲ್ಲ ಎಂದರು.

Bengaluru: ಆರು ವಾರದ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಅರೆಸ್ಟ್!

8 ಸಾವಿರ ಭಕ್ತರ ತೀರ್ಥಯಾತ್ರೆ ಪೂರ್ಣ: ದೈವ ಭಕ್ತರಾದ ಇರುವರಿಗೆ ರಾಜ್ಯದ ತೀರ್ಥಸ್ಥಳ ಉಚಿತವಾಗಿ ಕಳುಹಿಸಬೇಕು ಎಂದು ನಿರ್ಧಾರಿಸಿ ರಾಜಾಜಿನಗರ ಏಳು ವಾರ್ಡ್ ನಲ್ಲಿರುವ ನಿವಾಸಿಗಳಿಗೆ ಸುವರ್ಣ ಅವಕಾಶ ಮಾಡಿಕೊಡಲಾಗಿದೆ. ಇಂದು 2 ಸಾವಿರ ಭಕ್ತರು ತೀರ್ಥ ಸ್ಥಳಗಳಿಗೆ ತೆರಳಲಿದ್ದಾರೆ. ಈ ಹಿಂದೆ ಮೂರು ಬಾರಿ ಅಂದಾಜು 8 ಸಾವಿರ ಭಕ್ತರನ್ನು ತೀರ್ಥಸ್ಥಳ ಪ್ರವಾಸ ಕಳುಹಿಸಿಕೊಡಲಾಗಿತ್ತು. ದೇವರ ದರ್ಶನ ಮಾಡಬೇಕು ಎಂಬ ಅವರ ಆಶಯವನ್ನು ಈಡೇರಿಸಿದ ಪುಣ್ಯದ ಕೆಲಸ ಮಾಡಿದ ಆತ್ಮತೃಪ್ತಿ, ಸಂತೋಷವಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios