Bengaluru: ಆರು ವಾರದ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಅರೆಸ್ಟ್!

ಅಕ್ರಮ ಸಂಬಂಧ ಇತ್ತು ಎನ್ನುವ ಕಾರಣಕ್ಕೆ ಆರು ವಾರದ ಗರ್ಭಿಣಿ ಪತ್ನಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಪಾಪಿ ಪತಿ ನಾಸಿರ್ ಹುಸೇನ್‌ನನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

Husband Arrested for Murdering Six Week Pregnant Wife at Bengaluru gvd

ಬೆಂಗಳೂರು (ಜ.22): ಅಕ್ರಮ ಸಂಬಂಧ ಇತ್ತು ಎನ್ನುವ ಕಾರಣಕ್ಕೆ ಆರು ವಾರದ ಗರ್ಭಿಣಿ ಪತ್ನಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಪಾಪಿ ಪತಿ ನಾಸಿರ್ ಹುಸೇನ್‌ನನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ಕೊಲೆ ಮಾಡಿ ದೆಹಲಿಗೆ ಎಸ್ಕೇಪ್ ಅಗಿದ್ದ ಆರೋಪಿಯು ಕೊಲೆ ಮಾಡುವುದಕ್ಕೂ ಮೊದಲೇ ಪ್ಲಾನ್ ಮಾಡಿ ದೆಹಲಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದ. 

ಬಳಿಕ ಕ್ಯಾಬ್ ಮೂಲಕ ಏರ್ಪೋರ್ಟ್ ತೆರಳಿದ್ದ. ದೆಹಲಿ ಏರ್ಪೋರ್ಟ್‌ನಿಂದ ಹೊರಗೆ ಹೋಗಿ ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಆರೋಪಿಯು ಹೋಗಿದ್ದಾನೆ. ಸದ್ಯ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಅಕ್ರಮ ಸಂಬಂಧ ಶಂಕಿಸಿ ಪತ್ನಿ ನಾಝ್​​ಳನ್ನು ಆರೋಪಿಯು ಕೊಂದಿದ್ದ.

ಬಾರ್‌ನಲ್ಲಿ ಗ್ರಾಹಕರಿಗೆ ಜಾಗ ಬಿಟ್ಟಿಲ್ಲ ಎಂದು ಕಿರಿಕ್: ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಬಾರ್ ಸಿಬ್ಬಂದಿಗಳು

ಹೆಂಡತಿಯ ಕೊಲೆ ಮಾಡಲು ಮಾಸ್ಟರ್ ಪ್ಲಾನ್: ಆರೋಪಿ ನಾಸಿರ್ ಹುಸೇನ್‌ ಮಾಸ್ಟರ್ ಪ್ಲಾನ್ ಮಾಡಿದ್ದು, ಸಾಫ್ಟ್‌ವೇರ್  ಹುಡುಗ ಎಂದು ಲವ್ ಮಾಡಿ ಮದುವೆ ಮಾಡಿಕೊಂಡಿದ್ದ. ಆರೋಪಿ ನಾಸಿರ್ ಮೂಲತಃ ಪಶ್ಚಿಮ ಬಂಗಾಳ ಮೂಲದ ಎನ್ನುವ ಮಾಹಿತಿ ಲಭ್ಯವಾಗಿದ್ದು, ಕೊಲೆ ಮಾಡುವ ಮೊದಲೆ ದೆಹಲಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದ. ಅಲ್ಲದೇ ಟ್ಯಾಕ್ಸಿ ಚಾಲಕನಿಗೆ 4000 ಹಣ ಫೋನ್ ಪೇ ಮಾಡಿ, ಬಳಿಕ ಮೂರು ಸಾವಿರದ ಐದುನೂರು ಹಣವನ್ನು ವಾಪಸ್ಸು ಪಡೆದುಕೊಂಡಿದ್ದ. 

ಕ್ಯಾಶ್ ಪಡೆದುಕೊಂಡು ಏರ್ಪೋರ್ಟ್‌ಗೆ ಡ್ರಾಪ್ ಪಡೆದಿದ್ದ ನಾಸಿರ್, ಅನಂತರ ದೆಹಲಿ ಫ್ಲೈಟ್ ಹತ್ತಿದ್ದ. ಇನ್ನೇನು ಫ್ಲೈಟ್ ಟೇಕ್ ಆಫ್ ಅಗುವ ಕೊನೆ ಕ್ಷಣದಲ್ಲಿ ಕೊಲೆ ಮಾಡಿರೊದಾಗಿ ಪತ್ನಿ ನಾಝ್ ಸಹೋದರನಿಗೆ  ಮೆಸೇಜ್ ಮಾಡಿದ್ದಾನೆ. ನಿನ್ನ ತಂಗಿ ಅಕ್ರಮ ಸಂಬಂಧಕ್ಕೆ ಕೋಪಗೊಂಡು ಕೊಲೆ ಮಾಡಿದ್ದೇನೆ. ಮನೆಗೆ ಹೋಗಿ ಬಾಡಿ ತೆಗೆದುಕೊಳ್ಳಿ ಎಂದು ಮೆಸೇಜ್ ಮಾಡಿದ್ದು, ಬಳಿಕ ಮೊಬೈಲ್ ಆಫ್ ಮಾಡಿ ಎಸ್ಕೇಪ್ ಆಗಿದ್ದ. ಸದ್ಯ ಮಗಳನ್ನು ಮದುವೆ ಮಾಡಿಕೊಟ್ಟ ಮನೆಯವರಿಗೆ ನಾಸಿರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಇನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ದೆಹಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

Ballari Festival: ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು

ಮೃತಳ ಭಾವನಿಗೂ ಕೊಲ್ಲುವ ಸಂದೇಶ: ತನ್ನ ಪತ್ನಿಯು ಆಕೆಯ ಅಕ್ಕನ ಗಂಡ ಇಲಿಯಾಸ್‌ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿ ಶಂಕಿಸಿದ್ದ. ಈ ಅನುಮಾನದಿಂದ ಪತ್ನಿ ಕೊಂದ ಬಳಿಕ ಆತ, ಇಲಿಯಾಸ್‌ಗೆ ‘ನಿನ್ನನ್ನು ಕೊಲ್ಲುತ್ತೇನೆ’ ಎಂದು ಸಂದೇಶ ಕಳುಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios