ಮಂಗಳೂರು(ಜೂ.27): ಸುರತ್ಕಲ್‌ನ ಮಾಜಿ ಶಾಸಕ ಮೊಯ್ದೀನ್‌ ಬಾವಾ ಪುತ್ರನಿಗೆ ಕೊರೋನಾ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಅವರ ಸುರತ್ಕಲ್‌ನ ಚೊಕ್ಕಬೆಟ್ಟು ಮನೆಯನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

ಆಹಾರ ಕಿಟ್‌ನಲ್ಲಿ ದೊಡ್ಡ ಫೋಟೋ, ಮಾಜಿ ಕೈ ಶಾಸಕನ ವಿರುದ್ಧ ಟೀಕೆ..!

ಮಾಜಿ ಶಾಸಕರ ಪುತ್ರ ಬೆಂಗಳೂರಿನಲ್ಲಿದ್ದು ಮನೆಗೆ ಭೇಟಿ ನೀಡಿರಲಿಲ್ಲ, ಆದರೆ ಆತನ ಆಧಾರ್‌ ಕಾರ್ಡ್‌ನಲ್ಲಿರುವ ವಿಳಾಸ ಆಧರಿಸಿ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮನೆಯ ಇತರ ಸದಸ್ಯರ ಕೊರೋನಾ ಫಲಿತಾಂಶ ನೆಗೆಟಿವ್‌ ಬಂದಿದ್ದು ಮನೆಯನ್ನು ಸಾರ್ವಜನಿಕರ ಭೇಟಿಗೆ ಬಂದ್‌ ಮಾಡಲಾಗಿದೆ. ಮನೆ ಹಾಗೂ ಅಂಗಡಿಗೆ ಬ್ಯಾರಿಕೇಡ್‌ ಹಾಕಿ ಸೀಲ್‌ಡೌನ್‌ ಮಾಡಲಾಗಿದೆ.

ಕಾಂಗ್ರೆಸ್ ಮಾಜಿ ಶಾಸಕರಿಗೆ ಸೆಲ್ಫೀ ತಂದಿತ್ತ ಸಂಕಟ; FB Live ಮೊರೆ ಹೋದ ಬಾವ!

ಮೊಯ್ದೀನ್‌ ಬಾವಾ ಮತ್ತು ಅವರ ಪತ್ನಿಯ ಪರೀಕ್ಷಾ ವರದಿ ನೆಗೆಟಿವ್‌ ಬಂದಿವೆ. ಆದರೆ ಪುತ್ರನಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಲ್ಯಾಬ್‌ನಲ್ಲಿ ಟೆಸ್ಟ್‌ ವೇಳೆ ಪುತ್ರನಿಗೆ ಕೊರೋನಾ ಇರುವುದು ಪತ್ತೆಯಾಗಿತ್ತು. ಆತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬಾವಾ ಅವರ ಮನೆಯನ್ನು ಸೀಲ್‌ಡೌನ್‌ ಮಾಡಿದೆ.