Asianet Suvarna News Asianet Suvarna News

ಆಹಾರ ಕಿಟ್‌ನಲ್ಲಿ ದೊಡ್ಡ ಫೋಟೋ, ಮಾಜಿ ಕೈ ಶಾಸಕನ ವಿರುದ್ಧ ಟೀಕೆ..!

ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಹಾರ ಕಿಟ್‌ನಲ್ಲಿ ಫೋಟೊ ಹಾಕುವ ಬಗ್ಗೆ ಬಿಜೆಪಿಗೆ ಟೀಕೆ ಮಾಡಿದ್ದರು. ಇದೀಗ ಕಾಂಗ್ರೆಸ್ ಮಾಜಿ ಶಾಸಕರೇ ಆಹಾರ ಕಿಟ್‌ನಲ್ಲಿ ದೊಡ್ಡದಾಗಿ ಫೋಟೋ ಹಾಕಿಸಿಕೊಂಡಿದ್ದಲ್ಲದೆ, ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾಮೂಹಿಕವಾಗಿ ಜೈಕಾರವನ್ನೂ ಹಾಕಲಾಗಿದೆ.

People slams congress former Mohiuddin Bava For using photo in food kit
Author
Bangalore, First Published Apr 12, 2020, 8:40 AM IST

ಮಂಗಳೂರು(ಏ.12): ಆಹಾರ ಕಿಟ್‌ ವಿತರಿಸಲು ಆಗಮಿಸಿದ ವೇಳೆ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್‌ ಬಾವಾ ಅವರಿಗೆ ಜನತೆ ಸಾಮೂಹಿಕವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜೈಕಾರ ಹಾಕುತ್ತಿರುವ ವೀಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

People slams congress former Mohiuddin Bava For using photo in food kit

ಮಾಜಿ ಶಾಸಕ ಮೊಯ್ದಿನ್‌ ಬಾವಾ ಸ್ವಂತ ಹಣದಿಂದ ಕ್ಷೇತ್ರದ ಆಯ್ದ ಬಡತನದಲ್ಲಿ ಇರುವವರಿಗೆ ಆಹಾರ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ಹಂಚಿಕೆಗೆ ತೆರಳುತ್ತಿದ್ದ ವೇಳೆ ಒಂದು ಕಡೆಯಲ್ಲಿ ರಾತ್ರಿ ಸೇರಿದ ಜನತೆ ಸಾಮೂಹಿಕವಾಗಿ ಮೊಯ್ದಿನ್‌ ಬಾವಾಗೆ ಜೈಕಾರ ಹಾಕಿದೆ.

ಯೋಧ ಪುತ್ರನ ಅಂತಿಮ ದರ್ಶನಕ್ಕೆ 2600 ಕಿ.ಮೀ. ದೂರದಿಂದ ಬೆಂಗಳೂರಿಗೆ ವೃದ್ಧ ದಂಪತಿ!

ಅದರಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಜೈಕಾರ ಹಾಕುತ್ತಿರುವ ವೀಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಯಾವ ಪ್ರದೇಶ ಎಂಬುದು ಸ್ಪಷ್ಟವಾಗಿಲ್ಲ. ಈ ವೀಡಿಯೋ ಬಗ್ಗೆ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಕಿಟ್‌ನಲ್ಲಿ ಬಾವಾ ಭಾವಚಿತ್ರ: ಜನತೆಗೆ ಹಂಚುವ ಆಹಾರ ಕಿಟ್‌ನಲ್ಲಿ ತನ್ನ ಭಾವಚಿತ್ರ ಹಾಕಿರುವ ಮಾಜಿ ಶಾಸಕ ಮೊಯ್ದಿನ್‌ ಬಾವಾ ಅವರ ನಡೆಗೆ ಕೂಡ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ನೀಡುವ ಆಹಾರ ಕಿಟ್‌ನಲ್ಲಿ ಭಾವಚಿತ್ರ ಹಾಕುತ್ತಿರುವ ಬಗ್ಗೆ ಈಗಾಗಲೇ ಕೆಪಿಸಿಸಿಐ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿ ವಿರುದ್ಧ ಆರೋಪಿಸಿದ್ದರು.

ದುಬೈನಿಂದ ಬಂದಿದ್ದ ಉಡುಪಿಯ ಮೊದಲ ಕೊರೋನ ಸೋಂಕಿತ ಗುಣಮುಖ

ಈಗ ಅವರದೇ ಪಕ್ಷದ ಮಾಜಿ ಶಾಸಕರೊಬ್ಬರು ಕಿಟ್‌ನಲ್ಲಿ ಭಾವಚಿತ್ರ ಅಂಟಿಸಿ ಹಂಚುತ್ತಿರುವುದು ಟೀಕೆಗೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೊಯ್ದಿನ್‌ ಬಾವಾ, ಕಿಟ್‌ನಲ್ಲಿ ನನ್ನ ಫೋಟೋ ಮಾತ್ರವಲ್ಲ ಅದರಲ್ಲಿ ಲಾಕ್‌ಡೌನ್‌ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೋನಾದಿಂದ ದೂರ ಇರುವಂತೆ ತಿಳಿವಳಿಕೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

Follow Us:
Download App:
  • android
  • ios