ಹದ್ದುಮೀರಬೇಡಿ ರೇವಣ್ಣ: ಶಿವಲಿಂಗೇಗೌಡ ಎಚ್ಚರಿಕೆ
ನನ್ನ ಕುರಿತು ಒಬ್ಬ ಕಳ್ಳನನ್ನು ಬೆಳೆಸಿದ್ದಾಗಿ ರೇವಣ್ಣ ಹೇಳಿದ್ದಾರೆ. ಈ ಕ್ಷೇತ್ರದ ಜನರಿಗೆ ನಾನು ಯಾರಿಂದ ಬೆಳೆದೆ, ಯಾರು ನನ್ನನ್ನು ಬೆಳೆಸಿದ್ದಾರೆ ಎಂಬುದು ಗೊತ್ತು. ಅವರು ನನ್ನನ್ನು ಎಷ್ಟುಬೆಳೆಸಿದರು, ನಾನೆಷ್ಟು ಕಷ್ಟಪಟ್ಟು ಬೆಳೆದೆ ಎಂಬುದು ಕೂಡ ತಿಳಿದ ಸಂಗತಿ ಎಂದ ಕೆ.ಎಂ.ಶಿವಲಿಂಗೇಗೌಡ.
ಅರಸೀಕೆರೆ(ಏ.23): ‘ರೇವಣ್ಣ ಅವರೇ ನಾನು ನಿಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡಬಹುದು, ಆದರೆ, ಹಾಗೆ ಮಾಡುವುದಿಲ್ಲ. ನೀವು ನನ್ನ ವಿರುದ್ಧ ಅಗೌರವಯುತವಾಗಿ, ಹದ್ದು ಮೀರಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಕುರಿತು ಒಬ್ಬ ಕಳ್ಳನನ್ನು ಬೆಳೆಸಿದ್ದಾಗಿ ರೇವಣ್ಣ ಹೇಳಿದ್ದಾರೆ. ಈ ಕ್ಷೇತ್ರದ ಜನರಿಗೆ ನಾನು ಯಾರಿಂದ ಬೆಳೆದೆ, ಯಾರು ನನ್ನನ್ನು ಬೆಳೆಸಿದ್ದಾರೆ ಎಂಬುದು ಗೊತ್ತು. ಅವರು ನನ್ನನ್ನು ಎಷ್ಟುಬೆಳೆಸಿದರು, ನಾನೆಷ್ಟು ಕಷ್ಟಪಟ್ಟು ಬೆಳೆದೆ ಎಂಬುದು ಕೂಡ ತಿಳಿದ ಸಂಗತಿ ಎಂದರು.
ಜೆಡಿಎಸ್‌ನ ಭದ್ರಕೋಟೆ ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡ ಶಾಸಕರಾದದ್ದು ಸಣ್ಣ ಸಾಧನೆಯಲ್ಲ!
ಅರಸೀಕೆರೆಯಲ್ಲಿ ನಾನು ಅಭ್ಯರ್ಥಿಯಾಗುವ ಮೊದಲು ಜೆಡಿಎಸ್ ಅಭ್ಯರ್ಥಿ 13,000 ನಂತರ 21,000 ಮತಗಳನ್ನು ಪಡೆದುಕೊಂಡಿದ್ದರು. ನಾನು ಮೊದಲ ಚುನಾವಣೆಯಲ್ಲಿಯೇ 75,000 ಮತಗಳನ್ನು ಪಡೆದುಕೊಂಡೆ. ಅದರಲ್ಲಿ ಯಾರ ಪ್ರಯತ್ನ ಇದೆ ಎಂಬುದು ಜನರಿಗೆ ಗೊತ್ತು. ನಾನೇನು ಮಾಜಿ ಪ್ರಧಾನಿಯ ಮಗ ಅಲ್ಲ ಅಥವಾ ರಾಜಕೀಯ ಕುಟುಂಬದ ಹಿನ್ನೆಲೆಯೂ ನನಗಿಲ್ಲ ಎಂದು ಟಾಂಗ್ ನೀಡಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.