Asianet Suvarna News Asianet Suvarna News

ಸಿದ್ದು ಪತ್ನಿ ಸರಳ ವ್ಯಕ್ತಿತ್ವದವರು, ಅವರ ಹೆಸರಿಗೆ ಬಿಜೆಪಿ ಮಸಿ: ದೇಶಪಾಂಡೆ ಕಿಡಿ

ನಾನು, ಸಿದ್ದರಾಮಯ್ಯ ಬಹಳ ವರ್ಷದ ಸ್ನೇಹಿತರು. ಅವರ ಮನೆಗೆ ತಿಂಡಿಗೆ ಹೋದಾಗಲೂ ಅವರ ಪತ್ನಿ ಮುಂದೆ ಬರುತ್ತಿರಲಿಲ್ಲ. ಅಂತವರ ಹೆಸರನ್ನು ಬಿಜೆಪಿಯವರು ಎಳೆದು ತಂದು ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ. ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ಮಾಡಿದ ನಾಯಕ ಸಿದ್ಧರಾಮಯ್ಯ. ಅವರ ಹೆಸರನ್ನು ಕೆಡಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ 

former minister rv deshpande slams karnataka bjp leaders grg
Author
First Published Aug 20, 2024, 12:45 PM IST | Last Updated Aug 20, 2024, 12:45 PM IST

ಕಾರವಾರ(ಆ.20): ಸಿದ್ದರಾಮಯ್ಯನವರ ಪತ್ನಿ ಸರಳ ವ್ಯಕ್ತಿತ್ವದವರು. ಬಹಳ ಒಳ್ಳೆಯ ಹೆಣ್ಣು ಮಗಳು. ಅಂತವರ ಹೆಸರನ್ನು ಬಿಜೆಪಿಯವರು ಎಳೆದು ತಂದು ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ ಎಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಕಿಡಿ ಕಾರಿದ್ದಾರೆ. 

ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ನಾನು, ಸಿದ್ದರಾಮಯ್ಯ ಬಹಳ ವರ್ಷದ ಸ್ನೇಹಿತರು. ಅವರ ಮನೆಗೆ ತಿಂಡಿಗೆ ಹೋದಾಗಲೂ ಅವರ ಪತ್ನಿ ಮುಂದೆ ಬರುತ್ತಿರಲಿಲ್ಲ. ಅಂತವರ ಹೆಸರನ್ನು ಬಿಜೆಪಿಯವರು ಎಳೆದು ತಂದು ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ. ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ಮಾಡಿದ ನಾಯಕ ಸಿದ್ಧರಾಮಯ್ಯ. ಅವರ ಹೆಸರನ್ನು ಕೆಡಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. 

ಸಿದ್ದರಾಮಯ್ಯ ಮನೆಗೆ ತೊಲಗಲಿ, ಅವರು ಸಮಾಜವಾದಿ ಅಲ್ಲ ಮಜಾವಾದಿ: ವಿಜಯೇಂದ್ರ ಆಕ್ರೋಶ

ಯಾವ ಕಾರಣಕ್ಕೂ ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

Latest Videos
Follow Us:
Download App:
  • android
  • ios