Asianet Suvarna News Asianet Suvarna News

ಪ್ರಧಾನಿ ಮೋದಿ ಸಾಧನೆ, ಅಭಿವೃದ್ಧಿ ಕಾರ್ಯ ಜನರಿಗೆ ತಿಳಿಸಿ: ಕೆ.ಎಸ್‌.ಈಶ್ವರಪ್ಪ

ಪ್ರಪಂಚವೇ ಮೋದಿಯವರ ಬೆನ್ನಿಗಿರುವ ಹಿನ್ನೆಲೆ ನಾವೂ ಬಿಜೆಪಿ ಬೆಂಬಲಿಸಿ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲು ಕಾರ್ಯಕರ್ತರು ಕ್ಷೇತ್ರದ ಮನೆ ಮನೆಗೂ ತೆರಳಿ ನರೇಂದ್ರ ಮೋದಿಯವರ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ತಿಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. 

Former Minister KS Eshwarappa Talks Over PM Narendra Modi At Mysuru gvd
Author
First Published Mar 5, 2023, 1:00 AM IST | Last Updated Mar 5, 2023, 1:00 AM IST

ಸರಗೂರು (ಮಾ.05): ಪ್ರಪಂಚವೇ ಮೋದಿಯವರ ಬೆನ್ನಿಗಿರುವ ಹಿನ್ನೆಲೆ ನಾವೂ ಬಿಜೆಪಿ ಬೆಂಬಲಿಸಿ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲು ಕಾರ್ಯಕರ್ತರು ಕ್ಷೇತ್ರದ ಮನೆ ಮನೆಗೂ ತೆರಳಿ ನರೇಂದ್ರ ಮೋದಿಯವರ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ತಿಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪಯಾತ್ರೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಮೊಟ್ಟಮೊದಲ ಬಾರಿ ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಮುಂದಿನ ಒಂದುವರೆ ತಿಂಗಳು ಶ್ರಮಿಸಬೇಕು ಎಂದು ಕರೆ ನೀಡಿದರು.

ಮೋದಿಯಂತಹ ಮಹಾನ್‌ ನಾಯಕನನ್ನು ವಿರೋಧಿಸುವವರು ಇಬ್ಬರೇ, ಒಂದು ಪಾಕಿಸ್ತಾನ, ಮತ್ತೊಬ್ಬರು ಸಿದ್ದರಾಮಯ್ಯ. ಆದ್ದರಿಂದ ನಾವೆಲ್ಲ ಸೇರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಬೇಕು. ಜೊತೆಗೆ ಕಾಶಿ ವಿಶ್ವನಾಥ ಮತ್ತು ಮಥುರ ದೇವಾಲಯಗಳಲ್ಲಿ ಅರ್ಧ ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ತೆರವು ಮಾಡಿ ಅಲ್ಲಿ ಮಂದಿರಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಕರಾವಳಿಯಲ್ಲಿ ಸುಗ್ಗಿ ಕುಣಿತದೊಂದಿಗೆ ನಡೆಯುತ್ತೆ ವಿಭಿನ್ನ ರಂಗು ರಂಗಿನ ಹೋಳಿ

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕೇಂದ್ರಮತ್ತುರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಿ ಜನರಿಗೆಉತ್ತಮ ಆಡಳಿತ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಹಿಂದುಳಿದ ತಾಲೂಕು ಎಚ್‌.ಡಿ. ಕೋಟೆಯಿಂದಲೂ ಬಿಜೆಪಿ ಅಭ್ಯರ್ಥಿಯನ್ನೆ ಆಯ್ಕೆ ಮಾಡಿ ಗೆಲ್ಲಿಸಲು ನಾವು ನೀವೆಲ್ಲ ಶ್ರಮಿಸಬೇಕು ಎಂದರು. ಇದಕ್ಕೂ ಮುನ್ನ ಪಟ್ಟಣದ ಪಡುವಲು ಬಿಡಗಲು ವಿರಕ್ತ ಮಠಕ್ಕೆ ಭೇಟಿ ನೀಡಿ ಮಹದೇವ ಸ್ವಾಮೀಜಿಗಳ ಆಶೀರ್ವಾದ ಪಡೆದು, ನಂತರ ಸಂತೆ ಮಾಸ್ತಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಎಚ್‌.ಡಿ. ಕೋಟೆ ಹಾಗೂ ಸರಗೂರು ತಾಲೂಕಿನಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಬಿಜೆಪಿ ವಿಜಯ ಸಂಕಲ್ಪಯಾತ್ರೆಯನ್ನು ಯಶಸ್ವಿಗೊಳಿಸಿದರು.

ಯಡಿಯೂರಪ್ಪ ಸವಾಲು ಹಾಕಿದರೆ ಏನಾಗುತ್ತೆ ಎಂದು ನಮಗಿಂತ ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು: ಬಿ.ವೈ.ವಿಜಯೇಂದ್ರ

ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ, ರಾಜ್ಯಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ಸಫಾಯಿ ಕರ್ಮಚಾರಿ ಆಯೋಗಗಳ ಅಧ್ಯಕ್ಷ ಎಂ. ಶಿವಣ್ಣ, ತಾಲೂಕು ಅಧ್ಯಕ್ಷ ಗುರುಸ್ವಾಮಿ, ಟಿಕೆಟ್‌ ಆಕಾಂಕ್ಷಿಗಳಾದ ಎಂ. ಅಪ್ಪಣ್ಣ, ಡಾ.ಎಚ್‌.ವಿ. ಕೃಷ್ಣಸ್ವಾಮಿ, ಮುಖಂಡರಾದ ವೆಂಕಟಸ್ವಾಮಿ, ಲಕ್ಷ್ಮಣ್‌, ನಂದೀಶ್‌, ನಾಗರಾಜರಾಮ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್‌, ಉಪಾಧ್ಯಕ್ಷ ವಿನಾಯಕ ಪ್ರಸಾದ್‌, ಸ್ಥಾಯಿಸಮಿತಿ ಅಧ್ಯಕ್ಷೆ ಉಮಾರಾಮು, ಸದಸ್ಯರಾದ ದಿವ್ಯಾ ನವೀನ್‌, ವೀರೇಶ್‌, ನೂರಾಳಸ್ವಾಮಿ ಇದ್ದರು.

Latest Videos
Follow Us:
Download App:
  • android
  • ios