ಸಿದ್ದರಾಮಯ್ಯ ಎಂಬ ಕೆಟ್ಟಪದ ಕೇಳಿ ಸಾಕಾಗಿ ಹೋಗಿದೆ: ಈಶ್ವರಪ್ಪ

ಸಿದ್ದರಾಮಯ್ಯರಂಥ ರಾಷ್ಟ್ರದ್ರೋಹಿಯನ್ನು ಕಂಡಿಲ್ಲ: ಪ್ರತಿಪಕ್ಷ ನಾಯಕನ ವಿರುದ್ಧ ಈಶ್ವರಪ್ಪ ಏವಕವಚನದಲ್ಲೇ ವಾಗ್ದಾಳಿ

Former Minister KS Eshwarappa Slams to Siddaramaiah grg

ಶಿವಮೊಗ್ಗ(ಆ.18):   ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವುದು ಒಂದು ಕೆಟ್ಟ ಹೆಸರು. ಇಂಥ ರಾಷ್ಟ್ರದ್ರೋಹಿಯನ್ನು ನನ್ನ ಜೀವನದಲ್ಲಿ ಕಂಡಿರಲಿಲ್ಲ ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದರು. ‘ಸಿದ್ದರಾಮಯ್ಯ’ ಎನ್ನುವ ಕೆಟ್ಟ ಪದ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿದೆ. ಅವರ ಹೆಸರು ಹೇಳಿದರೆ ನನ್ನ ಬಾಯಲ್ಲಿ ಹುಳ ಬೀಳುತ್ತದೆ ಅನಿಸುತ್ತದೆ. ಅವರ ಬಗ್ಗೆ ಈ ಹಿಂದೆ ಅಲ್ಪಸ್ವಲ್ಪ ಗೌರವ ಇತ್ತು. ಮುಸಲ್ಮಾನರ ಏರಿಯಾದಲ್ಲೇಕೆ ವೀರ ಸಾವರ್ಕರ್‌ ಭಾವಚಿತ್ರ ಹಾಕಬೇಕಿತ್ತು ಎಂದು ಯಾವಾಗ ಹೇಳಿಕೆ ನೀಡಿದರೋ ನಿಜಕ್ಕೂ ಅವರ ಮೇಲೆ ಬೇಸರವಾಗಿದೆ ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ಕಡೆಗೂ ಸ್ವಾತಂತ್ರ್ಯವೀರರ ಭಾವಚಿತ್ರ ಹಾಕುತ್ತೇವೆ. ಇದು ನಮ್ಮ ದೇಶದ ಜಾಗ. ಮುಸಲ್ಮಾನರ ಜಾಗ ಎಂದು ಪ್ರತ್ಯೇಕವಾಗಿ ಎಲ್ಲೂ ಇಲ್ಲ. ಮುಸ್ಲಿಮರ ಓಟ್‌ಗಾಗಿ ಕೆಳಮಟ್ಟಕ್ಕೆ ಇಳಿಯುತ್ತಾರೆಂದು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ. ಇಂಥ ಮುಖ್ಯಮಂತ್ರಿ ಅವರನ್ನು ಕಂಡಿರುವುದು ನಮ್ಮ ದೇಶ ಹಾಗೂ ರಾಜ್ಯದ ದುರ್ದೈವವೇ ಸರಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಏನೋ ಉತ್ತರ ಕೊಡಬೇಕೋ ಅದನ್ನು ರಾಜ್ಯದ ಜನ ಕೊಡುತ್ತಾರೆ ಎಂದರು.

Shivamogga Assault Case: ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್‌ ಬೆಂಬಲ, ಎಚ್ಚರಿಕೆ ನೀಡಿದ ಈಶ್ವರಪ್ಪ

ಗುಂಡೇಟು ಸ್ಯಾಂಪಲ್‌ ಅಷ್ಟೆ, ಪಿಕ್ಚರ್‌ ಅಭೀ ಬಾಕೀ ಹೈ: ಈಶ್ವರಪ್ಪ

ಶಿವಮೊಗ್ಗದಲ್ಲಿ ಚಾಕು, ಚೂರಿ ಹಾಕುವವರಿಗೆ ಗುಂಡೇಟು ಹೊಡೆದು ಕೂರಿಸಲಾಗಿದೆ. ಇದು ಕೇವಲ ಸ್ಯಾಂಪಲ್‌ ಅಷ್ಟೇ. ‘ಪಿಕ್ಚರ್‌ ಅಭೀ ಬಾಕಿ ಹೈ’ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಶಿವಮೊಗ್ಗದಲ್ಲಿ ಚಾಕು ಇರಿತದಂಥ ಘಟನೆಗಳು ಮುಸಲ್ಮಾನ್‌ ಗೂಂಡಾಗಳಿಂದ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸವಾಗಬೇಕು. ಸರ್ಕಾರದ ಗಮನಕ್ಕೂ ಇದನ್ನು ತರಲಾಗಿದೆ. ಮುಸಲ್ಮಾನ್‌ ಗೂಂಡಾಗಳ ಈ ದುಷ್ಕೃತ್ಯವನ್ನು ನಾನು ಖಂಡಿಸುತ್ತೇನೆ. ದುಷ್ಕರ್ಮಿಗಳನ್ನು ಮಟ್ಟಹಾಕಲು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಚಾಕು ಇರಿತದಿಂದ ಗಾಯಗೊಂಡಿರುವ ಪ್ರೇಮ್‌ ಸಿಂಗ್‌ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಅದೃಷ್ಟವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗುತ್ತಿದ್ದಾರೆ. ಈ ರೀತಿ ನೀಚ ಕೃತ್ಯ ಎಸಗುವವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗಣಪತಿ ಹಬ್ಬ ಹತ್ತಿರದಲ್ಲಿದೆ. ನಾವು ಯಾರ ಹಬ್ಬಕ್ಕೂ ತೊಂದರೆ ಕೊಡಲು ಹೋಗುವುದಿಲ್ಲ. ಅವರ ಪಾಡಿಗೆ ಅವರು ಹಬ್ಬ ಮಾಡಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಪಾಡಿಗೆ ನಮ್ಮ ಹಬ್ಬವನ್ನು ಮಾಡಿಕೊಳ್ಳಲು ಬಿಡಬೇಕು. ಇದಕ್ಕೆ ಅಡ್ಡಿಪಡಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
 

Latest Videos
Follow Us:
Download App:
  • android
  • ios