ಭಾರತ ಒಡೆದಿದ್ದೇ ಕಾಂಗ್ರೆಸ್‌, ಈಗ ಒಂದಾಗುವ ಮಾತಾಡ್ತಿದ್ದಾರೆ: ಈಶ್ವರಪ್ಪ

ಸಿದ್ದರಾಮಯ್ಯಗೆ ಕಾಂಗ್ರೆಸ್‌- ಜೆಡಿಎಸ್‌ ಎನ್ನುವ ವ್ಯತ್ಯಾಸ ಗೊತ್ತಿಲ್ಲ. ಸಿಎಂ ಸ್ಥಾನ ಸಿಗದಿದ್ದರೆ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಉಳಿಯುತ್ತಾರಾ ಕೇಳಿ. 75 ಕೋಟಿ ಖರ್ಚು ಮಾಡಿ ಸಿದ್ದರಾಮೋತ್ಸವ ಮಾಡಿದ್ದು ಪಕ್ಷದ ಹಿತಾಸಕ್ತಿಗಲ್ಲ, ಸಿದ್ದರಾಮಯ್ಯರ ವೈಯಕ್ತಿಕ ಲಾಭಕ್ಕಾಗಿ ಎಂದ ಈಶ್ವರಪ್ಪ

Former Minister KS Eshwarappa Slams Congress grg

ಮೈಸೂರು(ಅ.01): ಭಾರತ ಒಡೆದಿದ್ದೇ ಕಾಂಗ್ರೆಸ್‌. ಇವತ್ತು ಒಂದಾಗುವ ಮಾತಾಡ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕಿಡಿಕಾರಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್‌ ಎಲ್ಲಿದೆ? ಅಸೆಂಬ್ಲಿ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ ಅನ್ನು ಕರ್ನಾಟಕದಲ್ಲೂ ಹುಡುಕಬೇಕಾಗುತ್ತದೆ. ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆ. ಕಾಂಗ್ರೆಸ್‌ ಚೂರು ಚೂರಾಗಿದೆ. ಎಷ್ಟು ಕಾಂಗ್ರೆಸ್‌ ಬಣ ಆಗಿದೆ ಅನ್ನೋ ಲಿಸ್ಟ್‌ ಕೊಡಿ? ಭಾರತ್‌ ಜೋಡೋ ಇರಲಿ ಮೊದಲು ಕಾಂಗ್ರೆಸ್‌ ಜೋಡೋ ಮಾಡಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ಇಡೀ ಗಾಂಧಿ ವಂಶವೇ ಒಟ್ಟಾದರೂ ಆರ್‌ಎಸ್‌ಎಸ್‌ನ ಒಂದು ಕೂದಲು ಅಲ್ಲಾಡಿಸಲು ಅಗಲಿಲ್ಲ. ಈ ಸಿದ್ದರಾಮಯ್ಯ ಏನು ಮಾಡಿಕೊಳ್ಳುತ್ತಾರೆ? ಮುಸ್ಲಿಂರನ್ನು ತೃಪ್ತಿಪಡಿಸಲು ಸಿದ್ದರಾಮಯ್ಯ ಹೇಳಿಕೆ ನೀಡ್ತಿದಾರೆ. ಆರ್‌ಎಸ್‌ಎಸ್‌ ಎಂಬ ದೊಡ್ಡ ಸೂರ್ಯನಿಗೆ ಉಗುಳಿದರೆ ಆ ಉಗುಳು, ಉಗುಳಿದವರ ಮೇಲೇ ಬೀಳುತ್ತದೆ. ಆರ್‌ಎಸ್‌ಎಸ್‌ ಇರದಿದ್ದರೆ ಈ ದೇಶ ಎಲ್ಲಿರುತ್ತಿತ್ತು? ಈಗಲೇ ಸಿದ್ದರಾಮಯ್ಯಗೆ ನೆಲೆ ಇಲ್ಲ, ಇನ್ನೂ ನೆಲೆ ಹೋಗುತ್ತದೆ. ಬಿಜೆಪಿಯು ಆರ್‌ಎಸ್‌ಎಸ್‌ನ ದೇಶಭಕ್ತ ಕೂಸು ಎಂದು ಅವರು ತಿಳಿಸಿದರು.

ನಾವೆಲ್ಲ 35% ಗಿರಾಕಿಗಳು‌: ಮೈಸೂರಿನಲ್ಲಿ Siddaramaiah ಹಾಸ್ಯ ಚಟಾಕಿ

ಡಿಕೆಶಿಗೆ ತಿರುಗೇಟು

ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ಪಕ್ಷದ ಫ್ಲೆಕ್ಸ್‌ ಹರಿದ ವಿಚಾರದಲ್ಲಿ ಮುಖ್ಯಮಂತ್ರಿಗೆ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿಯದ್ದು ಗೂಂಡಾಗಿರಿ ಹೇಳಿಕೆಯಾಗಿದೆ. ಫ್ಲೆಕ್ಸ್‌ ಹರಿಯುವ ಸಂಸ್ಕೃತಿ ಬಿಜೆಪಿಗಿಲ್ಲ. ಸುಡುಗಾಡು ಫ್ಲೆಕ್ಸ್‌ ರಾಜಕಾರಣ ನಮಗೆ ಗೊತ್ತಿಲ್ಲ. ರಾಜ್ಯದಲ್ಲಿ ಗಂಡಸರು ಇವರೊಬ್ಬರೇನಾ? ನಾವು ನಮ್ಮ ವೀರ ವನಿತೆ ಹೆಣ್ಣು ಮಕ್ಕಳಿಂದ ಇವರಿಗೆ ಉತ್ತರ ಕೊಡಿಸುತ್ತೇವೆ ಎಂದು ತಿರುಗೇಟು ನೀಡಿದರು.

ಈಶ್ವರಪ್ಪ ಗರಂ

ಈಶ್ವರಪ್ಪ ದಿಢೀರನೆ ಪಕ್ಷ ಸಂಘಟನೆಗೆ ಇಳಿದ ವಿಚಾರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆದ ಕೆ.ಎಸ್‌. ಈಶ್ವರಪ್ಪ ಅವರು, ಕುಡಿದವರ ರೀತಿ ಪ್ರಶ್ನೆ ಕೇಳಿದರೆ ಉತ್ತರ ಕೊಡುವುದಿಲ್ಲ. ಸಿದ್ದರಾಮಯ್ಯರ ಗಾಳಿ ಬೀಸಿದರೆ ಮಾತ್ರ ಈ ರೀತಿಯ ಪ್ರಶ್ನೆ ಬರುತ್ತದೆ ಎಂದರು.

ಪೋಸ್ಟ್‌ ಅಂಟಿಸೋದು ಶೌರ‍್ಯ ಅಲ್ಲ, ಹೇಡಿಗಳ ಕೆಲಸ: ಸಿಎಂ ಬೊಮ್ಮಾಯಿ

ಸಚಿವ ಸ್ಥಾನ ಬರುತ್ತೇ ಹೋಗುತ್ತೇ. ಸಿದ್ದರಾಮಯ್ಯಗೆ ಕಾಂಗ್ರೆಸ್‌- ಜೆಡಿಎಸ್‌ ಎನ್ನುವ ವ್ಯತ್ಯಾಸ ಗೊತ್ತಿಲ್ಲ. ಸಿಎಂ ಸ್ಥಾನ ಸಿಗದಿದ್ದರೆ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಉಳಿಯುತ್ತಾರಾ ಕೇಳಿ. 75 ಕೋಟಿ ಖರ್ಚು ಮಾಡಿ ಸಿದ್ದರಾಮೋತ್ಸವ ಮಾಡಿದ್ದು ಪಕ್ಷದ ಹಿತಾಸಕ್ತಿಗಲ್ಲ, ಸಿದ್ದರಾಮಯ್ಯರ ವೈಯಕ್ತಿಕ ಲಾಭಕ್ಕಾಗಿ. ನನಗೆ ಪಕ್ಷ ಮುಖ್ಯ, ಅಧಿಕಾರವಲ್ಲ ಎಂದು ಅವರು ಹೇಳಿದರು.

ನನ್ನ ಪಕ್ಷ ನಿಷ್ಠೆ ಬಗ್ಗೆ ಪ್ರಶ್ನಿಸಿದರೆ ನನಗೆ ಕೋಪ ಬರುತ್ತದೆ. ನನ್ನ ಕೊನೆಯ ಉಸಿರಿರುವವರೆಗೆ ಬಿಜೆಪಿ ತೊರೆಯುವುದಿಲ್ಲ. ಪಕ್ಷದ ಹಿತದೃಷ್ಟಿಯಿಂದ ಅಹಿಂದ ಸಮಾವೇಶ ಮಾಡಲು ಮುಂದಾಗಿದ್ದೇನೆ. ವೈಯುಕ್ತಿಕ ಹಿತಾಸಕ್ತಿಗಾಗಿ ಅಹಿಂದ ಸಮಾವೇಶ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
 

Latest Videos
Follow Us:
Download App:
  • android
  • ios