ಖಂಡಿತ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಬರುತ್ತಾರೆ: ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್

ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಲ್ಲಿನ ಸಂಸ್ಕೃತಿ, ಸಚಿವ ಜಮೀರ್ ಅಹಮದ್ ಅವರ ಧೋರಣೆ ಹೊಂದಿಕೊಳ್ಳಲ್ಲ. ಹೀಗಾಗಿಯೇ ಶೆಟ್ಟರ್ ಹೊರಗೆ ಬರುತ್ತಾರೆ. ಖಂಡಿತ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ ಎಂದು ಮಾಜಿ  ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. 

Former DCM KS Eshwarappa Talks Over Jagadish Shettar At Shivamogga gvd

ಶಿವಮೊಗ್ಗ (ಡಿ.01): ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಲ್ಲಿನ ಸಂಸ್ಕೃತಿ, ಸಚಿವ ಜಮೀರ್ ಅಹಮದ್ ಅವರ ಧೋರಣೆ ಹೊಂದಿಕೊಳ್ಳಲ್ಲ. ಹೀಗಾಗಿಯೇ ಶೆಟ್ಟರ್ ಹೊರಗೆ ಬರುತ್ತಾರೆ. ಖಂಡಿತ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ ಎಂದು ಮಾಜಿ  ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಸುಸಂಸ್ಕೃತ ‌ಕುಟುಂಬ. ಹಿಂದು ಸಮಾಜ ರಕ್ತಗತ ಮಾಡಿಕೊಂಡ‌ ಕುಟುಂಬ. ಜಗದೀಶ್ ಶೆಟ್ಟರ್ ತಂದೆ ಹುಬ್ಬಳ್ಳಿ ‌ಮೇಯರ್, ಶಾಸಕರಾಗಿದ್ದರು. ಕೆಲ ಕಾರಣಗಳಿಗಾಗಿ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿದ್ದಾರೆ. 

ಆದರೆ ಅಲ್ಲಿನ ಸಂಸ್ಕೃತಿ ಶೆಟ್ಟರ್ ಅವರಿಗೆ ಸರಿ ಬರುವುದಿಲ್ಲ. ಖಂಡಿತ ಅವರು ಬಿಜೆಪಿಗೆ ಹಿಂದಿರುಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಲೆಗಳಿಗೆ ಬಾಂಬ್ ಇಟ್ಟಿರುವ ಬೆದರಿಕೆ ಕರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಾಲೆಗಳಿಗೆ ಬಾಂಬ್ ಇಟ್ಟಿದ್ದಾರೆ ಎಂಬ ಸುದ್ದಿಯನ್ನು ನೋಡಿದೆ. ಅದು ಸುಳ್ಳಾಗಲಿ ಅಂತಾ ಭಗವಂತನಲ್ಲಿ ಪ್ರಾರ್ಥನೆ ‌ಮಾಡ್ತೇನೆ. ಅದು ಏನಾದರೂ ನಿಜ ಆಗಿದ್ದರೆ ಬಾಂಬ್ ಇಟ್ಟ ರಾಷ್ಟ್ರದ್ರೋಹಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಈ ಸರ್ಕಾರ ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ಮಾತ್ರ ಚಿಂತನೆಯಲ್ಲಿ ಇದ್ದಾರೆ. 

ಯಾವತ್ತು ಜಾತಿ ಜನಗಣತಿ ಬಿಡುಗಡೆ ಮಾಡ್ತಾರೋ ಅವತ್ತೇ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕ್ಲೋಸ್: ಕೆ.ಎಸ್.ಈಶ್ವರಪ್ಪ

ಅವರಿಗೆ ಭಯೋತ್ಪಾದನೆ, ಮಕ್ಕಳ ಭವಿಷ್ಯ ಗೊತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಲಿದ್ದ ಸಿಬಿಐ ಕೇಸು ವಾಪಾಸ್ ಪಡೆದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚಾರ್ಜ್ ಶೀಟ್ ಹಾಕುವ ಸಂದರ್ಭದಲ್ಲಿ, ಜೈಲಿಗೆ ಹೋಗುವ ಭೀತಿಯಿಂದ ವಾಪಸ್ ಪಡೆದಿದ್ದಾರೆ. ರಾಹುಲ್ ಗಾಂಧಿ, ಸೋನಿಯಾಗಾಂಧಿ ಮೇಲೆ ಒತ್ತಡ ಹಾಕಿ ಸಿದ್ದರಾಮಯ್ಯ ಮೂಲಕ‌ ಪ್ರಕರಣ ಹಿಂಪಡೆದಿದ್ದಾರೆ. ಡಿಕೆ ಶಿವಕುಮಾರ್ ಲೋಕಸಭೆ ಚುನಾವಣೆಗೆ ಮೊದಲು ಜೈಲಿಗೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು. 

ಲೋಕಸಭೆ ಚುನಾವಣೆಗೆ ಮೊದಲು ಅಥವಾ ನಂತರ ಯಾವುದೇ ಕಾರಣಕ್ಕು ಈ ಸರ್ಕಾರ ಇರಲ್ಲ. ಈ ಸರ್ಕಾರ ಬಿದ್ದು ಹೋಗೋದು ಮಾತ್ರ ಗ್ಯಾರಂಟಿ. ಈ ಸರ್ಕಾರ ಆದಷ್ಟು ಬೇಗ‌ ಹೋಗಲಿ ಅಂತಾ ರಾಜ್ಯದ ಜನ ಶಾಪ ಹಾಕ್ತಿದ್ದಾರೆ ಎಂದರು. ಸಮೀಕ್ಷೆಯಂತೆ ಮಧ್ಯಪ್ರದೇಶ. ರಾಜಸ್ತಾನದಲ್ಲಿ ಬಿಜೆಪಿ ಗೆಲುವು. ಛತ್ತೀಸಗಡ  ಅತಂತ್ರ  ಇದೆ. ಬಿಜೆಪಿ ಉತ್ತರಾಖಂಡ ಗೆಲುವಿನ ಹತ್ತಿರ ಇದೆ. ತೆಲಂಗಾಣದಲ್ಲಿ ಡಿಕೆ ಶಿವಕುಮಾರಚ ಎಟಿಎಂ  ಬಳಕೆ ಆಗಿದೆ ಎಂದು ಕೇಸ್ ಈಶ್ವರಪ್ಪ ಹೇಳಿದರು.

ನಾರಾಯಣಮೂರ್ತಿ, ಮೋದಿ ಬದುಕುವುದಕ್ಕಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ: ಸಚಿವ ತಂಗಡಗಿ

ಜಮೀರ್  ಅಹ್ಮದ್ ವಿವಾದಾತ್ಮಕ  ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಈ ಎರಡು ಸಂಗತಿಗಳು ತೆಲಂಗಾಣ ದಲ್ಲಿ ಪರಿಣಾಮ ಬೀರಿದೆ. ಇದರಿಂದ  ಕಾಂಗ್ರೆಸ್ ಗೆ  ಒಂದಿಷ್ಟು   ಕ್ಷೇತ್ರಗಳು ಬರಲಿದೆ. ತೆಲಂಗಾಣದಲ್ಲಿ  ರಾಜ್ಯದ  ದುಡ್ಡು  ಬಳಕೆ ಆಗಿದೆ. ಕೆಂಪಣ್ಣ  ಭೂತ ಎಬ್ಬಿಸಿದ್ದೆ  ಕಾಂಗ್ರೆಸ್  ಪಕ್ಷ . ರಾಜ್ಯದಲ್ಲಿ  ಸುಳ್ಳು ಸುದ್ದಿ ಹಬ್ಬಿಸಿದ್ಧರು.‌ ಬಿಜೆಪಿ ಮೇಲೆ 40 ಪರ್ಸೇಂಟ್ ವಿನಾಕಾರಣ ಆರೋಪ ಮಾಡಲಾಗಿದೆ. ಅದನ್ನು ಸಾಬೀತು ಪಡಿಸಲು ಕಾಂಗ್ರೆಸ್ ಮತ್ತು ಕೆಂಪಣ್ಣಗೆ ಸಾಧ್ಯವಾಗಿಲ್ಲ. ಈಗ ಕೆಂಪಣ್ಣ  ಸತ್ಯ ಹರಿಶ್ಚಂದ್ರ ಸಾಬೀತು ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ  ದೇಶದಲ್ಲಿ ಮಣ್ಣು ಮುಕ್ಕುತ್ತದೆ. ಕಳ್ಳರ ಕೈಯಲ್ಲಿ ಬೀಗ ಕೊಟ್ಪಂತಾಗಿದೆ.‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios