ನಾರಾಯಣಮೂರ್ತಿ, ಮೋದಿ ಬದುಕುವುದಕ್ಕಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ: ಸಚಿವ ತಂಗಡಗಿ

ನಾರಾಯಣಮೂರ್ತಿ, ಮೋದಿ ಬದುಕುವುದಕ್ಕಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ. ಬಡವರು ಜನ ಸಾಮಾನ್ಯರು ಬದುಕಬೇಕಾಗಿದೆ. ಅದಕ್ಕಾಗಿ ಗ್ಯಾರಂಟಿ ಯೋಜನೆ ನೀಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

minister shivaraj tangadagi reaction on infosys narayana murthy statement about congress guarantee issue gvd

ಕೊಪ್ಪಳ (ಡಿ.01): ನಾರಾಯಣಮೂರ್ತಿ, ಮೋದಿ ಬದುಕುವುದಕ್ಕಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ. ಬಡವರು ಜನ ಸಾಮಾನ್ಯರು ಬದುಕಬೇಕಾಗಿದೆ. ಅದಕ್ಕಾಗಿ ಗ್ಯಾರಂಟಿ ಯೋಜನೆ ನೀಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತೆಲಂಗಾಣದಲ್ಲಿ ಕಾಂಗ್ರೆಸ್ 72 ಸ್ಥಾನ ಗೆಲ್ಲಲಿದೆ. ನಮ್ಮ ರಾಜ್ಯ ಐದು ಗ್ಯಾರಂಟಿ ಯೋಜನೆ ನಾಲ್ಕು ಜಾರಿ ಮಾಡಲಾಗಿದೆ. ತೆಲಂಗಾಣದಲ್ಲಿ ಆರು ಗ್ಯಾರಂಟಿ ಯೋಜ‌ನೆ ಘೋಷಣೆ ಮಾಡಲಾಗಿದೆ. ಜನ ಕಾಂಗ್ರೆಸ್ ಪರವಾಗಿ ಇದ್ದಾರೆ. ಚುನಾವಣೋತ್ತರ ಸಮಿಕ್ಷೆಗಳು ಇದ್ದರೂ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಿತ್ತಿಕೊಂಡು ಹೋಗುತ್ತದೆ ಎಂದರು.

ಈಶ್ವರಪ್ಪ ಕಾಂಗ್ರೆಸ್ಸಿಗೆ ನೆಲೆ ಇಲ್ಲ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಅವರು ಮೊದಲು ಈಶ್ವರಪ್ಪ ಶಿವಮೊಗ್ಗದಲ್ಲಿ ನೆಲೆ ಕಂಡುಕೊಳ್ಳಲಿ. ಅವರಿಗೆ ಟಿಕೆಟ್ ಇಲ್ಲ. ಇನ್ನೇನು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದರು. ಜನಾರ್ಧನರಡ್ಡಿ ಸೋನಿಯಾ ಗಾಂಧಿಗೆ ನಾನು ತಲೆ ಬಾಗುವುದಿಲ್ಲ ಎಂಬ ಹೇಳಿಕೆಯ ವಿಚಾರವಾಗಿ ನಾವೇನು ಅವರಿಗೆ ತಲೆ ಬಾಗು ಎಂದು ಹೇಳಿಲ್ಲ ಎಂದರು.

ಡಿಕೆ ಶಿವಕುಮಾರ ವಿರುದ್ದ ಪ್ರಕರಣವನ್ನು ಸಿಬಿಐನಿಂದ ಹಿಂಪಡೆದ ವಿಚಾರವಾಗಿ ಇದು ಹಿಂದಿನ ಬಿಜೆಪಿಯವರು ಕ್ರಮ ಬದ್ದವಾಗಿ ಸಿಬಿಐಗೆ ವಹಿಸಿದ್ದಿಲ್ಲ. ಸಚಿವ ಸಂಪುಟದಲ್ಲಿ ಈ ಕುರಿತು ಕೂಲಂಕೂಷವಾಗಿ ಚರ್ಚೆಯಾಗಿ ನಿರ್ಧರಿಸಲಾಗಿದೆ. ನಾಗೇಂದ್ರ ಮೇಲಿನ ಪ್ರಕರಣ ಹಿಂಪಡೆದಿಲ್ಲ ಎಂಬ ಜನಾರ್ಧನರಡ್ಡಿ ರಡ್ಡಿ ಹೇಳಿಕೆ ವಿಚಾರ. ನಮ್ಮ ನಾಗೇಂದ್ರ ಬಗ್ಗೆ ಜನಾರ್ಧನರಡ್ಡಿ ವಿಚಾರ ಮಾಡೋದು ಬೇಡ. ಅವರಿಗೆ ನಾಗೇಂದ್ರ ಪ್ರಕರಣದಿಂದಾರೂ ಬಚಾವೊ ಆಗಬಹುದು ಎಂದುಕೊಂಡಿದ್ದಾರೆ ಎಂದು ತಿಳಿಸಿದರು.

ಯಾವತ್ತು ಜಾತಿ ಜನಗಣತಿ ಬಿಡುಗಡೆ ಮಾಡ್ತಾರೋ ಅವತ್ತೇ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕ್ಲೋಸ್: ಕೆ.ಎಸ್.ಈಶ್ವರಪ್ಪ

ಆಂದ್ರಕ್ಕೆ ನದಿ ಮೂಲಕ ನೀರು ಬಿಟ್ಟಿರುವ ವಿಚಾರವಾಗಿ ಆಂಧ್ರದವರು ತಮ್ಮ ಕೋಟಾ ನೀರು ತೆಗೆದುಕೊಂಡು ಹೋಗಿದ್ದಾರೆ. ಈಗ ಜಲಾಶಯಕ್ಕೆ ಒಳಹರಿವು ಇಲ್ಲ. ಒಳಹರಿವು ಬಂದ ನಂತರ ವಿಜಯನಗರ ಕಾಲುವೆಗಳಿಗೆ ನೀರು ಬಿಡುವ ಕುರಿತು ಚರ್ಚಿಸಲಾಗುವುದು ಎಂದು ತಂಗಡಗಿ ಹೇಳಿದರು. ವೃದ್ದನ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಈ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ನಮ್ಮ ಎಸ್ಪಿಯವರನ್ನು ಕಳುಹಿಸಿದ್ದೇವೆ. ಹಲ್ಲೆ ಮಾಡಿದವರ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು. 

Latest Videos
Follow Us:
Download App:
  • android
  • ios